Friday, October 4, 2024
Friday, October 4, 2024

Protest in Chikkamagalur ರಾಹುಲ್ ಗಾಂಧಿ ಅನರ್ಹತೆ ಪ್ರ ಕರಣ ದ್ವೇಷಾಧಾರಿತ: ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ

Date:

Protest in Chikkamagalur ರಾಹುಲ್‌ಗಾಂಧಿಯನ್ನು ರಾಜಕೀಯ ದ್ವೇಷದಿಂದ ಸಂಸದರ ಸ್ಥಾನದಿಂದ ಅನರ್ಹಗೊಳಿಸಲು ಹುನ್ನಾರ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂ ಡರು ನಗರದ ಗಾಂಧಿ ಪ್ರತಿಮೆ ಎದುರು ದಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರುಗಳು ರಾಹುಲ್‌ಗಾಂದಿಯವರು ಕೋಲಾರ ಸಮೀಪ ಚುನಾವಣಾ ರ‍್ಯಾಲಿ ವೇಳೆಯಲ್ಲಿ ಮೋದಿ ಎಂಬ ಹೆಸರಿನವರು ದೇಶವನ್ನು ಲೂಟಿ ಮಾಡಿದವರು ಎಂದಿದ್ದರು.

ಆದರೆ ಕೆಲವು ಮಂದಿ ಕುಂಬಾಳ ಕಾಯಿ ಕಳ್ಳವೆಂದರೆ ತಾವೆಂದು ಭಾವಿಸಿ ಅವರ ವಿರುದ್ಧ ಕೇಸು ದಾಖಲಿ ಸಿರುವುದು ಸರಿಯಲ್ಲ ಎಂದರು.

ದೇಶದಲ್ಲಿ ಲಲಿತ ಮೋದಿ ಐಪಿಎಲ್‌ನಲ್ಲಿ ಹಾಗೂ ನೀರವ್ ಮೋದಿ ಬ್ಯಾಂಕ್ ಹಗರಣದಲ್ಲಿ ಕೋಟಿಗಟ್ಟಲೇ ಹಣವನ್ನು ಲೂಟಿಗೈದು ದೇಶಬಿಟ್ಟು ತೆರಳಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳದ ಕೆಲವು ವಿರೋಧಿಗಳು ರಾಹುಲ್‌ಗಾಂಧಿಯವರ ವಿರುದ್ಧ ಪ್ರಕರಣ ದಾಖಲಿಸಿ ಲೋಕಸಭಾ ಸದಸ್ಯ ಸ್ಥಾನಕ್ಕೆ ಧಕ್ಕೆ ತಂದಿರುವುದು ನಿಜವಾಗಿ ಸತ್ಯಕ್ಕೆ ದೂರವಾದುದು ಎಂದರು.
ಭಾರತಾದ್ಯ0ತ ಮೋದಿ ಎಂಬ ಹೆಸರಿನಲ್ಲಿ ಅನೇಕ ಮಂದಿಗಳಿದ್ದರೆ ಲೂಟಿಕೋರರ ಹೆಸರಿನಲ್ಲಿ ಮೋದಿ ಎಂಬುವವರ ಹೆಸರಿದೆ. ಇದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಈ ನಡುವೆ ಬಿಜೆಪಿಯ ಕೇಂದ್ರ ಸರ್ಕಾರ ಸಹ ಸುಪ್ರೀಂ ಕೋರ್ಟ್ ನ್ಯಾಯವನ್ನು ಖರೀದಿಸುವ ಯತ್ನಕ್ಕೆ ತೆರಳುವ ಮೂಲಕ ರಾಗಾ ಅವರನ್ನು ಲೋಕ ಸಭಾ ಸದಸ್ಯದಿಂದ ಅನರ್ಹಗೊಳಿಸಿರುವುದಕ್ಕೆ ಮುಂದಾಗಿರುವುದು ಸೂಕ್ತವಲ್ಲ ಎಂದರು.

