ಇಂದಿನ ಉದ್ಯೋಗ ಜಗತ್ತಿನಲ್ಲಿ ನಿರಾಳ ಅಂದರೆ ಸರ್ಕಾರಿ ನೌಕರಿ.ಏಕೆಂದರೆ ಅತ್ಯಂತ ಸೇವಾ ಭದ್ರತೆ ಅಲ್ಲಿ ಮಾತ್ರ ಲಭ್ಯ.
ಈಗ ಖಾಸಗಿ ಕ್ಷೇತ್ರದಲ್ಲಿ ಆಕರ್ಷಕ ಸಂಬಳ ಮತ್ತು ಸೌಲಭ್ಯಗಳಿಂದ ನೌಕರಿ ಮಾಡುವವರು ಅಪಾರ. ಒಂದುಕ್ಷಣ ಅವರ ಸೇವಾ ಭದ್ರತೆ ಬಗ್ಗೆ ಯೋಚಿಸುವ ಕಾಲ ಬಂದಿದೆ. ಒಂದು ಕಾಲದಲ್ಲಿ ಖಾಸಗಿ ಕ್ಷೇತ್ರಗಳ ಬಗ್ಗೆ
ಆಸಕ್ತಿಯೇ ಇರಲಿಲ್ಲ.
ಐಟಿಬಿಟಿ ಯುಗ ಬಂದಮೇಲೇ ಅದರತ್ತ ಸೆಳೆತ ಶುರುವಾಯಿತು.
ಕೈತುಂಬ ಸಂಬಳ ,ಸವಲತ್ತು ಇತ್ಯಾದಿ.
ವಿದ್ಯುನ್ಮಾನ ಯುಗದ ವರವೇ ಸಾಫ್ಟ್ ವೇರ್ ಪ್ರಪಂಚ. ಅದರಬೆಡಗಿಗೆ ಮಾರುಹೋಗದವರೇ ಇಲ್ಲ. ಭಾರತೀಯರಿಗಂತೂ
ತೆರೆದ ಬಾಗಿಲು. ಯಾರು ನೋಡಿ,ಕೇಳಿ ಮನೆಯಲ್ಲೊಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಇದ್ದೇ ಇದ್ದಾರೆ.
ಖಾಸಗಿ ಕಂಪನಿಗಳು
ಗತಿಶೀಲತೆಯಲ್ಲಿ ಬೇಕಾಬಿಟ್ಟಿ ನೌಕರಿ ನೀಡುತ್ತವೆ. ಆದರೆ ಅವುಗಳ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದಾಗ
ಉದ್ಯೋಗ ಕಡಿತಕ್ಕೆ ಚಿಂತಿಸುತ್ತವೆ. ಇದರಿಂದ ತಮ್ಮ ಬದುಕನ್ನ ಕಂಡುಕೊಳ್ಳುತ್ತಿರುವ ಯುವ ಮತ್ತು ಕುಟುಂಬಸ್ಥರಾಗಿ ನೆಲೆಗೊಂಡ ಉದ್ಯೋಗಿಗಳಿಗೆ ಅಧೀರತೆ ಒಡ್ಡಿದಂತಾಗುತ್ತದೆ.
ಪ್ರತೀ ಉದ್ಯೋಗಿಗಳಿಗೆ ಮುಂದಿನ ಇಂತಿಷ್ಟು ತಿಂಗಳು ಅಷ್ಟಿಷ್ಟು ಶೇಕಡ ವೇತನ ನೀಡಬೇಕೆಂದು ಕಾನೂನು ನೀತಿಇದ್ದರೂ ಉದ್ಯೋಗ ಬಿಡಬೇಕಾಗಿ ಬಂದಿರುವವರಿಗೆ ಜೀವನ ನಿರ್ವಹಣೆ ಪ್ರಶ್ನಾರ್ಥಕ ಚಿನ್ಹೆ.
