Friday, December 5, 2025
Friday, December 5, 2025

Sri Uttaradi Math Bangalore ಮಹಿಷಿಯ ಮಹಾಮಹಿಮರು ಶ್ರೀಸತ್ಯಸಂಧ ತೀರ್ಥರು

Date:

Sri Uttaradi Math, Bangalore ವಿಷ್ಣೋ:ಪದಶ್ರಿದ್ಗೋವ್ರಾತೈ:ಸ್ವಾಂತಧ್ವಾಂತ ನಿವಾರಕ:
ಶ್ರೀಸತ್ಯಸಂಧ ಸೂರ್ಯೋ ಯಾಕೆ ಭಾಸತಾಂ ನೋ
ಹೃದಂಬರೇ”
ಶ್ರೀಸತ್ಯಸಂಧತೀರ್ಥರು ಶ್ರೀಮದಾಚಾರ್ಯರ ಪರಂಪರೆಯಲ್ಲಿ ವೇದಾಂತ ಸಾಮ್ರಾಜ್ಯಪೀಠ ಪರಂಪರೆಯಲ್ಲಿ ಬಂದ 26ನೇ ಯತಿವರೇಣ್ಯರು.

ಇವರ ಪೂರ್ವಾಶ್ರಮದ ಹೆಸರು ರಾಘವೇಂದ್ರ ಎಂದು.ಇವರು ಹುಟ್ಟಿದ್ದು ಬಿದರಹಳ್ಳಿ ಅಶ್ವತ್ಥನಾರಾಯಣ ದೇವರ ಮತ್ತು ಮಂತ್ರಾಲಯ
ಪ್ರಭುಗಳ ಸೇವೆಮಾಡಿದ ಫಲದಿಂದ. ಮಂತ್ರಾಲಯಶ್ರೀಗುರು ಸಾರ್ವಭೌಮರ ವರಪ್ರಸಾದದಿಂದ ಹುಟ್ಟಿದವರಾದ್ದರಿಂದ ಅವರಿಗೆ ತಂದೆತಾಯಿಗಳುರಾಘವೇಂದ್ರ ಎಂದುನಾಮಕರಣ ಮಾಡಿದರು.
ಬಾಲ್ಯದಿಂದಲೂ ಭಗವಂತನ ಪುರಾಣ ಪುಣ್ಯ ಕಥೆಗಳಲ್ಲಿ ಬಹಳವಿಶೇಷವಾದಆಸಕ್ತಿಹೊಂದಿದ್ದರು.

ಸಕಾಲದಲ್ಲಿಚೌಲಉಪನಯನಾದಿಸಂಸ್ಕಾರಗಳನ್ನು
ತಂದೆತಾಯಿಗಳು ನೆರವೇರಿಸಿದರು.ಇವರಿಗೆ ತಂದೆಯವರಿಂದ ವೇದಶಾಸ್ತ್ರ ಪಾಠ ಮತ್ತು ಸುಧಾ ಪಾಠವನ್ನೂಹೇಳಿಸಿಕೊಂಡುಸುಧಾಪಂಡಿತ
ರಾಗುತ್ತಾರೆ.ರಾಘವೇಂದ್ರಾಚಾರ್ಯರು
ಸವಣೂರಿಗೆ ಬಂದು ಆಗಿನ ಪೀಠಾಧಿಪತಿಗಳಾಗಿದ್ದ ಶ್ರೀಸತ್ಯಬೋಧತೀರ್ಥ ಗುರುಗಳ ದರ್ಶನ ಮಾಡುತ್ತಾರೆ.

ಸತ್ಯಬೋಧಗುರುಗಳು ಇವರಿಗೆ ಪರೀಕ್ಷಾರ್ಥವಾಗಿ ಶ್ರೀಮನ್ಯಾಯಸುಧೆಯ ಶ್ಲೋಕವನ್ನುಕೊಟ್ಟುಅದರವಿವರಣೆಮಾಡಲುಹೇಳುತ್ತಾರೆ.ರಾಘವೆಂದ್ರಾಚಾರ್ಯರು ಶ್ಲೋಕದ ವಿವರಣೆಯನ್ನು ಬಹಳ ಚೆನ್ನಾಗಿ ವಿವರಿಸುತ್ತಾರೆ.

