Government of Karnataka ಸಂಪುಟ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಸಿಧ್ದರಾಮಯ್ಯ ಪತ್ರಿಕಾಗೋಷ್ಠಿ ಕರೆದಿದ್ದರು.
ಬಹುಚರ್ಚಿತ ಫ್ರೀ ಕರೆಂಟ್ ಬಗ್ಗೆ ಸರ್ಕಾರ ತನ್ನದೇ ಷರತ್ತಿನ ಹಿನ್ನೆಲೆ ಹೇಳಿದೆ.
ಇನ್ನೂರು ಯೂನಿಟ್ ವರೆಗೆ ವಿದ್ಯುತ್ ಫ್ರೀ. ಸದ್ಯ
ಇನ್ನೂರು ಯೂನಿಟ್ ಒಳಗೆ ವಿದ್ಯುತ್ ಬಳಸುವ ಮನೆಗಳು ಹನ್ನೆರಡು ತಿಂಗಳ ಸರಾಸರಿ ಗೆರೆಯನ್ನ ದಾಟುವಂತಿಲ್ಲ.
ಎಂದಿದೆ.
ಅಂದರೆ ಉದಾಹರಣೆಗೆ
ಪ್ರತೀ ತಿಂಗಳು ನೂರು,ನೂರಿಪ್ಪತ್ತು ನೂರೈವತ್ತು, ಯೂನಿಟ್ ಬಳಸುತ್ತಿದ್ದ ಮನೆಗಳು ಒಮ್ಮೆಲೆ ಫ್ರೀ ಅಂತ ಇನ್ನೂರರೆಗೂ ಯೂನಿಟ್ ಹೆಚ್ಚಳ ಮಾಡಿಕೊಳ್ಳುವ ಹಾಗಿಲ್ಲ.
ಇನ್ನೂರಕ್ಕಿಂತ ಹೆಚ್ಚು ಬಳಸುತ್ತಿದ್ದಲ್ಲಿ ಹೆಚ್ಚಳ ಬಳಕೆಗೆ ಮಾತ್ರ ದರ ನಿಗದಿ.
ಎಂದು ಸ್ಪಷ್ಟಪಡಿಸಿದ್ದಾರೆ.
Government of Karnataka ಇದು ಜುಲೈ 1 ರ ಬಿಲ್ ನಿಂದ ಜಾರಿಗೆ.
ಈ ಹಿಂದಿನ ಕರೆಂಟ್ ಬಿಲ್ ಪಾವತಿ ಕಡ್ಡಾಯ.
ಗೃಹಲಕ್ಷ್ಮಿ ಯೋಜನೆ ಆಗಸ್ಟ್
15 ರಿಂದ ಜಾರಿಗೆ.
ಎಪಿಎಲ್ ಬಿಪಿಎಲ್ ಕಾರ್ಡುದಾರರಿಗೂ ಲಭ್ಯವಿದೆ.
ಮನೆ ಯಜಮಾನಿ ಬಗ್ಗೆ ಘೋಷಣೆಯನ್ನ ಆ ಕುಟುಂಬದವರೇ ನೀಡಬೇಕು.
ಮನೆಯ ಯಜಮಾನಿ ಮಾಸಿಕ ₹ 2000 ಪಡೆಯಲು ಅರ್ಹರು. ವಿಧವಾ ಪಿಂಚಣಿ ಪಡೆಯುತ್ತಿದ್ದರೂ ನೀಡಲಾಗುತ್ತದೆ.
ಅನ್ನಭಾಗ್ಯ ಜುಲೈ 1 ಜಾರಿಗೆ.
ಬಿಪಿಎಲ್ ಕುಟುಂಬದಲ್ಲಿ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ನೀಡಲಾಗುತ್ತದೆ.
ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ರಾಜ್ಯದ ಒಳಗಡೆ ಮಾತ್ರ ಉಚಿತ ಪ್ರಯಾಣ.ಎಸಿ, ಲಕ್ಸುರಿ,ಬಸ್ ಗಳ ಹೊರತಾಗಿ ಈ ಸೌಲಭ್ಯ. ಬಸ್ ಗಳಲ್ಲಿ ಅರ್ಧ ಮಹಿಳೆಯರಿಗೆ ಇನ್ನರ್ಧ ಪುರುಷರಿಗೆ ಸಾಸನ ಮೀಸಲು.
ಬಿಎಮ್ ಟಿ ಸಿ ಯಲ್ಲಿ ಉಚಿತ ಪ್ರಯಾಣಕ್ಕೆ ಮೀಸಲಿಲ್ಲ.
ಜೂನ್ 11 ರಿಂದಲೇ ಈ ಗ್ಯಾರಂಟಿ ಜಾರಿಗೆ.
ಯುವನಿಧಿ ಗ್ಯಾರಂಟಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ಇಪ್ಪತ್ತನಾಲ್ಕು ತಿಂಗಳು ಮಾತ್ರ ಆಯಾ ಪದವಿಧರ/ ಡಿಪ್ಲೊಮದಾರರಿಗೆ ಅನ್ವಯ. ನಡುವೆ ಕೆಲಸ ಸಿಕ್ಕರೆ ಈ ಗ್ಯಾರಂಟಿ ರದ್ದಾಗುತ್ತದೆ.ಗೃಹಲಕ್ಷ್ಮಿ ಗ್ಯಾರಂಟಿಗೆ ಆನ್ ಲೈನ್ ಅರ್ಜಿ ಸಲ್ಲಿಸಬೇಕು.ಜೂನ್ 15 ರಿಂದ ಜುಲೈ 15 ರವರೆಗೆ ಅವಕಾಶ. ನಿಖರ ಮಾಹಿತಿಗೆ ಮತ್ತಷ್ಟು ಕಾದು ನೋಡಬೇಕಿದೆ.