Thursday, December 18, 2025
Thursday, December 18, 2025

Kannada Sahitya Parishath ಕನ್ನಡ ಸಾಹಿತ್ಯಕ್ಕಿರುವ ವೈವಿಧ್ಯತೆ ಬೇರೆ ಯಾವ ಸಾಹಿತ್ಯಕ್ಕಿಲ್ಲ

Date:

Kannada Sahitya Parishath ಕನ್ನಡ ಸಾಹಿತ್ಯಕ್ಕಿರುವ ಸಂಸ್ಕೃತಿ, ವೈವಿದ್ಯತೆ ಬೇರೆ ಯಾವ ಸಾಹಿತ್ಯಕ್ಕಿಲ್ಲ. ಕನ್ನಡದ ಕವಿ ಚಕ್ರವರ್ತಿಗಳಾದ ಪಂಪ, ರನ್ನರಂತಹ ಮಹಾನೀಯರು ಸಾಹಿತ್ಯದ ಮೂಲಕ ದೇಶ ಹಾಗೂ ನಾಡಿಗೆ ನೀಡಿರುವ ಕೊಡುಗೆ ಅನನ್ಯವಾದದು ಎಂದು ಉಪನ್ಯಾಸಕ ಡಾ|| ಬೆಳವಾಡಿ ಮಂಜುನಾಥ್ ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿಯ ಹಿರೇಗೌಜ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ದತ್ತಿಗಳಾದ ಕುಂಭಕ, ದಿ|| ಹೆಚ್.ಹೆಚ್.ರುದ್ರೇಗೌಡ, ಬಿ.ಡಿ. ಬೋಜೇಗೌಡರವರ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕನ್ನಡ ಸಾಹಿತ್ಯ ಲೋಕಕ್ಕೆ ವಚನಕಾರರು ನೀಡಿದ ಕೊಡುಗೆ ಮಹತ್ತರವಾದದ್ದು. ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಕೀರ್ತನೆ ಹಾಗೂ ವಚನಗಳು ಸಾಹಿತ್ಯದ ವೈವಿಧ್ಯತೆ, ವೈಶಿಷ್ಟತೆಯ ಹಿರಿಮೆಯನ್ನು ವಿಶ್ವಕ್ಕೆ ತೋರಿಸಿಕೊಟ್ಟವರು ದಾಸರು ಮತ್ತು ಶರಣರು ಎಂದು ತಿಳಿಸಿದರು.

Kannada Sahitya Parishath ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವನ್ನು ಗಮನಿಸಿದರೆ ಸಮೂಹದಲ್ಲಿ ಸಾಹಿತ್ಯ ರಚನೆ ಆಗಿರುವುದು ಎರಡೇ ಪ್ರಕಾರ. ವಚನಗಳ ಮೂಲಕ ಶರಣ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ ದಾಸ ಸಾಹಿತ್ಯ ಎಂದು ವಿವರಿಸಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಸಾಹಿತ್ಯ, ಸಂಸ್ಕೃತಿ ಅನಾವರಣಗೊಳಿಸುವ ನಿಟ್ಟಿನಲ್ಲಿ ದತ್ತಿ ಉಪನ್ಯಾಸವನ್ನು ಶಾಲಾ ಕಾಲೇಜುಗಳಲ್ಲಿ ನಡೆಸುವ ಮೂಲಕ ಸಾಹಿತ್ಯದ ಕಂಪನ್ನು ಹರಡಿಸಲಾಗುತ್ತಿದೆ ಎಂದ ಅವರು ಇಂದಿನ ಯುವ ಪೀಳಿಗೆಯು ಬೌದ್ಧಿಕ ವಾಗಿ ಜ್ಞಾನಾರ್ಜನೆ ಪಡೆಯಲು ದತ್ತಿ ಉಪನ್ಯಾಸದಂತಹ ಕಾರ್ಯ ಕ್ರಮದಲ್ಲಿ ಭಾಗವಹಿಸಿದರೆ ಸಾಹಿತ್ಯದ ಬಗ್ಗೆ ಇನ್ನಷ್ಟು ಅರಿವು ಮೂಡಸಲು ಸಾಧ್ಯವಾಗಲಿದೆ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡದ ನೆಲದ ಸಾಹಿತ್ಯ ಮತ್ತು ಸಂಸ್ಕ್ರೃತಿಗೆ ಜೀವಂತಿಕೆಯನ್ನು ಕೊಟ್ಟ ರಾಜರೆಂದರೆ ಅದು ನಾಲ್ವಡಿ ಕಷ್ಣರಾಜ ಒಡೆಯರು ಮಾತ್ರ. ಸಾಹಿತ್ಯ ಪರಿಷತ್ ಸ್ಥಾಪಕರಾದ ಇವರು, ವಿಜಯನಗರದ ಅರಸರನ್ನು ಹೊರತುಪಡಿಸಿದರೆ ಸಾಹಿತ್ಯ, ಸಂಸ್ಕೃತಿ ಕಲೆ ಮುಂತಾದವುಗಳಿಗೆ ಉತ್ತೇಜನ ನೀಡಿದರು ಎಂದು ತಿಳಿಸಿದರು.
ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಎಚ್.ಆರ್.ಕಾಂತರಾಜ್ ಮಾತನಾಡಿ ಸಾಹಿತ್ಯವು ಪರಿಸರದ ಮೂಲಕ ಹರಡಿಕೊಂಡಿದೆ. ಕುವೆಂಪು ಅನೇಕ ಕೃತಿಗಳು ಪರಿಸರ ಪ್ರೇರಣೆಯಿಂದ ಕೂಡಿದ್ದು ಒಂದು ರೀತಿಯಲ್ಲಿ ಪರಿಸರವು ಕನ್ನಡ ಸಾಹಿತ್ಯದ ಒಂದು ಅವಿಭಾಜ್ಯ ಅಂಗ ಎಂದರು.

ಈ ಸಂದರ್ಭದಲ್ಲಿ ಕನ್ನಡ ಶಿಕ್ಷಕ ಎಂ.ಕುಮಾರಸ್ವಾಮಿ, ಹಿರೇಗೌಜ ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ, ಸದಸ್ಯ ಹೆಚ್.ಎಸ್.ಶಿವಕುಮಾರ್, ಕಸಾಪ ತಾಲ್ಲೂಕು ಗೌರವ ಕಾರ್ಯದರ್ಶಿ ವೀರೇಶ್ ಕೌಲಗಿ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...