Ahoratri Dharani ರೈತನ ಸಾಗುವಳಿ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ನಾಶಪಡಿಸಿದ ಅಧಿಕಾರಿಗಳು ಹಾಗೂ ರೈತ ವಿರೋಧಿ ಸರ್ಕಾರದ ವಿರುದ್ದ ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ನೇತ್ರತ್ವದಲ್ಲಿ ಹೊಸನಗರ ತಾಲೂಕ್ ಕಛೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಡೆಸಿದರು.
ಕಚ್ಚಿಗೆಬೈಲು ಗ್ರಾಮದ ಸ.ನಂ, 31 ರಲ್ಲಿ ರೈತರು ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು, ಫಾರಂ ನಂ 57 ಅರ್ಜಿ ಸಲ್ಲಿಸಿದ್ದರು. ಸಹ, ಸದರಿ ಜಾಗದಲ್ಲಿ ಬೆಳೆದಿದ್ದ ಶುಂಠಿ ಬೆಳೆಯನ್ನು ಏಕಾಏಕಿ JCB ಮೂಲಕ ತೆರವುಗೊಳಿಸಿರುವ ತಹಶೀಲ್ದಾರರು, R.I ಗಳ ದೌರ್ಜನ್ಯ ಹಾಗೂ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ, ಹೊಸನಗರ ತಹಶೀಲ್ದಾರರ ಕಛೇರಿ ಮುಂಬಾಗ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ತಡರಾತ್ರಿ ಉಪವಿಭಾಗಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು.
ಸದರಿ ಜಮೀನಿನ ಮೇಲೆ ಹೊರಡಿಸಿರುವ ತೆರವು ಆದೇಶಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ “ತಡೆಯಾಜ್ಞೆ” ನೀಡಿ ಆದೇಶ ಹೊರಡಿಸಿದ ಬಳಿಕ ಪ್ರತಿಭಟನೆ ಮೊಟಕುಗೊಳಿಸಿದರು.
Ahoratri Dharani ಈ ಸಂದರ್ಭದಲ್ಲಿ
ಅನ್ಯಾಯಕ್ಕೊಳಗಾದ ರೈತ ಕುಟುಂಬಸ್ಥರು, DYSP, ಬಿಜೆಪಿ ಮಂಡಲ ಅಧ್ಯಕ್ಷರು, ಪಕ್ಷದ ವಿವಿಧ ಹಂತದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.