Saturday, December 6, 2025
Saturday, December 6, 2025

VISL Bhadravati ಭದ್ರಾವತಿ ವಿಐಎಸ್ಎಲ್ ನಿಂದ ಪರಿಸರ ಜಾಗೃತಿ ಕಾರ್ಯಕ್ರಮ

Date:

VISL Bhadravati ವಿಐಎಸ್‌ಎಲ್ ನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 05, 2023ರಂದು ಬೆಳಗ್ಗೆ 10 ಗಂಟೆಗೆ ಇಸ್ಪಾತ್ ಭವನದ ಎದುರು “ಪ್ಲಾಸ್ಟಿಕ್ ಮಾಲಿನ್ಯವನ್ನು ತೊಡೆದುಹಾಕಿ – ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು” ಎಂಬ ಧ್ಯೇಯದೊಂದಿಗೆ ಆಚರಿಸಲಾಯಿತು.

ಶ್ರೀ ಉನ್ನಿಕೃಷ್ಣನ್, ಹಿರಿಯ ಪ್ರಬಂಧಕರು (ಹಣಕಾಸು) ಅವರು ಪ್ರಾರ್ಥಿಸಿದರು. ಶ್ರೀ ಡಿ. ಲೋಕೇಶ್ವರ್, ಮಹಾ ಪ್ರಬಂಧಕರು (ಪರಿಸರ ನಿರ್ವಹಣೆ ಮತ್ತು ಸಿವಿಲ್ ಇಂಜಿನಿಯರಿಂಗ್ -ಸ್ಥಾವರ) ರವರು ವಿಶ್ವ ಪರಿಸರ ದಿನದ ಇತಿಹಾಸದ ಕುರಿತು ಸಂಕ್ಷಿಪ್ತ ಪರಿಚಯವನ್ನು ನೀಡಿದರು ಮತ್ತು ಸಭೆಯನ್ನು ಸ್ವಾಗತಿಸಿದರು.

ಶ್ರೀ ಮೋಹನ್‌ರಾಜ್ ಶೆಟ್ಟಿ, ಮಹಾಪ್ರಬಂಧಕರು (ನಗರಾಡಳಿತ) ರವರು ಕಾರ್ಪೊರೇಟ್ ಪರಿಸರ ನೀತಿಯನ್ನು ಓದಿದರು. ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ ಅವರು ಸರ್. ಎಂ.ವಿಶ್ವೇಶ್ವರಾಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

VISL Bhadravati ಕಾರ್ಯಪಾಲಕ ನಿರ್ದೇಶಕರು ತಮ್ಮ ಭಾಷಣದಲ್ಲಿ ಪರಿಸರದ ಮೇಲೆ ಪ್ಲಾಸ್ಟಿಕ್ ಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು ಮತ್ತು ಪರಿಸರವನ್ನು ಮಾಲಿನ್ಯದಿಂದ ಮುಕ್ತವಾಗಿಡುವಲ್ಲಿ ನಾವು ಪ್ರತಿಯೊಬ್ಬರೂ ಸಕ್ರೀಯ ಪಾತ್ರವನ್ನು ವಹಿಸಿ, ಮುಂದಿನ ಪೀಳಿಗೆಗೆ ಭೂಮಿಯನ್ನು ಸುರಕ್ಷಿತವಾಗಿಡಬೇಕೆಂದು ಒತ್ತಿ ಹೇಳಿದರು. ಶ್ರೀ ಎಲ್.ಕುತಲನಾಥನ್, ಸಹಾಯಕ ಮಹಾಪ್ರಬಂಧಕರು (ವಿಜೆಲೆನ್ಸ್) ವಂದನಾರ್ಪಣೆ ಸಲ್ಲಿಸಿದರು.

ಮುಖ್ಯ ಮಹಾ ಪ್ರಬಂಧಕರು (ಸ್ಥಾವರ), ವಿಐಎಸ್‌ಎಲ್ ಕಾರ್ಮಿಕರ ಸಂಘ ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು, ಹಿರಿಯ ಅಧಿಕಾರಿಗಳು, ನೌಕರರು ಮತ್ತು ಗುತ್ತಿಗೆ ನೌಕರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...