ಇವರ ಉತ್ತರದಿಂದ ಸಂತೋಷಗೊಂಡ ಶ್ರೀಗಳವರುಇವರಿಗೆಮಠದಲ್ಲಿಆಶ್ರಯಕೊಡುತ್ತಾರೆ.ಶ್ರೀರಾಘವೇಂದ್ರಾಚಾರ್ಯರು ಗುರುಗಳಿಂದ ಪುನರ್ನಾಮಕರಣಗೊಂಡುರಾಮಚಂದ್ರಾಚಾರ್ಯರಾದರು.ಇವರಿಗೆ ಶ್ರೀಸತ್ಯಬೋಧತೀರ್ಥಗುರುಗಳ ಪೂರ್ವಾಶ್ರಮದಮಗನಾದಸೇತುಮಾಧವಾಚಾರ್ಯರ ಪುತ್ರಿ ಸುಕನ್ಯಾ ಎನ್ನುವ ಕನ್ಯೆಯೊಡನೆ ವಿವಾಹವಾಗುತ್ತದೆ.

ಮುಂದೆ ಶ್ರೀಸತ್ಯಬೋಧತೀರ್ಥರಿಗೆ ದೇಹಾಲಸ್ಯ
ವಾದಾಗ ಶ್ರೀ ರಾಮದೇವರ ಸೂಚನೆಯಂತೆ ರಾಮಚಂದ್ರಾಚಾರ್ಯರಿಗೆ ಸನ್ಯಾಸಾಶ್ರಮ ಕೊಡಲುನಿರ್ಧರಿಸುತ್ತಾರೆ.ಶ್ರೀಸತ್ಯಬೋಧತೀರ್ಥ
ರಿಗೆ ರಾಮಚಂದ್ರಾಚಾರ್ಯರು ಅಲ್ಪಾಯುಷಿ ಎಂದು ತಿಳಿಯುತ್ತದೆ.

