Sunday, October 18, 2026
Sunday, October 18, 2026

Adikavi Pampa ಸರ್ವಕಾಲಕ್ಕೂ ಸಲ್ಲುವ ಕವಿ ಪಂಪ- ಡಾ.ಜಯಶೀಲ

Date:

Adikavi Pampa ಕನ್ನಡದ ಆದಿಕವಿ ಪಂಪ ತನ್ನ ಸಾಹಿತ್ಯದಲ್ಲಿ ಸ್ಪಷ್ಟವಾದ ಮಾಹಿತಿಯನ್ನು ಕೊಟ್ಟಿರುವ ಏಕೈಕ ಕವಿಯಾಗಿದ್ದಾನೆ.ಕನ್ನಡದ ಅಗ್ರಮಾನ್ಯ ಕವಿಯಾದ ಪಂಪ ಸರ್ವಕಾಲಕ್ಕೂ ಸಲ್ಲುವ ಕವಿ ಎಂದು ವಿಶ್ರಾಂತ ಪ್ರಾಂಶುಪಾಲ ಡಾ. ಬಿ.ಎಂ.ಜಯಶೀಲ ಹೇಳಿದರು.

ದಿನಾಂಕ 17-05-2023 ರಂದು ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಹೊಂಬುಜ ಜೈನ ಮಠ ಹುಂಚ ದ ದತ್ತಿದಾನದಲ್ಲಿ ನಡೆದ ಪಂಪ ಜಯಂತೋತ್ಸವ ದತ್ತಿನಿಧಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಪಂಪ ತನ್ನ ಕೃತಿಯಲ್ಲಿ ಜೈನ ಧರ್ಮದ ಪ್ರಸ್ತುತಿ, ಪ್ರಚಾರ, ಮಾನವನ ಮಹೋನ್ನತ ಚರಿತ್ರೆಯನ್ನು ಪರಿಚಯಿಸಿದ ಕೀರ್ತಿ ಪಂಪನಿಗೆ ಸಲ್ಲುತ್ತದೆ. ಪಂಪನ ಕೃತಿಯಲ್ಲಿ ಕಾವ್ಯ ಧರ್ಮವೂ ಇದೆ, ಧರ್ಮವೂ ಇದೆ ಹೀಗಾಗಿ ಪಂಪ ಶ್ರೇಷ್ಠ ಕವಿಯಾಗಿ ಮೆರೆದಿದ್ದಾನೆ ಎಂದರು.

ಈ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಉದ್ಘಾಟಿಸಿದರು.

ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ. ಮ. ನರಸಿಂಹ ರವರು ಪ್ರಾಸ್ತಾವಿಕ ಮಾತನಾಡಿದರು.

Adikavi Pampa ಸಮಾರಂಭದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಟಿ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕ,ಸಾ,ಪ ಸಂಘಟನಾ ಕಾರ್ಯದರ್ಶಿ ಎನ್. ಮಂಜುನಾಥ್ ಕಾಮತ್,ಕ,ಸಾ,ಪ ಹೋಬಳಿ ಘಟಕದ ಅಧ್ಯಕ್ಷ ಆರ್ ನಾಗಭೂಷಣ್, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರತ್ನಾಕರ ಕುನುಗೋಡು,ಹ.ಅ. ಪಾಟೀಲ್, ರತ್ನಯ್ಯ. ಡಿ. ಗಣೇಶ್, ಸತೀಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...