world Environment Day ಪರಿಸರ ದಿನಾಚರಣೆ ಎಂದರೆ ಸಸಿಗಳನ್ನು ನೆಡುವುದು
ಮಾತ್ರ ಅಲ್ಲ, ವಾಯುಮಾಲಿನ್ಯ ತಡೆಗಟ್ಟುವುದೂ ಪರಿಸರ ರಕ್ಷಣೆಯ ಒಂದು
ಭಾಗ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.
ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಮತ್ತು ಕಾರ್ಯನಿರತ
ಪತ್ರಕರ್ತರ ಸಂಘ ಹಾಗೂ ಪತ್ರಿಕಾ ವಿತರಕರ ಸಂಘ ಇವುಗಳ
ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಪರಿಸರ ದಿನಾಚರಣೆ ಅಂಗವಾಗಿ
ವಿವಿಧ ದಿನಪತ್ರಿಕಾ ವಿತರಕರುಗಳಿಗೆ ಸೈಕಲ್ ವಿತರಿಸಿದ ನಂತರ ಅವರು
ಮಾತನಾಡಿದ ಅವರು, ಪತ್ರಿಕಾ ವಿತರಕರೂ ಪತ್ರಿಕೆಯ ಒಂದು ಭಾಗ ಎಂದು
ತಿಳಿದು ಅವರಿಗೆ ನೆರವು, ಧೈರ್ಯ ತುಂಬಿರುವುದು ಬೇರೆಯವರಿಗೆ
ಪ್ರೇರಣೆಯಾಗಲಿ. ಮಳೆ, ಗಾಳಿ, ಚಳಿ ಎನ್ನದೇ ವರ್ಷವಿಡೀ ಕಷ್ಟದ ಜೀವನ
ನಡೆಸುವ ವಿತರಕರ ಜೀವನದ ದಾರಿಗೆ ನಾವು ಕೈ ಜೋಡಿಸಬೇಕು ಎಂದರು.
ಬೆಂಗಳೂರು, ದೆಹಲಿಯಂಥ ಮಹಾನಗರಗಳಲ್ಲಿ ವಾಹನಗಳ
ದಟ್ಟಣೆಯಿಂದ ವಾಯುಮಾಲಿನ್ಯ ಉಂಟಾಗಿ ಪರಿಸರಕ್ಕೆ ಹಾನಿಯಾಗುತ್ತಿದೆ. ಅಸಮರ್ಥ
ವಾಹನಗಳಿಂದ ವಿಪರೀತ ಹೊಗೆಯುಗುಳುವ ವಾಹನಗಳು ಪರಿಸರವನ್ನು
ಕಲುಷಿತವನ್ನಾಗಿ ಮಾಡುತ್ತವೆ. ವಾಯುಮಾಲಿನ್ಯದಿಂದ ಅಸ್ತಮಾದಂಥ ಅನೇಕ
ಕಾಯಿಲೆಗಳು ಜನರನ್ನು ಕಾಡುತ್ತವೆ. ಇಂಥ ಸಂದರ್ಭದಲ್ಲಿ ಇಲ್ಲಿನ
ಪತ್ರಕರ್ತರ ಸಂಘ ಪರಿಸರಸ್ನೇಹಿಯಾಗಿರುವ ಸೈಕಲ್‌ಗಳನ್ನು
ವಿತರಕರಿಗೆ ನೀಡಿರುವುದು ರಾಜ್ಯಕ್ಕೇ ಮಾದರಿ ಹೆಜ್ಜೆ ಎಂದರು.
world Environment Day ಸಾಮಾಜಿಕ ಜವಾಬ್ದಾರಿ ಹೊಂದಿರುವ ಪತ್ರಕರ್ತರು ಆಯಾ ಸಂದರ್ಭದಲ್ಲಿ
ಎಚ್ಚರಿಕೆ, ಮಾಹಿತಿ ಹಾಗೂ ಸಲಹೆಗಳನ್ನು ನೀಡುತ್ತಿರುತ್ತಾರೆ. ಹೀಗೆ ಸಾಮಾಜಿಕ
ಕಳಕಳಿಯ ಜೊತೆಗೆ ಪರಿಸರ ಪ್ರೇಮವನ್ನೂ ಪೋಷಿಸುತ್ತಿರುವುದು
ಅನುಕರಣೀಯ. ಸಂಘ ಸಂಸ್ಥೆಗಳು ಪರಿಸರ ಕಾಳಜಿಯನ್ನಿಟ್ಟುಕೊಂಡರೆ
ಪರಿಸರ ಸಂರಕ್ಷಣೆ ಸಾಧ್ಯ. ನಾವು ಗಿಡ ಕಡಿಯುತ್ತೇವೆ ಬಿಟ್ಟರೆ ಗಿಡ ಬೆಳೆಸುವ
ಮನಸ್ಥಿತಿಯಿಂದ ದೂರವಾಗಿದ್ದೇವೆ ಎಂದವರು ವಿಷಾದಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ,
ವಿತರಕರು ಮಾಧ್ಯಮದವರಿಂದ ಹೊರತಾದವರು ಎಂಬ ಭಾವನೆ ಸರಿಯಲ್ಲ.