ಶ್ರೀಸತ್ಯಬೋಧತೀರ್ಥರು ತಮ್ಮ ಆಯುಷ್ಯದಲ್ಲಿ ಹತ್ತೂವರೆ ವರ್ಷವನ್ನು ತಮ್ಮ ಶಿಷ್ಯರಾಮಚಂದ್ರಾಚಾರ್ಯರಿಗೆ ಆಯುಷ್ಯ ಪ್ರಧಾನ ಮಾಡಿ,ಶ್ರೀಹರಿ ಇಚ್ಛೆ ಎಂದು ತಿಳಿದು ಮುಂದೆಅವರಿಗೆಸನ್ಯಾಸಾಶ್ರಮಕೊಟ್ಟುಶ್ರೀಸತ್ಯ
ಸಂಧತೀರ್ಥರೆಂದು ನಾಮಕರಣ ಮಾಡುತ್ತಾರೆ.
ಕ್ರಿಶತ 1705 ಶೋಭನ ಸಂವತ್ಸರ ಫಾಲ್ಗುಣ ಪ್ರತಿಪದೆಯಂದು ಶ್ರೀಸತ್ಯಬೋಧತೀರ್ಥ ಗುರುಗಳುಬೃಂದಾವನಸ್ಥರಾದರು.
ಶ್ರೀಸತ್ಯಬೋಧತೀರ್ಥಗುರುಗಳು ತಮಗೊಪ್ಪಿಸಿದ ವೇದಾಂತ ಸಾಮ್ರಾಜ್ಯವನ್ನು ವಹಿಸಿಕೊಂಡು ದೇಶಾದ್ಯಂತ ಸಂಚರಿಸಿ ಶ್ರೀಮಧ್ವಸಿದ್ಧಾಂತವನ್ನು
ಪ್ರಚುರಪಡಿಸಿದರುಶ್ರೀಸತ್ಯಸಂಧತೀರ್ಥರು.
ಇನ್ನೊಂದು ವಿಶೇಷ ನಡೆದಿದ್ದೆಂದರೆ ಸಂಚಾರ ಮಾಡುತ್ತಾ ಬಂದು ಸಾಂಗಲಿಯಲ್ಲಿರುವ ಶ್ರೀಸತ್ಯವ್ರತತೀರ್ಥ ಗುರುಗಳ ಬೃಂದಾವನ ಸನ್ನಿಧಿಯಲ್ಲಿ ಶ್ರೀಮೂಲರಾಮದೇವರ ಪೂಜೆ ಮಾಡುತ್ತಾ ವಿಷ್ಣುಸಹಸ್ರನಾಮಕ್ಕೆ ಅರ್ಥ ಬರೆದ ಮಹಾತ್ಮರುಪ್ರತಿಯೊಂದುನಾಮದಲ್ಲುಪರಮಾತ್ಮನ ಚಿಂತನೆಯನ್ನು ಮಾಡುತ್ತಾ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.ನಂತರ ಶ್ರೀಮನ್ಯಾಯಸುಧಾ ಪಾಠವನ್ನುತಮ್ಮ ಶಿಷ್ಯರಿಗೆ ಮಾಡುತ್ತಾರೆ. ಇವರು ಸುಧಾ ಪಾಠದಲ್ಲಿ ವಿಶೇಷ ಅರ್ಥಾನುಸಂಧಾನ ಮಾಡುತ್ತಿದ್ದ ರೀತಿಗೆ ಶ್ರೀಸತ್ಯವ್ರತತೀರ್ಥರು ಸಂತೋಷಪಟ್ಟ ಕುರುಹಾಗಿ ಬೃಂದಾವನ ಕಂಪನವಾಗುವುದನ್ನು ನೆರೆದವರು ನೋಡಿದ್ದಾರೆ..
ಈಘಟನೆಯನ್ನುಶ್ರೀಸತ್ಯಧರ್ಮತೀರ್ಥರು,ಶ್ರೀಸತ್ಯಪರಾಕ್ರಮತೀರ್ಥರುಮುಕ್ತವಾಗಿ ಶ್ಲಾಘಿಸಿದ್ದಾರೆಂದು ತಿಳಿದು ಬರುತ್ತದೆ.
ಶ್ರೀಗಳವರಿಂದ ಅನೇಕ ಮಹಿಮೆಗಳು ನಡೆದ ನಿದರ್ಶನ ಗಳಿವೆ.
