SN Channabasappa ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್. ಅಲ್ಪಸಂಖ್ಯಾತರ ಓಲೈಕೆಗಾಗಿ ಸಿದ್ದರಾಮಯ್ಯನವರು ಈ ಬಜೆಟ್ ಅನ್ನು ಮಂಡಿಸಿದ್ದಾರೆ
ಎಂದು ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪ ಅವರು ಹೇಳಿದ್ದಾರೆ.
ಸನ್ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿ ಆದಂತಹ ಸಂದರ್ಭದಲ್ಲಿ ಅನುಷ್ಠಾನಕ್ಕೆ ತಂದಿದ್ದ 7.25 ಯೋಜನೆಯನ್ನು ಕೈ ಬಿಟ್ಟಿರುವಂಥದ್ದು ಸಾಮಾನ್ಯ ವರ್ಗದ ಜನರ ಬದುಕಿಗೆ ಕೊಳ್ಳಿ ಇಟ್ಟಂತಹ ಬಜೆಟ್.ಅಭಿವೃದ್ಧಿ ಹೀನವಾದಂತಹ ಬಜೆಟ್ ಇದಾಗಿದೆ. ಅಭಿವೃದ್ಧಿಯ ಬಗ್ಗೆ ಯಾವುದೇ ಯೋಚನೆಯನ್ನು ಮಾಡದ ಈ ಸರ್ಕಾರವು ಕೇವಲ ತಮ್ಮ ವೈಫಲ್ಯಗಳನ್ನ ಮರೆಮಾಚಿ ಹಿಂದೆ ಇದ್ದಂತಹ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ದೂಷಿಸುತ್ತಿದೆ. ಬಜೆಟ್ ನ ಪವಿತ್ರತೆಯನ್ನು ಹಾಳು ಮಾಡಿದ್ದಾರೆ ಎಂದು ಹೇಳಿದ್ದಾರೆ.
SN Channabasappa ಕೇವಲ ಗ್ಯಾರೆಂಟಿಗಳಿಗೆ ಹಾಗೂ ಬೆಂಗಳೂರಿಗೆ ಸೀಮಿತವಾಗಿರುವಂತಹ ಈ ಬಜೆಟ್, ಯಾವುದೇ ರೀತಿಯ ದೂರ ದೃಷ್ಟಿ ಇಲ್ಲದ ಕುರುಡು ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.