Tuesday, August 25, 2026
Tuesday, August 25, 2026

Congress Guarantee ಗ್ಯಾರಂಟಿಗಳ ಬಗ್ಗೆ ಖಡಕ್ ಆಗಿ ಮಾತಾಡಿದ ರಾಜಾಹುಲಿ

Date:

Congress Guarantee ಇದುವರೆಗೆ ಐದು ಗ್ಯಾರಂಟಿಗಳ ಬಗ್ಗೆ ಭರವಸೆ ಕೊಟ್ಟಂತೆ ಕಾಂಗ್ರೆಸ್ ಪಕ್ಷ ಒಂದನ್ನ ಬಿಟ್ಟರೆ ಮಿಕ್ಕವನ್ನ ಪೂರೈಸಿಲ್ಲ.

ಬರುವ ಬಜೆಟ್ ಅಧಿವೇಶನಕ್ಕೆ ಮುಂಚೆಯೇ ಉಳಿದ ಭರವಸೆಗಳನ್ನ ಈಡೇರಿಸಬೇಕು.
ಇಲ್ಲದಿದ್ದರೆ ವಿಧಾನ ಸೌಧದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರಕ್ಕೆ ಮಾತಿನ ಈಟಿ ತಿವಿದಿದ್ದಾರೆ.

ದಾವಣಗೆರೆಯಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು
ಮಾತನಾಡುತ್ತಿದ್ದರು.
ಜುಲೈನ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಮುಗಿದ ತಕ್ಷಣ ಬೆಂಗಳೂರಿನ ಗಾಂಧಿ ಪ್ರತಿಮೆಯ ಬಳಿ ಗ್ಯಾರಂಟಿ ಭರವಸೆ ಈಡೇರಿಸಲು ಆಗ್ರಹಿಸಿ ಸತ್ಯಾಗ್ರಹ ಹೂಡುತ್ತೇವೆ.
ಮುಂದುವರೆದು ಮಾತನಾಡಿದ ಯಡಿಯೂರಪ್ಪನವರು ಉಚಿತ ಅಕ್ಕಿ
ವಿತರಣೆಯ ಬಗ್ಗೆಯೂ ಪ್ರಸ್ತಾಪಿಸಿದರು.
ಕಾಂಗ್ರೆಸ್ ಪಕ್ಷ
ಅನ್ನಭಾಗ್ಯ ಗ್ಯಾರಂಟಿಯಲ್ಲಿ
ಹತ್ತು ಕೆಜಿ ಉಚಿತ ಅಕ್ಕಿ ಎಂದು ಘೋಷಿಸಿದೆ. ಆದರೆ ಈಗಾಗಲೇ ಕೇಂದ್ರದಿಂದ ಐದು‌ ಕೆಜಿ‌ ಅಕ್ಕಿ ಉಚಿತವಾಗಿ ಸರಬರಾಜಾಗುತ್ತಿದೆ.
Congress Guarantee ಅಂದರೆ ಗ್ಯಾರಂಟಿ ಪ್ರಕಾರ ರಾಜ್ಯ ಸರ್ಕಾರವು ಸ್ವಂತವಾಗಿ ಹತ್ತು ಕೆಜಿ ಸೇರಿಸಿ ಒಟ್ಟು ಹದಿನೈದು ಕೆಜಿ ಅಕ್ಕಿ ನೀಡಬೇಕು. ಆಗದಿದ್ದರೆ ಅಧಿಕಾರ ಬಿಟ್ಟು ಕೆಳಗಿಳಿಯಲಿ ಎಂದು ಮಾಜಿಮುಖ್ಯ ಮಂತ್ರಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...