Mother’s Day ಇಂದು ವಿಶ್ವ ಅಮ್ಮಂದಿರ ದಿನ. ಅಮ್ಮನ ಮಮತೆಗೆ ಹೃದಯವೇ ಕನ್ನಡಿ. ಅಮ್ಮ ಎಂದರೆ ವ್ಯಕ್ತಿಯಲ್ಲ ಅದೊಂದು ವ್ಯಕ್ತಿತ್ವ. ಅಮ್ಮನ ಪ್ರೀತಿ ಎಲ್ಲ ಪ್ರೀತಿಯನ್ನು ಮೀರಿಸುವ ಅತ್ಯಮೂಲ್ಯ ಪ್ರೀತಿ. ಅಮ್ಮನ ಪ್ರೀತಿಯೇ ಹಾಗೆ…
ಮಗು ಗರ್ಭದಲ್ಲಿ ಇದ್ದಾಗಲೇ, ಆಕೆ ತನ್ನ ಮಗುವನ್ನ ಪ್ರೀತಿಸಲು ಆರಂಭಿಸುತ್ತಾಳೆ. ಆ ಮಗು ಬೆಳೆದು ದೊಡ್ಡವರಾದರೂ ಕೂಡ ಅವರ ಪ್ರತಿಯೊಂದು ಹೆಜ್ಜೆಯಲ್ಲಿ ಹುಮ್ಮಸ್ಸು ನೀಡಿ ಹಾರೈಸುತ್ತಾಳೆ.

ಅಮ್ಮನೇ ಹಾಗೆ ಮಮತಾ ಸ್ವರೂಪಿ. ಆಕೆಯ ಎದೆಯೊಳಗಿನ ಮಮತೆಯ ಚಿಲುಮೆ ಎಂದೂ ಆರೋದಿಲ್ಲ. ಪೀಳಿಗೆಯಿಂದ ಪೀಳಿಗೆ ಬದಲಾದರೂ ಅಮ್ಮ ಎನ್ನುವ ವ್ಯಕ್ತಿತ್ವ ಎಂದಿಗೂ ಬದಲಾಗುವುದಿಲ್ಲ. ಅಮ್ಮ ಎಂಬ ಶಬ್ದ ಅದು ಹೊರ ಹಾಕುವ ಭಾವನೆಗಳಿಗಿರುವ ಶಕ್ತಿ ಅಗಾಧ. ಪ್ರತಿಯೊಂದು ತಾಯಿ ಕೂಡ ಶ್ರೀಮಂತ, ಬಡವ ತಾಯಿಯಾದರು ಕೂಡ ತನ್ನ ಮಗುವನ್ನು ತನಗಿಂತಲೂ ಹೆಚ್ಚು ಪ್ರೀತಿಸುವ ಜೀವಿ.
ಆಪ್ಪನೆಂದರೆ ಆಕಾಶ ಎಂದರು ನಮ್ಮ ಕವಿಗಳೊಬ್ಬರು.
ನಾನು ಹೇಳುವೆ
ಅಮ್ಮನೆಂದರೆ
ಆಕಾಶದ ತಾರೆಗಳ
ಹೊಳಪನ್ನ
ನಮಗುಣ್ಣಿಸುವವಳು.
ಮತ್ತಷ್ಟೇ ಮಿರುಗುವ
ನಾಳೆಗಳ ಕಟ್ಟಿಕೊಡುವವಳು.
ಅಮ್ಮ ನಿನಗೆ
ಯಾರು ಸಾಟಿ.
Mother’s Day ಅಮ್ಮನಿಗೆ ಅಮ್ಮನೇ.
ಕೆ ಲೈವ್ ನ್ಯೂಸ್ ಬಳಗ ವತಿಯಿಂದ ಸಮಸ್ತ ತಾಯಿಯಂದಿರಿಗೆ ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು…