ಶ್ರೀಗಳವರು ಗಯಾ ಕ್ಷೇತ್ರಕ್ಕೆ ಹೋದಾಗ ರಾಮದೇವರಪೂಜೆಗೆ ನಿರ್ಜನ ಪ್ರದೇಶದಲ್ಲಿ ಕಮಲ ಪುಷ್ಪಗಳುದೊರಕಿದ್ದು ಒಂದು ವಿಶೇಷ ಪವಾಡವೇ ಸರಿ.ಶ್ರೀರಾಮಚಂದ್ರದೇವರ ಪೂಜೆಗೆ ಹೂಗಳೇ ಸಿಗದಿದ್ದಾಗ ಶ್ರೀರಾಮದೇವರೇ ಒಬ್ಬ ವೃದ್ಧನ ವೇಷದಲ್ಲಿ ಬಂದು ಕಮಲದ ಹೂಗಳನ್ನು ಕೊಡುತ್ತಾರೆ.
ಶ್ರೀಗಳವರುಪುಷ್ಪಗಳನ್ನುಶ್ರೀಮೂಲರಾಮಚಂದ್ರ
ದೇವರು,ಶ್ರಿದಿಗ್ವಿಜಯರಾಮದೇವರು,ಶ್ರೀವೇದವ್ಯಾಸದೇವರು,ಶ್ರೀವಂಶರಾಮಚಂದ್ರದೇವರು,ಮತ್ತುವಿಠಲದೇವರಿಗೆಅರ್ಪಿಸಿ,ಸೀತಾದೇವಿಗೆಹೂವುಇರುವುದಿಲ್ಲ.ಶ್ರೀಗಳವರಿಗೆ ಮನಸ್ಸಿನಲ್ಲಿ ಸೀತಾದೇವಿಗೆ ಹೂವುಸಮರ್ಪಿಸಲಾಗಲಿಲ್ಲವೆಂದುಯೋಚಿಸುತ್ತಿದ್ದಾಗ ತಕ್ಷಣ ಮೂಲರಾಮ ದೇವರ ಮೇಲಿದ್ದ ಹೂವುಸೀತಾದೇವಿಯಮೇಲೆಬಂದುಅಲಂಕರಿಸುತ್ತದೆ.ಇದು ಇವರ ಪೂಜೆಯಲ್ಲಿ ನಡೆದ ಮಹಿಮೆ.
ಶ್ರೀಗಳವರು ಪುರಿ ಜಗನ್ನಾಥನದರ್ಶನಕ್ಕೆಹೋದಾಗ
ಮಂದಿರಕ್ಕೆ ಹಾಕಿದ್ದ ಬೀಗಗಳು ಕಳಚಿಕೊಂಡು ಜಗನ್ನಾಥನ ದರ್ಶನ ಭಾಗ್ಯ ದೊರಕಿದ್ದು.ಕಾಶಿಗೆ ಹೋದಾಗಸ್ವತಃ:ಗಂಗಾಮಾತೆಯೇತಾನೇಸ್ವತಃ:ಕೈ
ನೀಡಿ ಬಾಗಿನ ಸ್ವೀಕರಿಸಿದ್ದು ,ಹೀಗೆ ಹಲವಾರು
ಮಹಿಮೆಗಳು ಶ್ರೀಗಳವರ ಸಂಚಾರ ಕಾಲದಲ್ಲಿ ನಡೆದಿದೆ.ಮಳಖೇಡದಲ್ಲಿಶ್ರೀಜಯತೀರ್ಥಗುರುಗಳ ಸೇವೆಮಾಡಿದ್ದಾರೆ ಶ್ರೀಗಳವರು.ಸುಬ್ರಹ್ಮಣ್ಯದಲ್ಲಿ ಸಂಸ್ಥಾನ ಪೂಜೆ ಮಾಡುವಾಗಸಾಕ್ಷಾತ್ಶೇಷದೇವರೇ ದರ್ಶನ ಕೊಟ್ಟಿದ್ದಾರೆ.ಅಲ್ಲಿಂದ ಮುಂದೆಶ್ರೀಕೃಷ್ಣನು ನೆಲೆಸಿರುವ ಉಡುಪಿ ಕ್ಷೇತ್ರಕ್ಕೆ ಬಂದುಅಲ್ಲಿ ಶ್ರೀಕೃಷ್ಣನ ದರ್ಶನ ಪಡೆಯುತ್ತಾರೆ.ಕೆಲವುದಿನ ಉಡುಪಿಯಲ್ಲೇ ತಂಗಿ ಅಲ್ಲಿಶ್ರೀಕೃಷ್ಣನಸನ್ನಿಧಿಯಲ್ಲಿ

