Friday, March 20, 2026
Friday, March 20, 2026

International Women’s Day ಮಹಿಳೆ ಅಪಾರ ಶಕ್ತಿಯುಳ್ಳ ಚೇತನ-ಡಾ.ಶುಭಾ ಮರವಂತೆ

Date:

International Women’s Day ಪದಾರ್ಥಗಳನ್ನು ರುಚಿಕರ ಅಡಿಗೆಯಾಗಿ , ಮನೆಯನ್ನು ಗೃಹವಾಗಿ , ಒಂದು ಜೀವವನ್ನು ಶಕ್ತಿಯಾಗಿ ಮಾರ್ಪಡಿಸುವ ಅಪಾರ ಶಕ್ತಿ ಕೇವಲ ಒಬ್ಬ ಮಹಿಳೆಗೆ ಮಾತ್ರ ಎಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗು ಪ್ರಬಲ ವಾಗ್ಮಿಯಾದ ಡಾ .ಶುಭಾ ಮರವಂತೆಯವರು ಹೇಳಿದರು.

ಮಾರ್ಚ್ 8 ರಂದು ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭಾರತೀಯ ವೈದ್ಯಕೀಯ ಸಂಘ (ಐಎಂಎ ) ಶಿವಮೊಗ್ಗ ಶಾಖೆಯ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಆರೋಗ್ಯ ಕ್ಷೇತ್ರದಲ್ಲಿ ಮಹಿಳೆ ವಿಷಯ ಮಂಡಿಸುತ್ತಾ , ಸಾಹಿತ್ಯ ಲೋಕಕ್ಕೆ ಕಾಲಿಟ್ಟ ಶಿವಮೊಗ್ಗೆಯ ಬಹಳಷ್ಟು ಮಹಿಳಾ ವೈದ್ಯರ ಸಮಯ ಪಾಲನೆಯಿಂದ ವಿಸ್ಮಯ ಹುಟ್ಟಿಸುತ್ತಿದ್ದಾರೆ . ಮಹಿಳಾ ವೈದ್ಯರೆಂದರೆ ದಶಭುಜ ಸ್ವರೂಪ ದೇವಿ ಸಮಾನರಾಗಿ ಕಾಣುತ್ತೀರ ಎಂದು ಹೇಳುತ್ತಾ , ನಮ್ಮ ದೇಶದ ಮೊದಲ ಮಹಿಳಾ ವೈದ್ಯರಾದ ಡಾ. ಆನಂದಿ ಬಾಯಿ , ಡಾ . ಕದಂಬಿನಿ ಗಂಗೂಲಿಯವರ ಜೀವನ ಚರಿತ್ರೆಯನ್ನು ಮೆಲುಕು ಹಾಕಿದರು.

ಮತ್ತೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಪ್ರಸೂತಿ ಹಾಗು ಸ್ತ್ರೀರೋಗ ತಜ್ಞೆ ಡಾ . ಉಷಾ ರಮೇಶ್ ಅವರು ಮಹಿಳಾ ವೈದ್ಯರ ಕೆಲಸ-ಮನೆ ನಿರ್ವಹಣೆ ಗೆ ಸುಲಭ ಸೂತ್ರಗಳ ಬಗ್ಗೆ ಮಾತನಾಡುತ್ತ ಮಹಿಳಾ ವೈದ್ಯರ ಸವಾಲುಗಳು , ಮಕ್ಕಳು ಹಾಗು ಕುಟುಂಬ ಮತ್ತು ವೈಯುಕ್ತಿಕ ಬದುಕಿನ ಒತ್ತಡವನ್ನು ಸರಿಯಾದ ಶಿಸ್ತಿನ ಬದುಕು , ಸಮಯದ ಯೋಜನೆಯಿಂದ ಯಶಸ್ವಿಯಾಗಿ ಎದುರಿಸಿ ಸುಖಕರ ಬಾಳ್ವೆ ಮಾಡಿ , ಇತರ ಹವ್ಯಾಸಗಳ ಕೃಷಿಗೂ ಅವಕಾಶ ಕಲ್ಪಿಸಿಕೊಳ್ಳಬಹುದೆಂದು ಹುರಿದುಂಬಿಸಿದರು .

ಐಎಂಎ ಸದಸ್ಯರಾದ ಡಾ . ಜಯಕುಮಾರ್ ಶೆಟ್ಟಿಯವರ ಪತ್ನಿ ಶ್ರೀಮತಿ ಶ್ರೀಕಲಾ ಶೆಟ್ಟಿಯವರು ತಮ್ಮ ಆಪ್ತರಿಗೆ ಯಕೃತ್ತು ಅಂಗಾಂಗ ದಾನ ಮಾಡಿ ಹೃದಯತೆ ಮೆರೆದಿದ್ದಕ್ಕೆ ಗೌರವಿಸಲಾಯಿತು .

ಐಎಂಎ ಅಧ್ಯಕ್ಷರಾದ ಡಾ. ಅರುಣ್ ಎಂ .ಎಸ್ ಮಾತನಾಡಿ ಕಟ್ಟು ಪಾಡುಗಳು , ಸಾಮಾಜಿಕ ನಿರೀಕ್ಷೆಗಳಿಂದ ನಮ್ಮ ಸಮಾಜ ಮಹಿಳೆಯರನ್ನು ಶೋಷಣೆ ದೌರ್ಜನ್ಯಗಳಿಗೆ ಗುರಿಪಡಿಸುತ್ತಲೇ ಇದೆ . ಮಹಿಳಾ ಶಿಕ್ಷಣ , ಬದಲಾದ ಹಕ್ಕುಗಳು , ಲಿಂಗ ಸಮತೋಲನ ಇವೆಲ್ಲವುಗಳ ಬಗ್ಗೆ ನಾವಿಂದು ಮಾತನಾಡುತ್ತಿರುವುದು ಸ್ವಾಗತಾರ್ಹ ಅನಿಸಿದರೂ , ನಿಜವಾದ ಬದಲಾವಣೆ ಅವಳನ್ನು ಇದ್ದ ಹಾಗೆ ಒಪ್ಪಿಕೊಂಡು , ಯಾವುದೇ ಸ್ವಾರ್ಥ -ಅಹಂಕಾರಕ್ಕೆ ಬಳಸದೆ , ಸಹಜೀವಿ ತರಹ ನೋಡುವುದರಿಂದ ಶುರುವಾಗಲಿ ಎಂಬ ಸಂದೇಶ ನೀಡಿದರು .

International Women’s Day ಐಎಂಎ ಮಹಿಳಾ ವೈದ್ಯರ ವಿಭಾಗದ ಅಧ್ಯಕ್ಷೆ ಡಾ . ವಿನಯಾ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಖಜಾಂಚಿ ಡಾ. ಶಶಿಧರ್ , ಹಿರಿಯ ವೈದ್ಯರಾದ ಡಾ . ನಂದಿನಿ , ಡಾ . ನಿರ್ಮಲ , ಡಾ . ಚಿತ್ರಾ ಶ್ರೀನಿವಾಸ್ , ಡಾ. ವಿಮಲಬಾಯಿ ಹಾಗೂ ಹಲವಾರು ಮಹಿಳಾ ವೈದ್ಯರು , ಐಎಂಎ ಸದಸ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...