Thursday, December 18, 2025
Thursday, December 18, 2025

Employees’ Provident Fund Organisation ಇಪಿಎಫ್ಓ ಉದ್ಯೋಗಿಗಳಿಗೆ ಪಿಂಚಣಿ ಆಯ್ಕೆ ತಿಳಿಸಲು ಗಡುವು

Date:

Employees’ Provident Fund Organisation ಇಪಿಎಫ್‌ಒ ಉದ್ಯೋಗಿಗಳಿಗೆ ಹೆಚ್ಚಿನ ವೇತನದಲ್ಲಿ ಪಿಂಚಣಿ ಪಡೆಯಲು ಆಯ್ಕೆಗಳನ್ನು ಹದಿನೈದು ದಿನಗಳಲ್ಲಿ ಸಲ್ಲಿಸಲು ಕೊನೆಯ ಅವಕಾಶವನ್ನು ಒದಗಿಸುತ್ತದೆ ಮತ್ತು ಆನ್‌ಲೈನ್‌ನಲ್ಲಿ ವೇತನ ವಿವರಗಳನ್ನು ಅಪ್‌ಲೋಡ್ ಮಾಡಲು ಉದ್ಯೋಗದಾತರಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ.

ಅರ್ಹ ಪಿಂಚಣಿದಾರರು/ಸದಸ್ಯರು ಎದುರಿರುಸುತ್ತಿರುವ ಯಾವುದೇ ತೊಂದರೆಯನ್ನು ತೆಗೆದುಹಾಕಲು 15 ದಿನಗಳ ಕೊನೆಯ ಅವಕಾಶವನ್ನು ಹಾಗೂ ಉದ್ಯೋಗಿಗಳಿಂದ ಆಯ್ಕೆ/ಜಂಟಿ ಆಯ್ಕೆಗಳ ಮೌಲ್ಯೀಕರಣಕ್ಕಾಗಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಜುಲೈ 17ರವರೆಗೆ ವಿಸ್ತರಿಸಲಾಗಿದೆ.

Employees’ Provident Fund Organisation ಯಾವುದೇ ಅರ್ಹ ಪಿಂಚಣಿದಾರರು/ಸದಸ್ಯರು ಕೆವೈಸಿಯ ಅಪ್‌ಡೇಟ್‌ನಲ್ಲಿನ ಯಾವುದೇ ಸಮಸ್ಯೆಯ ಕಾರಣಕ್ಕಾಗಿ ಆಯ್ಕೆ/ಜಂಟಿ ಆಯ್ಕೆಯ ಊರ್ಜಿತಗೊಳಿಸುವುದಕ್ಕಾಗಿ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವಲ್ಲಿ ತೊಂದರೆಗಳಾದಲ್ಲಿ, ತಕ್ಷಣವೇ ಪರಿಹಾರಕ್ಕಾಗಿ EPFIGMS portal or Higher Pensionary benefits on higher wages ನಲ್ಲಿ ಅಂತಹ ಕುಂದುಕೊರತೆ ವರ್ಗವನ್ನು ಆಯ್ಕೆ ಮಾಡುವ ಮೂಲಕ ದೂರು ಸಲ್ಲಿಸಬಹುದು. ಮುಂದಿನ ಕ್ರಮಕ್ಕಾಗಿ ಇಂತಹ ಕುಂದುಕೊರತೆಯ ಪರಿಹಾರಕ್ಕಾಗಿ ಸರಿಯಾದ ದಾಖಲೆಯನ್ನು ಇದು ಖಚಿತಪಡಿಸುತ್ತದೆ.

ಉದ್ಯೋಗದಾತರು ಮತ್ತು ಉದ್ಯೋಗದಾತರ ಸಂಘಗಳಿಂದ ಅನೇಕ ಪ್ರಾತಿನಿಧ್ಯಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಅರ್ಜಿದಾರರ ಪಿಂಚಣ ದಾರರು/ಸದಸ್ಯರ ವೇತನ ವಿವರಗಳನ್ನು ಅಪ್‌ಲೋಡ್ ಮಾಡಲು ಸಮಯವನ್ನು ವಿಸ್ತರಿಸಲು ಕೇಳಿದ್ದು, ಅದರಂತೆ ಸೆ.೩೦ ರೊಳಗೆ ವೇತನ ವಿವರಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಉದ್ಯೋಗದಾತರಿಗೆ ಮೂರು ತಿಂಗಳ ಅವಧಿಯನ್ನು ನೀಡಲಾಗಿದೆ ಎಂದು ಇಪಿಎಫ್ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...