Thursday, December 18, 2025
Thursday, December 18, 2025

World Tobacco Day ವಿಶ್ವ ತಂಬಾಕು ದಿನಾಚರಣೆ: ಗುಲಾಬಿ ಆಂದೋಲನ ಜಾಥಾ

Date:

World Tobacco Day ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ನಗರದ ಆರೋಗ್ಯ ಕೇಂದ್ರವು ಕೋಟೆಯಿಂದ ಗುಲಾಬಿ ಆಂದೋಲನ ಜಾಥಾ ಮಾಡಿ ಸಾರ್ವಜನಿಕರಲ್ಲಿ ತಂಬಾಕು ಸೇವನೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ಗುಲಾಬಿ ಹೂ ಹಾಗೂ ಕರಪತ್ರ ಕೊಡುವುದರೊಂದಿಗೆ ಜಾಗೃತಿ ಮೂಡಿಸಲಾಯಿತು.

ಈ ಕಾರ್ಯಕ್ರಮಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಚಂದ್ರಶೇಖರ್.ಜಿ.ಬಿ ಹಾಗೂ ರೊಟೇರಿಯನ್ ವಿಜಯ್‍ಕುಮಾರ್ ಇವರು ಚಾಲನೆ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ ವಿಶ್ವ ತಂಬಾಕು ರಹಿತ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿದರು.

World Tobacco Day ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮೇಶ್, ಜಿಲ್ಲಾ ತಂಬಾಕು ಘಟಕದಿಂದ ಹೇಮಂತ್ ಉಪಸ್ಥಿತರಿದ್ದರು. ಈ ಜಾಥಾದಲ್ಲಿ ನಗರ ವೈದ್ಯಾಧಿಕಾರಿ ಡಾ|| ಪ್ರಕಾಶ್, ಜೆಸಿಐ ನ ವಲಯಾಧಿಕಾರಿಯಾದ ಪ್ರತಿಮಾ ಡಾಕಪ್ಪಗೌಡ, ಮೈತ್ರಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಆರಕ್ಷಕ ಸಿಬ್ಬಂದಿಯವರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...