Mantralaya ಶಾಸ್ತ್ರಾರ್ಥ ವಿಚಾರ ಮತ್ತು ವಿದ್ವತ್ಗೋಷ್ಠಿಎಲ್ಲವೂ
ಶ್ರೀಗಳವರಸಮ್ಮುಖದಲ್ಲಿನಡೆಯುತ್ತದೆ.ಶ್ರೀಗಳವ
ರಿಗೆತಮ್ಮ ಆಯುಷ್ಯ ಇನ್ನು ಕೇವಲ ಹದಿನೈದು ದಿನ ಮಾತ್ರಇರುವುದು ಎಂದು ಅವರಿಗೆ ಮೊದಲೇ ತಿಳಿದಿರುತ್ತದೆ.
ಉಡುಪಿಯಲ್ಲೇ ಹನ್ನೆರಡು ದಿನಗಳು ಕಳೆದ ನಂತರ
ಅಲ್ಲಿಂದ ಶಿಷ್ಯರ ಸಂಗಡ ಹೊರಟು ಸೀತಾನದಿಯ ಹತ್ತಿರ ಬರುತ್ತಾರೆ.ಶ್ರೀಗಳವರಿಗೆ ಅಷ್ಟರಲ್ಲೇ ಬಹಳ
ದೇಹಾಲಸ್ಯವಾಗಿರುತ್ತದೆ.ತಮ್ಮ ಶಿಷ್ಯರಲ್ಲಿಒಬ್ಬರಾದ
ಶ್ರೀ ಹಾವೇರಿ ಕೃಷ್ಣಾಚಾರ್ಯರಿಗೆ ಸನ್ಯಾಸಾಶ್ರಮ ಕೊಟ್ಟು ಶ್ರೀಸತ್ಯವರತೀರ್ಥರು ಎಂದು ನಾಮಕರಣ
ಮಾಡುತ್ತಾರೆ.ಶ್ರೀಗಳವರು ಆಶ್ರಮ ಕೊಟ್ಟಮೇಲೆ
ಅವರು ಸತ್ಯವರತೀರ್ಥರಿಗೆ ಉಡುಪಿಯಿಂದ ಘಟ್ಟದಮೇಲಿರುವ ತೀರ್ಥಹಳ್ಳಿಯಿಂದ ಮುಂದೆ ಬರುವ ಶ್ರೀರಾಮದೇವರುಪ್ರತಿಷ್ಠಾಪನೆಮಾಡಿರುವ
ಅಶ್ವತ್ಥನಾರಾಯಣನ ಸಮೀಪದಲ್ಲೇ ತಮಗೆ ಬೃಂದಾವನ ನಿರ್ಮಾಣ ಮಾಡಬೇಕೆಂದು ತಿಳಿಸುತ್ತಾರೆ.ಹೀಗೆ ಅವರು ಜೇಷ್ಠ ಶುದ್ಧ Sri Uttaradi Math, Bangalore ದ್ವಿತೀಯ ದಿನದಂದು ಮಧ್ಯಾಹ್ನ “ಮಹಿಷಿ”ಕ್ಷೇತ್ರದಲ್ಲಿ ಶ್ರೀರಾಮದೇವರಪಾದಾರವಿಂದದಲ್ಲಿಐಕ್ಯರಾಗು
ತ್ತಾರೆ.
ಶ್ರೀಸತ್ಯಸಂಧಗುರುಗಳುಹಲವಾರುಮಹಿಮೆಗಳನ್ನು ತೋರಿಸಿ ಭಕ್ತರಿಗೆಅನುಗ್ರಹಮಾಡುತ್ತಾಮಲೆನಾಡು ಪ್ರಕೃತಿ ಸೌಂದರ್ಯದ ನಡುವೆ ಪವಿತ್ರ ತುಂಗೆಯ ತೀರದಲ್ಲಿರುವಮಹಿಷಿಕ್ಷೇತ್ರದಲ್ಲಿಶ್ರೀಅಶ್ವತ್ಥನಾರಾಯಣ,ಲಕ್ಷ್ಮಿನರಸಿಂಹ ದೇವರ ಸೇವೆ ಮಾಡುತ್ತಾ ವಿರಾಜ ಮಾನರಾಗಿದ್ದಾರೆ.
ಇವರು ರಚಿಸಿರುವ ಕೃತಿಗಳಾದ ವಿಷ್ಣು ಸ್ತುತಿ ಮತ್ತು
ವಿಷ್ಣುಸಹಸ್ರನಾಮ ಭಾಷ್ಯದಲ್ಲಿ ಪರಮಾತ್ಮನನ್ನು ಭಜಿಸಿರುವ ರೀತಿ ಬಹಳ ಅದ್ಭುತವಾಗಿದೆ.
ಶ್ರೀಗಳವರ ಆರಾಧನೆಯು ಜ್ಯೇಷ್ಠ ಶುದ್ಧ ದ್ವಿತೀಯ ದಂದು ಅವರ ಮೂಲ ಬೃಂದಾವನ ವಿರುವ ಮಹಿಷಿಕ್ಷೇತ್ರದಲ್ಲಿ ಪ್ರಸ್ತುತ ಉತ್ತರಾಧಿ ಮಠಾಧೀಶರಾಗಿರುವಪೂಜ್ಯಶ್ರೀಸತ್ಯಾತ್ಮತೀರ್ಥ
ಗುರುಗಳ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಭಕ್ತಾದಿಗಳಸಹಕಾರದಿಂದಬಹಳವಿಜೃಂಭಣೆ
ಯಿಂದ ಆಚರಿಸಲಾಗುತ್ತದೆ.
ಶ್ರೀಗಳವರ ಆರಾಧನೆಯ ಪರ್ವದಿನದಂದು ಭಕ್ತಿಯನಮನಗಳನ್ನು ಅರ್ಪಿಸಿ ಅವರಅನುಗ್ರಹಕ್ಕೆ ಪಾತ್ರರಾಗೋಣ.

ಲೇ: ಎನ್.ಜಯಭೀಮ್ ಜೊಯ್ಸ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...