ಮುದ್ರಣಗೊಂಡ ಪತ್ರಿಕೆಗಳು ಸಕಾಲಕ್ಕೆ ಓದುಗರ ಕೈ ತಲುಪುವಲ್ಲಿ
ವಿತರಕರ ಪರಿಶ್ರಮ ಬಹಳ ಇದೆ. ಇವರೂ ಪತ್ರಿಕೆಯ ಒಂದು ಭಾಗ ಎಂದು
ತಿಳಿದು ಅವರಿಗೆ ಅಗತ್ಯ ಸೌಲಭ್ಯ ನೀಡುತ್ತಿರುವುದು ಸಂಘದ ಮಾದರಿ
ನಡೆಯಾಗಿದೆ. ಕಷ್ಟದ ಬದುಕು ನಡೆಸುತ್ತಿರುವ ಪತ್ರಿಕಾ ವಿತರಕರುಗಳಿಗೆ ಸೈಕಲ್ ವಿತರಣೆ, ವಿಮೆ ಸೌಲಭ್ಯ ಕಲ್ಪಿಸಿರುವುದು ಬೇರೆ
ಸಂಘಗಳಿಗೆ ಸ್ಫೂರ್ತಿಯಾಗಲಿ. ದಾ£ಗಳು ಕೊಡುವ ಹಣ ಪ್ರಾಮಾಣಿಕವಾಗಿ
ಬಳಕೆಯಾದರೆ ಕೊಡುವ ಕೈಗಳಿಗೇನೂ ಬರವಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಿತಾಕುಮಾರಿ ಮಾತನಾಡಿ, ಪತ್ರಿಕಾ ವಿತರಕರು
ಬೆಳಗಿನ ಜಾವವೇ ಎದ್ದು ವಿತರಣೆಗೆ ಹೋಗಬೇಕು. ಇಂಥ ಸಂದರ್ಭದಲ್ಲಿ ಪ್ರಾಣ ಹಾನಿಯಾದ ಘಟನೆಯೂ ಇಲ್ಲಿ ನಡೆದಿರುವುದು ವಿಷಾದನೀಯ.
ವಿಮೆಯಂತಹ ಸೌಲಭ್ಯವನ್ನು ಅವರಿಗೆ ಒದಗಿಸಿರುವುದು ಸಂಘದ ಸಮಾಜಮುಖೀ ಚಿಂತನೆಗೆ
ಸಾಕ್ಷಿಯಾಗಿದೆ. ಕೊರೋನಾ ಸಂದರ್ಭದಲ್ಲಿ ಪತ್ರಿಕಾ ವಿತರಕರು ಬಹಳ ಸಂಕಷ್ಟ ಅನುಭವಿಸಿದ್ದಾರೆ ಎಂದರು.
ನಗರಸಭೆ ಸದಸ್ಯ ಆರ್.ಶ್ರೀನಿವಾಸ್ ಮಾತನಾಡಿ, ಪತ್ರಿಕಾ ವಿತರಕರಿಗೂ ಕಟ್ಟಡ
ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸಬೇಕು. ಭದ್ರತೆ ಒದಗಿಸಿದರೆ
ಅವರ ಬದುಕೂ ಹಸನಾಗುತ್ತದೆ. ಪತ್ರಿಕೆಗಳು ನಮ್ಮ ನಿತ್ಯದ ಸಂಗಾತಿ.
ಅವುಗಳನ್ನು ಮನೆಗೆ ತಲುಪಿಸುವ ವಿತರಕರ ಕೆಲಸ ಸಣ್ಣದಲ್ಲ ಎಂದರು.
ಹಿರಿಯ ಪತ್ರಕರ್ತ ಎ.ಡಿ.ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಮೇಶ್ ಎನ್., ರಂಜನ್ ಹಾಜರಿದ್ದರು.
ಧರ್ಮರಾಜ್ ಸ್ವಾಗತಿಸಿದರು. ಹಿತಕರ ಜೈನ್ ಪ್ರಾಸ್ತಾವಿಕ ಮಾತನಾಡಿದರು.
ಶೈಲೇಂದ್ರ ವಂದಿಸಿದರು. ಗಣಪತಿ ಶಿರಳಗಿ ನಿರೂಪಿಸಿದರು.
ಸೈಕಲ್‌ಗಳ ದಾನಿಗಳು,ನಗರಸಭಾ ಸದಸ್ಯ ಆರ್.ಶ್ರಿನಿವಾಸ್,ತಾಲ್ಲೂಕು
ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ರಾಯಲ್‌ಬಿಲ್ರ‍್ಸ್ನ ಮಹೇಶ್
ಮತ್ತು ಜಲೀಲ್,ರಾಮಕೃಷ್ಣ ಶಾಲೆಯ ದೇವರಾಜ್,ಅರಣ್ಯ ಇಲಾಖೆ ನೌಕರರ
ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ
ಅನಿತಾಕುಮಾರಿ,ನಗರಸಭೆ ಹಿರಿಯ ಇಂಜಿನಿಯರ್ ಹೆಚ್.ಕೆ.ನಾಗಪ್ಪ,ನಗರಸಭೆ
ಸದಸ್ಯೆ ನಾದಿರಾಪರ್ವಿನ್ ಇವರುಗಳು ಸೈಕಲ್‌ಗಳನ್ನು ನೀಡಿದ ದಾನಿಗಳು.
ವಿವಿಧ ದಿನಪತ್ರಿಕಾ ವಿತರಕರುಗಳಿಗೆ ಶಾಸಕ ಗೋಪಾಲಕೃಷ್ಣ
ಬೇಳೂರು ಸೈಕಲ್ ಗಳನ್ನು ವಿತರಿಸಿದರು.