Monday, May 4, 2026
Monday, May 4, 2026

Environmental Concern ಮಕ್ಕಳಿಗೆ ರಂಗದ ಮೂಲಕ ಪರಿಸರ‌ ಕಾಳಜಿ ಮೂಡಿಸಬೇಕು-ಡಾ.ಶೈಲಜಾ

Date:

Environmental Concern ನಮ್ಮ ಹಳ್ಳಿ ಥಿಯೇಟರ್ (ರಿ) ಸಾಂದೀಪನಿ ಪಬ್ಲಿಕ್ ಶಾಲೆ ಮತ್ತು ರಂಗಾಯಣ ಶಿವಮೊಗ್ಗ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಕ್ಕಿ ಕಥೆ ನಾಟಕ ಪ್ರದರ್ಶನದಲ್ಲಿ ರಂಗಾಯಣದ ಆಡಳಿತಾಧಿಕಾರಿಗಳಾದ ಡಾ. ಶೈಲಜಾ ಎ.ಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಕ್ಕಳಿಗೆ ರಂಗಭೂಮಿಯ ಮೂಲಕ  ಪರಿಸರ ಕಾಳಜಿಯನ್ನು ಮೂಡಿಸುವ ನಿಟ್ಟಿನಲ್ಲಿ ಇಂದು ನಾವು ಯೋಚಿಸಬೇಕಾಗಿದೆ. ಶೈಕ್ಷಣಿಕವಾಗಿ ಪಠ್ಯದ ಮೂಲಕ ಈಗಾಗಲೇ ಮಕ್ಕಳಿಗೆ ಪರಿಸರದ ಬಗ್ಗೆ ಆರಿವು ಮೂಡಿಸಲಾಗುತ್ತಿದೆ. ರಂಗಾಯಣ ಶಿವಮೊಗ್ಗ ನಾಟಕಗಳ ಮೂಲಕ ಮಕ್ಕಳಲ್ಲಿ ಇಂತಹ ಕಾಳಜಿಯನ್ನು ಬೆಳಸುತ್ತಿದೆ. ಹಕ್ಕಿ ಕಥೆ ನಾಟಕ ಪ್ರಕೃತಿ ಮತ್ತು ಮನುಷ್ಯನ ನಡೆವು ನಡೆಯುವ ಸಂಘರ್ಷದ ಬಗ್ಗೆ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿಕೊಡುತ್ತದೆ ಎಂದರು.

ಸಾಂದೀಪನಿ ಪಬ್ಲಿಕ್ ಶಾಲೆ ಮತ್ತು ನಮ್ಮ ಹಳ್ಳಿ ಥಿಯೇಟರ್ ಕಲಾ ತಂಡ ಜಂಟಿಯಾಗಿ ಒಂದು ಸಾವಿರ ಮಕ್ಕಳಿಗೆ ನಾಟಕ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Environmental Concern ಕಾರ್ಯಕ್ರಮದಲ್ಲಿ ಸಾಂದೀಪನಿ ಪಬ್ಲಿಕ್ ಶಾಲೆಯ  ನಿರ್ದೇಶಕರಾದ ಶ್ರೀ ರಾಜಶೇಖರ್ ಮತ್ತು ನಮ್ಮ ಹಳ್ಳಿ ಥಿಯೇಟರ್ ತಂಡದ ಅಧ್ಯಕ್ಷರರಾದ ಚೇತನ್ ಕುಮಾರ್ ಸಿ ರಾಯನಹಳ್ಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...