ಕುವೆಂಪು ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯ ನಿಧಾನಗತಿಯಿಂದಾಗಿ ವಾಹನ ಚಾಲಕರಿಗೆ ದಿನನಿತ್ಯವೂ ನರಕ ದರ್ಶನವಾಗುತ್ತಿದೆ.
ಪ್ರತಿಯೊಂದು ರಸ್ತೆಯು ಗುಂಡಿಮಯವಾಗಿದೆ. ಜೈಲು ಸರ್ಕಲ್ ನಲ್ಲಿ ಕುವೆಂಪು ರಸ್ತೆಗೆ ಅಡ್ಡಲಾಗಿ ಗುಂಡಿ ತೋಡಲಾಗಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ರಸ್ತೆಯ ಗುಂಡಿಗಳಿಗೆ ಸರಿಯಾಗಿ ಮಣ್ಣು ಮುಚ್ಚಿಸದೆ ಇರುವುದರಿಂದ, ವಾಹನ ಸವಾರರು ಇಲ್ಲಿ ಸಂಚರಿಸಲು ಪರದಾಡುತ್ತಿದ್ದಾರೆ. ಇದನ್ನು ಗಮನಿಸಿದ ಸಂಚಾರಿ ಪೊಲೀಸರು ತಾವೇ ರಸ್ತೆ ಗುಂಡಿಗಳಿಗೆ ಮಣ್ಣು ಹಾಕಿ, ವಾಹನ ಸವಾರರಿಗೆ ನೆರವಾಗುವಂತೆ ಮಾಡಿದ್ದಾರೆ. ಇದರಿಂದ ವಾಹನ ಸಂಚಾರರಿಗೆ ಸಹಾಯಕವಾಗಿದೆ ಪೊಲೀಸರ ಕಾರ್ಯದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಚಾರಿ ಠಾಣೆ ಎಸ್.ಎಸ್.ಐ. ಮಂಜುನಾಥ್ ಹಾಗೂ ಚಾಲಕ ಪ್ರಕಾಶ್ ಸಿಬ್ಬಂದಿ ಹನುಮಂತಪ್ಪ ಇವರುಗಳು ಜೈಲು ಸರ್ಕಲ್ ನಲ್ಲಿ ಗುಂಡಿ ಮುಚ್ಚಿದ್ದಾರೆ. ಇದರಿಂದ ವಾಹನ ಸವಾರರು ಕೊಂಚ ನಿರಾಳರಾಗಿದ್ದಾರೆ.
ಜೈ ಪೋಲಿಸ್.