ಲೋಕಸಭಾ ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗ ಆಡಳಿತ ಸುಧಾರಣೆಯತ್ತ ನರೇಂದ್ರ ಮೋದಿಯವರ ಗಮನ ಹೆಚ್ಚಿಸಿದೆ. ತಮ್ಮ ಸರ್ಕಾರದ 77 ಮಂದಿ ಸಚಿವರನ್ನು ಎಂಟು ತಂಡಗಳಾಗಿ ವಿಂಗಡಿಸಿದ್ದಾರೆ.
ಪ್ರತಿ ತಂಡದಲ್ಲಿ 9ರಿಂದ 10 ಸಚಿವರು ಇರುವಂತೆ ನಿಗಾವಹಿಸಲಾಗಿದೆ. ಈ ತಂಡಗಳಲ್ಲಿ ಒಬ್ಬರು ಸಂಪುಟ ಸಚಿವರು ಇರಲಿದ್ದು, ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪ್ರತಿ ತಂಡವು ಒಂದು ವೆಬ್ ಪೋರ್ಟಲ್ ರಚಿಸಿ, ತಮಗೆ ಸೂಚಿಸಲಾಗಿರುವ ಆಡಳಿತ ಸುಧಾರಣಾ ಕ್ಷೇತ್ರದ ಕುರಿತು ಜನರಿಂದ ಮತ್ತು ತಜ್ಞರಿಂದ ಮಾಹಿತಿ ಕಲೆ ಹಾಕುತ್ತಿರಬೇಕು.
ಸಚಿವ ಸಂಪುಟ ಸಹೋದ್ಯೋಗಿಗಳು, ಕಿರಿಯ ಸಚಿವರು, ಹಿರಿಯ ಸಚಿವರು, ಒಬ್ಬರನ್ನೊಬ್ಬರು ಗೌರವಿಸಿ, ಪಕ್ಷ ಹಾಗೂ ಸರ್ಕಾರದ ಕೆಲಸಗಳನ್ನು ಸಮನ್ವಯತೆ ಸಾಧಿಸಿಕೊಳ್ಳಲು ಆದ್ಯತೆ ನೀಡಬೇಕು.
ನಿವೃತ್ತ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಆಡಳಿತದ ಲೋಪದೋಷಗಳ ಕುರಿತು ವಿಸ್ತೃತ ವರದಿ ಪಡೆಯಬೇಕು.
ಪ್ರತಿ ತಂಡವು ದೇಶದ ವಿವಿಧ ರಾಜ್ಯಗಳಲ್ಲಿ ನ ಎಲ್ಲಾ ಜಿಲ್ಲೆಗಳು, ರಾಜ್ಯ ಇಲಾಖೆಗಳ ಕೈಪಿಡಿ ರಚಿಸಬೇಕು. ಅದನ್ನು ಸೂಕ್ತ ಹೂಡಿಕೆದಾರರಿಗೆ ತಲುಪಿಸಿ ಹೊಸ ಯೋಜನೆಗಳನ್ನು ಘೋಷಿಸಬೇಕು ಎಂಬ ಆದೇಶಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನದ ಮೂಲಕ ಜನಸ್ನೇಹಿ ಆಡಳಿತ ಸುಧಾರಣೆಗಾಗಿ ಸಚಿವರ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.