Friday, March 20, 2026
Friday, March 20, 2026

Sarji Foundation ಮನುಷ್ಯನ ಅಂಗಾಂಗ ಮತ್ತು ಅಂಗಾಂಶಗಳ ದಾನವು ಎಂಟು ಮಂದಿಯ ಜೀವವುಳಿಸುತ್ತದೆ

Date:

Sarji Foundation ಒಬ್ಬ ಮನುಷ್ಯ ಅಂಗಾಂಗ ಮತ್ತು ಅಂಗಾಂಶಗಳನ್ನು ಬೇರೆಯವರಿಗೆ ದಾನ ಮಾಡುವುದರಿಂದ ಎಂಟು ಮಂದಿಯ ಜೀವವನ್ನು ಉಳಿಸಬಹುದದಲ್ಲದೇ, 75 ಮಂದಿಗೆ ಹೊಸ ಜೀವನವನ್ನು ಕಲ್ಪಿಸಬಹುದು ಎಂದು ಶಿವಮೊಗ್ಗ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಹೇಳಿದರು.


ಶಿಕಾರಿಪುರ ಪಟ್ಟಣದ ಮೈತ್ರಿ ಸ್ಕೂಲ್‌ ಆವರಣದಲ್ಲಿ ಪರೋಪಕಾರಂ ತಂಡದ 200 ನೇ ಶ್ರಮಾದಾನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ನೇತ್ರದಾನ ಮತ್ತು ದೇಹದಾನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಅಂಗಾಂಗ ದಾನ ಮಾಡುವ ಕುರಿತಂತೆ ಜನರಲ್ಲಿ ಅರಿವಿನ ಕೊರತೆ ಇದೆ, ಹಾಗಾಗಿ ಲಕ್ಷಾಂತರ ಮಂದಿಗೆ ಅಗತ್ಯ ಅಂಗಾಂಗಗಳು ಲಭ್ಯವಾಗದೇ ಮರಣ ಹೊಂದುತ್ತಿದ್ದಾರೆ. ಅಂಗಾಂಗ ದಾನ ಮಾಡುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


Sarji Foundation ವ್ಯಕ್ತಿಯ ಮರಣಾನಂತರ ಎರಡು ಕಣ್ಣನ್ನು ದಾನ ಮಾಡಿದಾಗ ಇಬ್ಬರಿಗೆ ಜೀವನ ನೀಡಿದಂತಾಗುತ್ತದೆ. ಭಗವಂತನ ಸೃಷ್ಟಿಯಲ್ಲಿ ಒಬ್ಬ ಎಂಟು ಅಂಗಗಳನ್ನು ದಾನ ಮಾಡಬಹುದು. ಎಂಟು ಜನಕ್ಕೆ ಜೀವವನ್ನು ಕೊಡಬಹುದು, 75 ಅಂಗಾಂಶಗಳನ್ನು ಕೊಡುವ ಮೂಲಕ ಹೊಸ ಜೀವನ ಕೊಡಬಹುದು. ಹೃದಯ, ಕಿಡ್ನಿ, ಕಣ್ಣು, ಲಿವರ್‌, ಲಂಗ್ಸ್, ಪ್ಯಾಂಕ್ರಿಯಾಸ್‌, ಚರ್ಮ ಸೇರಿದಂತೆ ಹತ್ತಾರು ಅಂಗಾಂಗ ಹಾಗೂ ಅಂಗಾಂಶಗಳನ್ನು ದಾನ ಮಾಡಬಹುದು ಎಂದರು.


ಪ್ರಸ್ತುತ ನಮ್ಮ ದೇಶದಲ್ಲಿ ಅಂಗಾಂಗಗಳ ಕೊರತೆಯಿಂದ ಪ್ರತಿ ವರ್ಷ ಐದು ಲಕ್ಷ ಜನ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಒಂದು 1ಲಕ್ಷದ 75 ಸಾವಿರ ಜನ ಕಿಡ್ನಿ ಇಲ್ಲದೇ ಜೀವ ಕಳೆದುಕೊಳ್ಳುತ್ತಿದ್ದಾರೆ. ವರ್ಷಕ್ಕೆ 50 ಸಾವಿರ ಜನ ಬೇರೆಯವರು ಹಾರ್ಟ್‌ ಕೊಟ್ಟರೆ ಮಾತ್ರ ಬದುಕುವಂತಹ ಪರಿಸ್ಥಿತಿ ಇದೆ, 20 ಸಾವಿರ ಜನಕ್ಕೆ ಪ್ಯಾಂಕ್ರಿಯಾಸ್‌ ಅಗತ್ಯವಿದೆ. ಅದೇ ರೀತಿ 30 ಸಾವಿರ ಜನಕ್ಕೆ ಲಂಗ್‌ರ‍ಸ ಅಗತ್ಯವಿದೆ. ಹೀಗೆ ನಾನಾ ರೀತಿಯ ಅಂಗಾಂಗಗಳ ಕೊರತೆಯಿಂದ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.


ಬೇರೆ ದೇಶಗಳಲ್ಲಿ ವರ್ಷಕ್ಕೆ 5 ಲಕ್ಷ ಜನಕ್ಕೆ ಐದು ಮಂದಿ ಅಂಗಾಂಗ ದಾನ ಮಡಿದರೆ, ನಮ್ಮ ದೇಶಲ್ಲಿ 20 ಲಕ್ಷಕ್ಕೆ ಒಬ್ಬ ಮಾತ್ರ ದಾನ ಮಾಡುತ್ತಿದ್ದಾನೆ. ಇದಕ್ಕೆ ಅರಿವು , ಜಾಗೃತಿ ಇಲ್ಲದಿರುವುದೇ ಕಾರಣ. ಹಾಗಾಗಿ ನಾವು ಅಂಗಾಂಗ ದಾನದ ಬಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಪರೋಪಕಾರಂ ಶ್ರೀಧರ್‌, ದುಮ್ಮಳ್ಳಿ ರಾಜಣ್ಣ,ಜಯಸ್ವಾಮಿ,ಸುನಿಲ್‌ ರಾಯ್ಕರ್‌, ಕಿರಣ್‌ ಡೋಯಿಜೋಡೆ,ಚಿನ್ಮಯ್‌, ಕಾರ್ಪೆಂಟರ್‌ ಕುಮಾರ್‌, ಶಿಕಾರಿಪುರ ಪರೋಪಕಾರಂ ತಂಡದ ಗಣಪತಿಭಟ್‌, ಮಧುಕೇಶ್ವರ್‌, ಲಕ್ಷ್ಮಣ, ರಾಜಪ್ಪ, ಗಂಗಾಧರ್‌ ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...