Voter Helpline ವಿಧಾನಸಭಾ ಚುನಾವಣೆ ಮೇ.10ರಂದು ನಡೆಯಲಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಮತದಾನ ದ ಹಕ್ಕಿದೆ. ಮತದಾನ ಎಂಬುದು ಪ್ರಜಾಪ್ರಭುತ್ವದ ಗಟ್ಟಿಯಾದ ದ್ವನಿ. ನಮ್ಮ ನಾಯಕರನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಒಂದು ಹಕ್ಕು. ಇದನ್ನು ನಾವು ಸಮರ್ಥವಾಗಿ ನಿರ್ವಹಿಸಬೇಕು.
ಹೊಸದಾಗಿ ಸೇರ್ಪಡೆಗೊಂಡ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಅವರಲ್ಲಿ ಕಾಡುತ್ತಿರುತ್ತದೆ. ಆದರೆ ಈಗ ಆ ಗೊಂದಲದಿಂದ ಹೊರಬರುವುದು ಹೊರಬರ ಬಹುದು…
ಏನಿದು ಅಂತ ಯೋಚನೆ ಮಾಡ್ತಾ ಇದ್ದೀರಾ…!
ವಿಎಚ್ಎ ಆ್ಯಪ್ , ಮತ್ತು ಎನ್ ವಿ ಎಸ್ ಪಿ ಪೋರ್ಟಲ್ ನಲ್ಲಿ ಮತಗಟ್ಟೆ ವಿವರ ಸೇರಿದಂತೆ, ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದು.
Voter Helpline ಈ ಆ್ಯಪ್ ನ್ನು ಬಳಸುವುದು ಹೇಗೆಂದರೆ…?
ನಿಮ್ಮ ಮೊಬೈಲ್ ನಲ್ಲಿ ವಿಎಚ್ ಎ ಆ್ಯಪ್ ನ್ನೂ ಡೌನ್ಲೋಡ್ ಮಾಡಿಕೊಳ್ಳಬೇಕು. ಮತದಾರರ ಹೆಸರು, ತಂದೆ ಹೆಸರು, ವಯಸ್ಸು, ರಾಜ್ಯ, ಜಿಲ್ಲೆಯ ಹೆಸರು ನಮೂದಿಸಬೇಕು. ಡೀಟೇಲ್ಸ್ ಗಳನ್ನು ನಮೂದಿಸಿದ ಬಳಿಕ ಮತದಾರರ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬುದು ತಿಳಿಯುತ್ತದೆ.
https://ceo.karnataka.gov.in/ ಮತ್ತು ಎನ್ ವಿ ಎಸ್ ಪಿ ನಲ್ಲಿ ಮತದಾರರ ವಿವರ ,ಮತಗಟ್ಟೆ ಮಾಹಿತಿ ಪಡೆದುಕೊಳ್ಳಬಹುದು.