Saturday, October 10, 2026
Saturday, October 10, 2026

ಪುಕ್ಕಟೆ ಸೌಲಭ್ಯದ ಬಗ್ಗೆ ಪೀಯೂಷ್ ಗೋಯಲ್ ಹೇಳಿಕೆಗೆ ಕಾಂಗ್ರೆಸ್ ಖಂಡನೆ

Date:

ದೇಶದ ಬಡಜನರಿಗೆ ಪುಕ್ಕಟೆಯಾಗಿ ಸೌಲಭ್ಯಗಳನ್ನು ಕೊಟ್ಟರೆ ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಾರೆಂದು ಕೇಂದ್ರ ವಾಣಿಜ್ಯ ಸಚಿವ ಪೀಯುಷ್‌ಗೋಯಲ್ ನೀಡಿರುವ ಹೇಳಿಕೆಯು ಖಂಡನಾರ್ಹವಾಗಿದ್ದು, ನೀಡಿರುವ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಕಳೆದ ಶನಿವಾರ ನಡೆದ ಅಮೃತ ಕಾಲ ಬಜೆಟ್‌ ಕುರಿತ ಸಂವಾದದಲ್ಲಿಗೋಯಲ್‌ಅವರು ಉಚಿತ ಯೋಜನೆಗಳ ಕುರಿತು ಮಾತನಾಡುತ್ತಾ ನರೇಂದ್ರ ಮೋದಿ ಸರ್ಕಾರವು ಕಳೆದ 6 ವರ್ಷಗಳಿಂದ ಮಂಡಿಸುತ್ತಿರುವಆಯವ್ಯವದಲ್ಲಿ ಬಡ ಜನರಿಗೆ ಉಚಿತ ಯೋಜನೆಗಳನ್ನು ಕೊಡುವ ಬದಲು ನಾಗರೀಕರನ್ನು ಸಶಕ್ತಗೊಳಿಸುವ, ಉದ್ಯೋಗ ಸೃಷ್ಟಿಸುವ, ಜೀವನಗುಣಮಟ್ಟ ಹೆಚ್ಚಿಸುವ ಯೋಜನೆಗಳನ್ನು ನೀಡಿದ್ದಾರೆ ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ವೈ.ಬಿ.ಚಂದ್ರಕಾಂತ್  ಖಂಡಿಸಿದ್ದಾರೆ.


ಕಳೆದ 9 ವರ್ಷಗಳಿಂದ ವಿದ್ಯಾವಂತಯುವಕರಿಗೆಉದ್ಯೋಗಕೊಡದ ಮೋದಿ ಸರ್ಕಾರ, ಉಚಿತ ಯೋಜನೆಗಳು ಎಂದರೆ ಮಲ್ಯ, ಅಂಬಾನಿ, ನಿರವ್ ಮೋದಿ ಮತ್ತುಅದಾನಿಯಂತಹ ಹತ್ತಾರುದೇಶ ವಂಚಕರಿಗೆ ಮೋದಿ ಸರ್ಕಾರಜನರತೆರಿಗೆ ಹಣವನ್ನುಕೊಟ್ಟಂತಹ ಯೋಜನೆಗಳಲ್ಲ. ಪುಕ್ಕಟೆ ಯೋಜನೆಗಳು ಬಡಜನರಿಗೆಖಡ್ಡಾಯವಾಗಿ ಮೂಲಭೂತ ಹಕ್ಕಿನ ಭಾಗವಾಗಿಕೊಡಲೇಬೇಕಾದ ಕನಿಷ್ಠ ಸೌಲಭ್ಯಗಳಾಗಿವೆ ಎಂದು ವಕ್ತಾರರಾದ ವೈ.ಬಿ.ಚಂದ್ರ ಕಾಂತ್ ಹೇಳಿದ್ದಾರೆ.


ದೇಶದ ಪ್ರತಿಯೊಬ್ಬ ಪ್ರಜೆಯು ಬಡವ ಶ್ರೀಮಂತ ಎನ್ನದೆ ದಿನನಿತ್ಯದ ಒಂದಿಲ್ಲೊಂದು ರೀತಿಯಲ್ಲಿ ಶೇ. 60 ಕ್ಕಿಂತಲೂ ಹೆಚ್ಚು ಹಣವನ್ನು ತೆರಿಗೆ ರೂಪದಲ್ಲಿ ಪಾವತಿಸುತ್ತಾರೆ. ಹೀಗೆ ಪಾವತಿಸಿದ ತೆರಿಗೆ ಹಣವನ್ನುಕೇಂದ್ರ ಸರ್ಕಾರ, ಮಂತ್ರಿಗಳು ಕುಳಿತುಕೊಳ್ಳೂವ ಕುರ್ಚಿಯ ಕೆಳಗೆ ಹಾಕಿಕೊಂಡು ಕುಳಿತುಕೊಳ್ಳುವುದಲ್ಲ. ಬದಲಿಗೆ ಬಡವರ ಶ್ರೇಯೋಭಿವೃದ್ದಿಗೆ ವಿವಿಧ ಉಚಿತ ಯೋಜನೆಗಳ ಮೂಕ ಪ್ರತಿಯೊಬ್ಬ ಪ್ರಜೆಯನ್ನುಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರನ್ನಾಗಿ ಮಾಡುವುದು ಸರ್ಕಾರದ ಕರ್ತವ್ಯವಾಗಿದ್ದರೂ ಇದನ್ನು ಅರಿತುಕೊಳ್ಳದೆ, ಸಚಿವ ಪೀಯೂಷ್‌ ಗೋಯಲ್‌ ಅವರು ಪುಕ್ಕಟೆ ಯೋಜನೆಗಳನ್ನು ಕೊಟ್ಟರೆ ಜನರು ಅದನ್ನು ಮಾರಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಬಡಜನರಿಗೆ ಅಗೌರವ ಮಾಡಿರುವುದರಿಂದ ಅವರು ಕೂಡಲೇ ತಾವು ನೀಡಿರುವ ಹೇಳಿಕೆಯನ್ನು ಹಿಂಪಡೆದು, ದೇಶದ ಬಡಜನರ ಕಷಮೆ ಕೇಳಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಬೈ.ಬಿ.ಚಂದ್ರಕಾಂತ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...