Chamber of Commerce and Industry ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ತನ್ನ 60 ವರ್ಷಗಳ ಹರೆಯದಲ್ಲಿ ವಜ್ರಮಹೋತ್ಸವ ಆಚರಣೆಯ ಸಂಭ್ರಮದಲ್ಲಿದೆ ಎಂದು ತಿಳಿಸಲು ಹರ್ಷವಾಗುತ್ತದೆ ಎಂದು ಸಂಘದ ಅಧ್ಯಕ್ಷರಾದ ಎನ್ ಗೋಪಿನಾಥ್ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಯ ಹೆಜ್ಜೆಯಲ್ಲಿ ಸಂಘದ ಪಾತ್ರ ಬಹುಮುಖ್ಯವಾದುದು. ಮುಖ್ಯವಾಗಿ ವಾಣಿಜ್ಯೋದ್ಯಮಿಗಳಿಗೆ, ಕೈಗಾರಿಕೋದ್ಯಮಿಗಳಿಗೆ ವೃತ್ತಿಪರರಿಗೆ ಸಂಘದ ಕಾರ್ಯಚಟುವಟಿಕೆಗಳ ಪೂರಕವಾಗಿ ಅಭಿವೃದ್ದಿಯ ದಾರಿದೀಪವಾಗಿದೆ. ಈ ದಿಸೆಯಲ್ಲಿ ಸಂಘವು ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಯಲ್ಲಿ ಸರ್ಕಾರ ಮತ್ತು ಸ್ಥಳಿಯ ಸಂಸ್ಥೆಗಳ ಸಂಪರ್ಕದೊಂದಿಗೆ ಮದ್ಯೆ ಸೇತುವೆಯಾಗಿ ಸದಾ ಕಾರ್ಯನಿರ್ವಹಿಸುತ್ತಾ ಇದೆ ಎಂದರು.
Chamber of Commerce and Industry ಸಂಘವು ತನ್ನ ಸಾಧನೆಯ ಹೆಜ್ಜೆಗಳನ್ನು ಮೆಲುಕು ಹಾಕುವ ನಿಟ್ಟಿನಲ್ಲ್ಲಿ ಪ್ರತಿ ವರ್ಷದಂತೆ ”ಸಂಸ್ಥಾಪಕರ ದಿನಾಚರಣೆ”ಯನ್ನು ಬರುವ ದಿನಾಂಕ: 04.06.2023ರಂದು ಬೆಳಿಗ್ಗೆ 10:15ಕ್ಕೆ ಸಂಘದ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಉದ್ಘಾಟಕರು ಹಾಗೂ ಮುಖ್ಯ ಅಥಿತಿಗಳಾಗಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀಯುತ ಬಿ.ವಿ ಗೋಪಾಲ ರೆಡ್ಡಿಯವರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂಸ್ಥೆಯನ್ನು ಪೋಷಿಸಿ, ಬೆಳಿಸಿ ಅಭಿವೃದ್ದಿಯತ್ತ ತರುವಲ್ಲಿ ಸಂಸ್ಥೆಯ ಹಿಂದಿನ ಮಾಜಿ ಅಧ್ಯಕ್ಷರುಗಳ ಸೇವೆ ಚಿರಸರಣೀಯ. ಈ ಹಿನ್ನೆಲೆಯಲ್ಲಿ ಸಂಘವು ಈ ಮಹನೀಯರು ಸಲ್ಲಿಸಿದ ಅಭೂತಪೂರ್ವ ಸೇವೆಯ ಸ್ಮರಣಾರ್ಥವಾಗಿ ಸಂಸ್ಥಾಪಕರ ದಿನಾಚರಣೆಯಂದು ಗೌರವ ಸನ್ಮಾನ ನೀಡುವ ಪ್ರತೀತಿ ಹಾಗೂ ನಮ್ಮ ಕರ್ತವ್ಯವೂವಾಗಿದೆ.
ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಸಂಸ್ಥೆಯ ಗಣ್ಯೆ ವಾಣಿಜ್ಯೋದ್ಯಮಿಗಳಿಗೆ ಸಮಾರಂಭದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು. 2023ನೇ ಸಾಲಿನ ಹೆಮ್ಮೆಯ ವಾಣಿಜ್ಯೋದ್ಯಮಿ ಪ್ರಶಸ್ತಿಗೆ ಮೆ. ಸುಧಾ ಟ್ರೇರ‍್ಸ್, ಮೆ. ಶಿವಲಿಂಗೇಶ್ವರ ಅರೆಕಾನಟ್ ಟ್ರೇರ‍್ಸ್, ಮತ್ತು ಶ್ರೀ ಮಲ್ಲಿಕಾರ್ಜುನ ಆಗ್ರೋ ಸ್ಪೆರ‍್ಸ್ ರವರುಗಳನ್ನು ಪುರಸ್ಕರಿಸಲಾಗುವುದು. ವಿಶೇಷ ಪುರಸ್ಕಾರಕ್ಕೆ ಭಾಜನರಾಗಿ ಶ್ರೀ ಆರ್. ರಂಗಪ್ಪ, ಬಸ್ ಮಾಲಿಕರು, ಮೆ. ಶ್ರೀ ಮಲ್ಲಿಕಾರ್ಜುನ ಮೋಟಾರಸ್ ರವರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು ಹಾಗೂ ವಿಶೇಷ ಸನ್ಮಾನಕ್ಕೆ ಶ್ರೀಮತಿ ಸವಿತಾ ಮಾಧವ್, ಅಂತರರಾಷ್ಟ್ರೀಯ ಯೋಗ ಬೆಳ್ಳಿಪದಕ ಪುರಸ್ಖೃತೆ ಮತ್ತು ಮಾನವ ಸಂಪನ್ಮೂಲ ಸಲಹೆಗಾರರು ಹಾಗೂ ಕರ್ನಾಟಕ ರಾಜ್ಯ ಜ್ಯುವೆಲರಿ ಫೆಡೆರೇಷನ್, ವೈಸ್ ಛರ‍್ಮನ್ ಶ್ರೀಯುತ ವಿ.ಕೆ ಜೈನ್‌ರವರು ಪುರಸ್ಕಾರಕ್ಕೆ ಭಾಜನರಾಗಿರುತ್ತಾರೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷರಾದ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದೆರ್ಶಿ ಜಿ. ವಿಜಯಕುಮಾರ್, ನಿರ್ದೇಶಕರುಗಳಾದ ಈ. ಪರಮೇಶ್ವರ, ಬಿ.ಆರ್. ಸಂತೋಷ್, ಪ್ರದೀಪ್ ವಿ. ಯಲಿ, ಬಿ. ಮಂಜೇಗೌಡ, ಮರಿಸ್ವಾಮಿ, ಗಣೇಶ ಎಂ. ಅಂಗಡಿ, ಎಂ.ಎ ರಮೇಶ್ ಹೆಗಡೆ, ಹಾಲಸ್ವಾಮಿ ರವರುಗಳು ಉಪಸ್ಥಿತರಿದ್ದರು.