ಈಗಾಗಲೇ ರಾಹುಲ್‌ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಕೈಗೊಳ್ಳುವ ಮೂಲಕ ಜನರೊಂದಿಗೆ ಬೆರೆತು, ಪ್ರೀತಿಯ ಅಪ್ಪುಗೆ ಪಡೆದು, ಕಷ್ಟಕರ್ಪಣ್ಯಗಳನ್ನು ಆಲಿಸಿದ್ದಾರೆ. ಇಂತಹ ಮಹಾನ್ ನಾಯಕತ್ವದ ವಿಚಾರದಲ್ಲಿ ಬಿಜೆಪಿ ಕೋಟಿಗಟ್ಟಲೇ ಹಣವ್ಯಯಿಸಿ ಅಪಪ್ರಚಾರಗೊಳಿಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಯಾವ ರೀತಿಯಲ್ಲಿ ಅಧಿಕಾರ ಪಡೆಯಿತು, ಅದೇ ಮಾದರಿಯಲ್ಲಿ ಲೋಕಸಭಾದಲ್ಲಿ ಅಧಿಕಾರ ಪಡೆದು ರಾಹುಲ್‌ಗಾಂಧಿಯವರು ಪ್ರಧಾನಿ ಮಂತ್ರಿ ಯಾಗಲಿದ್ದಾರೆ. ಇದನ್ನು ಸಹಿಸಿಕೊಳ್ಳಲಾರದ ಕೆಲವು ವಿರೋಧಿಬಣಗಳು ತೇಜೋವಧೆಗೆ ಮುಂದಾಗಿ ಕುತಂತ್ರ ನಡೆಸುತ್ತಿದ್ದಾರೆ ಎಂದು ದೂರಿದರು.

ರಾಹುಲ್‌ಗಾಂಧಿಯವರ ಬಗ್ಗೆ ಇಷ್ಟೆಲ್ಲಾ ಅಪಪ್ರಚಾರ ತೊಡಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರಿಂ ತೀರ್ಮಾನ ವನ್ನು ಮೇಲ್ಪಟ್ಟು ಪ್ರಜಾತಂತ್ರದಲ್ಲಿ ಮತದಾರರ ಗಮನಸೆಳೆಯಲು ರಾಜ್ಯಾದ್ಯಂತ ಇಂದು ಪ್ರತಿಭಟನೆ ನಡೆಸಲಾ ಗುತ್ತಿದೆ ಎಂದು ಹೇಳಿದರು.

Protest in Chikkamagalur ಈ ಸಂದರ್ಭದಲ್ಲಿ ಪಕ್ಷದ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಿವಾನಂದಸ್ವಾಮಿ, ಕೆಪಿಸಿಸಿ ರಾಜ್ಯ ವಕ್ತಾರ ಹೆಚ್.ಹೆಚ್.ದೇವರಾಜ್, ಮುಖಂಡರುಗಳಾದ ಕೆ.ಮಹಮ್ಮದ್, ರವೀಶ್ ಕ್ಯಾತನಬೀಡು, ತನೋಜ್‌ನಾಯ್ಡು, ಸಿ.ಎನ್.ಅಕ್ಮಲ್, ರೇಖಾ ಹುಲಿಯಪ್ಪಗೌಡ, ಹಿರೇಮಗಳೂರು ರಾಮಚಂದ್ರ, ಸುರೇಖ ಸಂಪತ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Backward Classes Welfare Department ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ

Backward Classes Welfare Department ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ...

Klive Special Article ನವರಾತ್ರಿ ಎರಡನೇ ದಿನ.ದೇವಿಯ ಶ್ರೀಬ್ರಹ್ಮಚಾರಿಣಿ ರೂಪದಲ್ಲಿ ಆರಾಧನೆ. ...

Klive Special Article "ದಧಾನಾಂ ಕರಪದ್ಮಾಭ್ಯಾಂಅಕ್ಷಮಾಲಾ ಕಮಂಡಲೂ/ದೇವಿ ಪ್ರಸೀದತು ಮಯಿಬ್ರಹ್ಮಚಾರಿಣ್ಯನುತ್ತಮಾ//ಮೊದಲನೆಯ ದಿನ...

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...