Thursday, May 14, 2026
Thursday, May 14, 2026

ಸಂಚಾರಿ ನಿಯಮ ಉಲ್ಲಂಘನೆ , ಮನೆಬಾಗಿಲಿಗೇ ನೋಟಿಸ್.!

Date:

ಸಂಚಾರ ನಿಯಮ ಉಲ್ಲಂಘಿಸುವವರ ಮನೆಬಾಗಿಲಿಗೆ ನೋಟಿಸ್ ಕಳುಹಿಸುತ್ತಿದ್ದ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದುವರಿದು ದಂಡ ಸಂಗ್ರಹಕ್ಕೆ ವಾಹನ ಮಾಲೀಕರ ಮನೆಗಳಿಗೆ ಹೋಗುತ್ತಿದ್ದಾರೆ.
ಆಟೋಮೇಷನ್ ಸೆಂಟರ್ ಮೂಲಕ ಫೋಟೋ ಕ್ಲಿಕ್ಕಿಸಿ ವಾಹನ ಮಾಲೀಕರ ಮನೆಗಳಿಗೆ ನೋಟಿಸ್ ಕಳಿಸಲಾಗುತ್ತಿದೆ. ಅದರಲ್ಲಿ ಬಹುಪಾಲು ಜನ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಟ್ರಾಫಿಕ್ ಪೊಲೀಸರ ಮೂಲಕ ಅಂತವರ ಮನೆಗಳಿಗೆ ಭೇಟಿ ನೀಡಿ ದಂಡ ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಬರಲಿ ಎನ್ನುವುದೇ ಇದರ ಮೂಲ ಈಗಾಗಲೇ ನೋಟಿಸ್ ಬಂದವರು ವಿಳಂಬಮಾಡದೆ ದಂಡ ಪಾವತಿಸಿ ಎಂದು ಶಿವಮೊಗ್ಗದ ಎಸ್.ಪಿ. ಬಿ.ಎಂ. ಲಕ್ಷ್ಮೀಪ್ರಸಾದ್ ಅವರು ತಿಳಿಸಿದ್ದಾರೆ.
ಕಳೆದ ಒಂದೂವರೆ ತಿಂಗಳುಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಕೆಲಸ ಮಾಡುತ್ತಿದ್ದು ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.
ವಾಹನ ಸವಾರರು ಟ್ರಿಬ್ಬಲ್ ರೈಡಿಂಗ್, ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ಸಿಗ್ನಲ್ ನಿಯಮ ಉಲ್ಲಂಘನೆ, ಒನ್ ವೇ ಸಂಚಾರ ಹೀಗೆ ನಾನಾ ಬಗೆಯ ನಿಯಮ ಉಲ್ಲಂಘನೆ ಗಳನ್ನು ಮಾಡಿದ್ದಲ್ಲಿ ಅವರನ್ನು ಹಿಡಿದು ದಂಡ ವಿಧಿಸಲಾಗುತ್ತಿದೆ. ಈ ಬಗ್ಗೆ ಶೇ. 60ರಷ್ಟು ಜನ ತಲೆಕೆಡಿಸಿಕೊಂಡಿಲ್ಲ. ದಂಡವನ್ನು ಪಾವತಿ ಮಾಡಿಲ್ಲ. ಈ ಕಾರಣಕ್ಕಾಗಿ ಪೊಲೀಸರೇ ಖುದ್ದು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಶಿರಾಳಕೊಪ್ಪ;ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಶಿರಾಳಕೊಪ್ಪ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮೇ.15 ರಂದು ಬೆಳಿಗ್ಗೆ 11.00...

Kuvempu University ಕುವೆಂಪು ವಿವಿಯಲ್ಲಿ ನಾಳೆಯಿಂದ ‘ಮಾನವ-ವನ್ಯಜೀವಿ ಸಂಘರ್ಷ’ ಕುರಿತು ರಾಷ್ಟ್ರೀಯ ಸಮ್ಮೇಳನ

Kuvempu University ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿ ಮತ್ತು ನಿರ್ವಹಣಾ ಸ್ನಾತಕೋತ್ತರ ಅಧ್ಯಯನ...

Karnataka Sanga ಕರ್ನಾಟಕ ಸಂಘದಲ್ಲಿ ಇಬ್ಬರು ಹಿರಿಯ ಮಹನೀಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

Karnataka Sanga ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ದಿನಾಂಕ 15 ಮೇ 2026ರ...