ವಿಶ್ವ ಹಿಂದೂ ಪರಿಷತ್ ವತಿಯಿಂದ ಕಳೆದ 25 ವರ್ಷಗಳಿಗೂ ಹೆಚ್ಚು ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಹೆಮ್ಮೆಯ ಕಾರ್ಯಕ್ರಮ “ಶಕ್ತಿ ದೇವತೆಗಳ ಸಮಾಗಮ”.
ಶಿವಮೊಗ್ಗದ ಖ್ಯಾತ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ವಿವಿಧ ಭಾಗದಲ್ಲಿರುವ ಸುಮಾರು 45ಕ್ಕೂ ಹೆಚ್ಚು ಶಕ್ತಿ ದೇವತೆಗಳನ್ನು (ಉತ್ಸವ ದೇವತೆ ಗಳನ್ನು)ಸಂಪೂರ್ಣ ಅಲಂಕಾರದೊಂದಿಗೆ ಪ್ರತಿಷ್ಠಾಪಿಸಲಾಗುತ್ತದೆ. ಸಂಜೆವರೆಗೂ ಆ ದೇವತೆಗಳು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾವಿರಾರು ಭಕ್ತಾದಿಗಳು ಒಂದೇ ಸ್ಥಳಗಳಲ್ಲಿ ವಿವಿಧ ಶಕ್ತಿ ದೇವತೆಗಳ ದರ್ಶನ ಲಾಭ ಪಡೆಯಲು ಅನುಕೂಲವಾಗಿದೆ. ಹಿಂದೂ ಸಮಾಜದ ಎಲ್ಲ ರೀತಿಯ ಶಕ್ತಿ ದೇವತೆಗಳನ್ನು ಒಂದೇ ಕಡೆಗೆ ಸೇರಿಸುವ ಈ ಪ್ರಯತ್ನ ನಿಜಕ್ಕೂ ಮೆಚ್ಚುವಂಥದ್ದು. ಮತ್ತೆ ಹಿಂದೂ ಧರ್ಮದ ಹೆಮ್ಮೆಯ ಸಂಕೇತ ಎಂದು ಹೇಳಲು ಸಂತೋಷವಾಗುತ್ತದೆ. ಈ ಸಂದರ್ಭದಲ್ಲಿ ದೇವಾಲಯ ಗಳ ಸಂವರ್ಧನ ಸಮಿತಿಯ ಪ್ರಮುಖರಾದ ಶ್ರೀ ಮುನಿಯಪ್ಪನವರು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಶ್ರೀ ವಾಸುದೇವ್, ಮಾಜಿ ಅಧ್ಯಕ್ಷರಾದ ಶ್ರೀ ರಮೇಶ್ ಬಾಬು
,ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ. ಶ್ರೀಧರ್ ವಿಶ್ವ ಹಿಂದು ಪರಿಷತ್ ಪ್ರಧಾನ ಕಾರ್ಯದರ್ಶಿ ನಾರಾಯಣ್, ದೀನ್ ದಯಾಳ್ ,ಶ್ರೀ ಪ್ರಸಾದ್ ಹಾಗೂ ಇನ್ನಿತರ ಹಿಂದೂ ಪರಿಷತ್ ನ ಪ್ರಮುಖರು ಹಾಗೂ ಕೋಟೆ ಆಂಜನೇಯ ದೇವಸ್ಥಾನದ ಭಕ್ತಾದಿಗಳು, ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.