NES Institute ರಾಷ್ಟ್ರೀಯ ಶಿಕ್ಷಣ ಸಮಿತಿ ನೂತನ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಪ್ರೊ. ಎನ್.ಕೆ.ಹರಿಯಪ್ಪ ಅವರಿಗೆ ಶಿವಮೊಗ್ಗ ನಗರದ ಎಟಿಎನ್‌ಸಿಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಎಟಿಎನ್‌ಸಿಸಿ ಕಾಲೇಜಿನಲ್ಲಿ 30 ವರ್ಷಗಳ ಕಾಲ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಸಮರ್ಥ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದ ಪ್ರೊ. ಎನ್.ಕೆ.ಹರಿಯಪ್ಪ ಅವರಿಗೆ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಯುವ ರೆಡ್‌ಕ್ರಾಸ್, ಎನ್‌ಸಿಸಿ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಎಟಿಎನ್‌ಸಿಸಿ ಕಾಲೇಜಿನ ಪ್ರಾಚಾರ್ಯ ಪ್ರೊ. ಕಾಜೀಂ ಷರೀಷ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಳ ಸಜ್ಜನಿಕೆಯ ಬಹುಮುಖ ವ್ಯಕ್ತಿತ್ವ ಹೊಂದಿರುವ ಸೂಕ್ತ ವ್ಯಕ್ತಿಗೆ ಅತ್ಯಂತ ಉನ್ನತ ಜವಾಬ್ದಾರಿ ಸಿಕ್ಕಿರುವುದು ನಮಗೆಲ್ಲ ಸಂತೋಷ ಉಂಟುಮಾಡಿದೆ ಎಂದು ಹೇಳಿದರು.
NES Institute ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಎನ್‌ಇಎಸ್ ನೂತನ ಕುಲಸಚಿವ ಪ್ರೊ. ಎನ್.ಕೆ.ಹರಿಯಪ್ಪ ಅವರಿಗೆ ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಎನ್.ಕೆ.ಹರಿಯಪ್ಪ, ಕಾಲೇಜಿನ ಕುಲಸಚಿವನಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಲಿದ್ದೇನೆ ಎಂದು ತಿಳಿಸಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್‌ಕುಮಾರ್, ಕಾಲೇಜಿನ ಉಪನ್ಯಾಸಕರಾದ ಸಂತೋಷ್, ಸ್ಮಿತಾ ರೂಪೇಶ್, ಸಮಿವುಲ್ಲಾ ಖಾನ್, ಪ್ರೊ. ಎಸ್.ಜಗದೀಶ್, ಪ್ರೊ. ಕೆ.ಎಂ.ನಾಗರಾಜ, ಪ್ರೊ. ಮಂಜುನಾಥ್, ಲಲಿತಾ, ಗಾಯತ್ರಿ, ಗಿರಿಜಾ ಹೊಸಮನಿ, ಶೃತಿ ಮತ್ತಿತರರು ಉಪಸ್ಥಿತರಿದ್ದರು.