Wednesday, September 16, 2026
Wednesday, September 16, 2026

Voters Awareness ಶಿವಮೊಗ್ಗ ಶಾಹಿ ಗಾರ್ಮೆಂಟ್ಸ್ ನಲ್ಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ

Date:

Voters Awareness ಕಾರ್ಮಿಕ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,
ಕಾರ್ಮಿಕ ಇಲಾಖೆ ಹಾಗೂ ಶಾಹಿ ಎಕ್ಸ್ಪೋರ್ಟ್ ಪ್ರೈ.ಲಿ ಇವರ
ಸಹಯೋಗದೊಂದಿಗೆ ಕಾರ್ಮಿಕ ದಿನಾಚರಣೆ ಹಾಗೂ
ಮತದಾನದ ಅರಿವು ಕಾರ್ಯಕ್ರಮವನ್ನು ಶಾಹಿ ಎಕ್ಸ್ಪೋರ್ಟ್
ಗಾರ್ಮೆಂಟ್ಸ್ ನಲ್ಲಿ ಹಮ್ಮಿಕೊಂಡಿದ್ದು, ಹಿರಿಯ ಸಿವಿಲ್ ನ್ಯಾಯಾಧೀಶರು
ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ
ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ ಕಾರ್ಯಕ್ರಮವನ್ನು ಉದ್ಘಾಟಿಸಿ
ಕಾರ್ಮಿಕ ದಿನಾಚರಣೆಯ ಹಿನ್ನಲೆ, ಕಾರ್ಮಿಕರು ಮತ್ತು
ಮಾಲೀಕರ ನಡುವಿನ ಸಂಬಂಧ, ಹಾಗೂ ಕಾರ್ಮಿಕ
ದಿನಾಚರಣೆಯ ಮಹತ್ವದ ಬಗ್ಗೆ ಕಾರ್ಮಿಕರಿಗೆ ತಿಳಿಸಿದರು.

Voters Awareness ರಘುನಾಥ ಎ.ಎಸ್ ಯೋಜನಾ ನಿರ್ದೇಶಕರು ಮೇ-10ರ
ಚುನಾವಣೆಯಲ್ಲಿ ಕಾರ್ಮಿಕರೆಲ್ಲರೂ ರಜೆಯೊಂದಿಗೆ ತಮ್ಮ
ಅಮೂಲ್ಯವಾದ ಮತವನ್ನು ಚಲಾಯಿಸಬೇಕಾಗಿ ಕಾರ್ಮಿಕರಲ್ಲಿ
ಚುನಾವಣೆಯ ಅರಿವು ಮೂಡಿಸಿದರು.

ಸುಖಿತ ಕೆ.ಸಿ ಕಾರ್ಮಿಕ
ನಿರೀಕ್ಷಕರು, 01ನೇ ವೃತ್ತ, ಶಿವಮೊಗ್ಗ ಇವರು ಕಾರ್ಮಿಕ
ಕಾಯ್ದೆಗಳ ಬಗ್ಗೆ ಮತ್ತು ಕಾರ್ಮಿಕರ ಕಾರ್ಯಗಳ ಬಗ್ಗೆ
ಕಾರ್ಮಿಕರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ
ಉಮೇಶ್ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...