Monday, May 4, 2026
Monday, May 4, 2026

Recruitment Application for Various Posts ಆರೋಗ್ಯ ಇಲಾಖೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಅರ್ಜಿ ವಿತರಣೆ

Date:

Recruitment Application for Various Posts ಇಎನ್‍ಟಿ ಸರ್ಜನ್, ಜನರಲ್ ಫಿಸಿಷಿಯನ್, ಸೈಕಿಯಾಟ್ರಿ ಹಾಗೂ ವೈದ್ಯರ ಹುದ್ದೆಗಳಿಗೆ ದಿ: 15-07-2023 ರಂದು ಹಾಗೂ ನೇತ್ರ ಸಹಾಯಕರು, ಆಡಿಯೋಮೆಟ್ರಿಕ್ ಅಸಿಸ್ಟೆಂಟ್, ತಾಲ್ಲೂಕು ಮೇಲ್ವಿಚಾರಕರು, ಕಿ.ಮ.ಆ ಸಹಾಯಕಿಯರು, ಶುಶ್ರೂಷಕಿಯರು, ಕಿ.ಪು.ಆ.ಸಹಾಯಕರ ಹುದ್ದೆಗಳಿಗೆ ದಿ: 18-07-2023 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಅರ್ಜಿ ನಮೂನೆಗಳನ್ನು ಎನ್‍ಹೆಚ್‍ಎಂ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಬಿಹೆಚ್‍ರಸ್ತೆ, ಶಿವಮೊಗ್ಗ ಇಲ್ಲಿ ವಿತರಿಸಲಾಗುವುದು. ಹಾಗೂ ಅದೇ ದಿನ ಎಲ್ಲಾ ಹುದ್ದೆಯ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಸಂಜೆ 5.30 ರವರೆಗೆ ನಡೆಸಲಾಗುತ್ತದೆ.

ತಜ್ಞ ವೈದ್ಯರು ಮತ್ತು ವೈದ್ಯರು 70 ವರ್ಷಕ್ಕಿಂತ ಕಡಿಮೆ ಇದ್ದು ದೈಹಿಕವಾಗಿ ಎಲ್ಲಾ ಕರ್ತವ್ಯಗಳನ್ನು ನಿಭಾಯಿಸಲು ಅರ್ಹರಿರಬೇಕು. ಮತ್ತು ದೈಹಿಕ ಪ್ರಮಾಣ ಪತ್ರ ನೀಡುವುದು. ಕೆಎಂಸಿಯ ನೋಂದಣಿಯನ್ನು ಹೊಂದಿರತಕ್ಕದ್ದು. ಹಾಗೂ ಸರ್ಕಾರದ ನಿಯಮಾವಳಿಯಂತೆ ಎನ್‍ಹೆಚ್‍ಎಂ/ಎನ್‍ಯುಹೆಚ್‍ಎಂ ಮಾರ್ಗಸೂಚಿಯಂತೆ ಹುದ್ದೆವಾರು ವಯೋಮಿತಿ ಪರಿಗಣಿಸಲಾಗುವುದು.

ಹುದ್ದೆಗಳಿಗೆ ನಮೂದಿಸಿರುವ ವೇತನದಲ್ಲಿ ತಜ್ಞವೈದ್ಯರಿಗೆ ಮತ್ತು ವೈದ್ಯರಿಗೆ ಆದಾಯ ತೆರಿಗೆ ಹಾಗೂ ಉಳಿದ ಹುದ್ದೆಗಳಿಗೆ ಭವಿಷ್ಯ ನಿಧಿ/ವೃತ್ತಿ ತೆರಿಗೆ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವ ಪ್ರಕಾರ ತೆರಿಗೆ ಇತ್ಯಾದಿ ಕಟಾವಣೆ ಮಾಡಲಾಗುವುದು.

Recruitment Application for Various Posts ಎನ್‍ಹೆಚ್‍ಎಂ/ಎನ್‍ಯುಹೆಚ್‍ಎಂ ಮಾರ್ಗಸೂಚಿಯಂತೆ ನೇಮಕಾತಿಯ ಮೆರಿಟ್ ಕಂ ರೋಸ್ಟರ್ ಆಧಾರದ ಮೇಲಿನ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಹುದ್ದೆಯ ಸ್ವಯಂ ದೃಢೀಕರಿಸಿದ ದಾಖಲೆಗಳ ನಕಲು ಪ್ರತಿ, ಇತ್ತೀಚಿನ ಭಾವಚಿತ್ರ, 2-5 ವರ್ಷಘಳ ಅನುಭವ ಪ್ರಮಾಣ ಪತ್ರ, ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಖಾಯಂ ವಿಳಾಸ ಹಾಗೂ ಕಿ.ಪು.ಆ ಸಹಾಯಕರ ಹುದ್ದೆಗೆ ಸಂಬಂಧಿಸಿದಂತೆ ವಾಸಸ್ಥಳದ ಬಗ್ಗೆ ಪಾಲಿಕೆ/ಸಂಬಂಧಿಸಿದ ಪಂಚಾಯತ್‍ನಿಂದ ದೃಢೀಕರಣ ಪತ್ರ ಮತ್ತು ಸ್ವವಿವರದೊಂದಿಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ: 08182-200337 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...