World Book Day ಅಕ್ಷಸ್ಥರ ಮಾಧ್ಯಮ ಪುಸ್ತಕ .ಈಗಿನ ಐಟಿ ಯುಗದಲ್ಲಿ ಡಿಜಿಟಲ್ ಆಗಿ ತನ್ನ ಸ್ವರೂಪಕ್ಕೆ ಹೊಸ ಆಯಾಮ ಪಡೆದುಕೊಂಡಿದೆ.
ಒಂದುಕ್ಷಣ ಯೋಚಿಸಿ!.ಪುಸ್ತಕ ಅರ್ಥಾತ್ ಗ್ರಂಥಗಳೇ ಇಲ್ಲದಿದ್ದರೆ ಏನಾಗುತ್ತಿತ್ತು? ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಮೊಟ್ಟಮೊದಲಿಗೆ
ಇಂದು ನಾವು ಅಪಾರ ಭಕ್ತ್ಯಾದರಗಳಿಂದ ಕಾಣುವ ಧರ್ಮಗ್ರಂಥಗಳೇ ಲಭ್ಯವಾಗುತ್ತಿರಲಿಲ್ಲ.
ಇದು ಎಲ್ಲ ಧರ್ಮೀಯರಿಗೂ ಅನ್ವಯಿಸುತ್ತದೆ.
ಮನುಷ್ಯನ ಜ್ಞಾನದ ಬೆಳವಣಿಗೆಯ ಹಂತಗಳು, ಸಂಶೋಧನೆಗಳು ಅದರ ಫಲಿತಾಂಶಗಳು ನಮಗೆ ಸಿಗುತ್ತಿರಲಿಲ್ಲ.
ಮುಖ್ಯವಾಗಿ ಆಯಾ ದೇಶಗಳ ಇತಿಹಾಸ,ಚರಿತ್ರೆಗಳೂ ಅಷ್ಟೆ.
ಮನುಷ್ಯ ಜನಾಂಗದ ಅಭಿವ್ಯಕ್ತಿಯಾಗಿ ಭಾಷೆ ಕರಗತದಾಗ
ಬರವಣಿಗೆ ಸಿದ್ಧಿಸಿತು.
ಆ ಬರಹಗಳು ಓಲೆಗರಿ,ತಾಳೆಗರಿಗಳಲ್ಲಿ ,ತಾಮ್ರ ಮತ್ತು ಶಿಲಾ ಕೆತ್ತನೆಗಳಲ್ಲಿ ಮೂಡಿ ಅಲ್ಲೇ ಅಡಗಿದ್ದವು.
ನಂತರ ಸಂಶೋಧನಾ ಪ್ರವೃತ್ತಿಯ ಪ್ರತಿಭಾವಂತರಿಂದ ಮುದ್ರಣ ಕಲೆಯ ಆವಿಷ್ಕಾರದಿಂದ ಅವುಗಳು ಪುಸ್ತಕರೂಪತಾಳಿದವು. ಗ್ರಂಥಾಲಯಗಳಲ್ಲಿ ಲಭ್ಯವಾದವು.
ಮತ್ತಷ್ಟು ಮನುಷ್ಯ ವಿಕಾಸವಾದಂತೆ ಯೋಚನೆ,ಕಲ್ಪನೆಗಳಿಗೆ ಅವಕಾಶ ಸಿಕ್ಕವು.
ಕತೆ,ಕಾವ್ಯ, ಕಾದಂಬರಿ,ಪ್ರಬಂಧನಾಟಕ ಹೀಗೆ ಬರಹಗಳು ನಮಗೆ ಪ್ರವಾಹೋಪಾದಿಯಲ್ಲಿ ಓದಲು ದೊರೆತಿವೆ.
World Book Day ಪುಸ್ತಕಗಳ ಈ ಮಹತ್ವವನ್ನ ನಮ್ಮ ಮಕ್ಕಳಿಗೆ ತಿಳಿಯಹೇಳುವ ಉದ್ದೇಶದಿಂದ ವಿಶ್ವಸಂಸ್ಥೆಯ ಯುನೆಸ್ಕೊ ವಿಭಾಗವು ಪ್ರತೀ ವರ್ಷದ ಏಪ್ರಿಲ್ 23 ನ್ನು ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. ಈ ಆಚರಣೆ 1995 ರಿಂದ ಆರಂಭಗೊಂಡಿದೆ.
ವಿಶ್ವ ಪುಸ್ತಕ ದಿನದ ಸಂಸ್ಥಾಪಕ
ಬರೊನಸ್ ಗೈಲ್ ರೆಬಕ್ ಪ್ರಕಾರ
” ಹಿಂದಿನಂತೆ ನಮ್ಮ ಗುರಿಯೂ ಓದಿನ ಪ್ರಕ್ರಿಯೆಯನ್ನ ಮರುಹೊಂದಿಸುವುದೇ ಆಗಿದೆ.ನಮ್ಮ ಸಂದೇಶವು ವರ್ತಮಾನದಲ್ಲಿ ಓದಿನ ಸಂತೋಷ,ಮಜಾ , ಪ್ರಸ್ತುತತೆ, ,ಸ್ವೀಕೃತಿ ಇತ್ಯಾದಿಗಳಿಂದ ನಮ್ಮ ಬದುಕನ್ನೇ ಬದಲಿಸುವ ಚೈತನ್ಯ ಅದರಲ್ಲಿದೆ.
ಲೇ: ಡಾ.ಸುಧೀಂದ್ರ, ಕೆ ಲೈವ್ ಸಂಪಾದಕರು