ಸೇವಾಭದ್ರತೆಯೇ ಇಲ್ಲಿ ಉದ್ಯೋಗಿ ವರ್ಗವನ್ನ ಕಾಡುವ ಸಮಸ್ಯೆ. ಇದಕ್ಕೊಂದು ಸೂಕ್ತ ದೇಶೀಯ ನೀತಿಯೇ ರೂಪಗೊಳ್ಳಬೇಕು.
ಪ್ರಸ್ತುತ ಖಾಸಗಿ ಕ್ಷೇತ್ರಗಳ ದಿಗ್ಗಜರಾದ ಜುಕರ್ ಬರ್ಗ್ ಮತ್ತು ಮಸ್ಕ್ ಅವರ
ಕಂಪನಿಗಳ ಉದ್ಯೋಗ ಕಡಿತ ಸುದ್ದಿಯಲ್ಲಿದೆ.
ಅಮೆರಿಕದಲ್ಲಿ ಸದ್ಯ ಆರ್ಥಿಕ ಹಿಂಜರಿತ ಕಾಲಿಕ್ಕಿದೆ. ಮಾಧ್ಯಮಗಳಲ್ಲಿ ಅದೇ ವಾರ್ತೆಗಳು.ಚಿತ್ರಗಳು.
ಆರ್ಥಿಕ ತಜ್ಞರ ಪ್ರಕಾರ ಕೋವಿಡ್ ಸನ್ನಿವೇಶದ ಕರಿನೆರಳೇ ಕಾರಣ.
ನಮ್ಮಲ್ಲೂ ಕೋವಿಡ್ ಇತ್ತು.ಹೋಯಿತು.
ಆದರೆ ಆರ್ಥಿಕತೆ ಅಧಃಪತನಗೊಳ್ಳಲಿಲ್ಲ. ಆರ್ಥಿಕ ತಜ್ಞರು ಭಾರತದ ಬಗ್ಗೆ ಒಂದಿಷ್ಟು ಒಳ್ಳೆಯ ಮಾತಾಡಿದ್ದಾರೆ.
ಟ್ವಟರ್ ಒಡೆಯ ಮಸ್ಕ್ ಬೇಡವೆಂದು ಬಿಟ್ಟ ಉದ್ಯೋಗಿಗಳನ್ನ ಮತ್ತೆ ವಾಪಸ್ ಬರಹೇಳಿರುವುದು ಈಗ ವರದಿಯಾಗಿದೆ.
ಅಲ್ಲಿನ ಲೋಪವೇ ಕಾರಣವಾಗಿರಬಹುದು.
ಒಂದು ವರದಿಯ ಪ್ರಕಾರ ಈ ಸಾಮಾಜಿಕ ಮಾಧ್ಯಮಗಳಲ್ಲಿನ ಆಂತರಿಕ
ಪ್ರತಿಸ್ಪರ್ಧೆಗಳೇ ಆರ್ಥಿಕ ಏರುಪೇರಿಗೆ ಕಾರಣವೆಂದಿದೆ.
ಅತ್ಯಂತ ಕನಿಕರಪಡುವ ಸಂಗತಿ. ಟ್ವಿಟರ್ ನಲ್ಲಿ ಗಡುವಿನೊಳಗೆ ಕೆಲಸ ಪೂರೈಸಲು ನೌಕರರು ಕಚೇರಿಗಳಲ್ಲೇ ಮಲಗಿ ಕರ್ತವ್ಯ ಮುಗಿಸಿದರಂತೆ.
ಇದೊಂದು ಸ್ಯಾಂಪಲ್ ಅಷ್ಟೆ. ಆರ್ಥಿಕ ಹಿಂಜರಿತ ಸುಳಿವು ನೀಡದೇ ಬರಬಹುದು. ನಮ್ಮಲ್ಲೂ ಎಚ್ಚರತಪ್ಪಬಾರದಷ್ಟೆ.