Tuesday, October 1, 2024
Tuesday, October 1, 2024

ಪಿಎಫ್ಐ ಸರ್ವೆ ಮುಗಿದ ನಂತರ ಅದರ ಆಸ್ತಿ ಮುಟ್ಟುಗೋಲು- ಆರಗ ಜ್ಞಾನೇಂದ್ರ

Date:

ದೇಶದಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ 5 ವರ್ಷಗಳ ಕಾಲ ನಿಷೇಧ ಕೇಂದ್ರ ಸರ್ಕಾರ ನೀಷೇಧಿಸಿದೆ. ಈ ಬೆನ್ನಲ್ಲೇ ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮನೆಗಳ ಪೊಲೀಸರು ದಾಳಿ ಮಾಡಿ 40 ಕ್ಕೂ ಹೆಚ್ಚು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಪಿಎಓಫ್‌ ಸರ್ವೆ ಮುಗಿದ ಕೂಡಲೇ ವಶಕ್ಕೆ ಪಡೆದುಕೊಂಡ ಮುಖಂಡರ ಆಸ್ತಿ ಮುಟ್ಟುಗೋಲು ಮಾಡಲಾಗುತ್ತದೆ ಎಂದು ಸುಳಿವು ನೀಡಿದ್ದಾರೆ.
ಪಿಎಫ್‌ಐ ನಿಷೇಧಗೊಳಿಸಿದ ಕೇಂದ್ರ ಸರ್ಕಾರ ಪಿಎಫ್‌ಐ ನ ಅಧಿಕೃತ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಖಾತೆಗಳಲ್ಲಿ ಕೋಟ್ಯಾಂತರ ರೂ ಹಣವಿದ್ದು, ಇದನ್ನು ಹೊರತುಪಡಿಸಿ ಕೋಟ್ಯಾಂತರ ರೂ ಹಣ ಸಂಘಟನೆ ಬಳಿಯಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪಿಎಫ್​ಐ ನಿಷೇಧ ಆದೇಶ ಹೊರಬಿದ್ದ ನಂತರ ಮಂಗಳೂರಿನ 12 ಪಿಎಫ್​​ಐ ಕಚೇರಿಗಳಿಗೆ ಬೀಗ ಹಾಕಲಾಗಿದೆ. ಕಮಿಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮಂಗಳೂರು, ಪಣಂಬೂರು, ಸುರತ್ಕಲ್, ಬಜ್ಪೆ, ಉಳ್ಳಾಲ, ಕೋಣಾಜೆ ಸೇರಿದಂತೆ ಹಲವು ಕಡೆ ತಡರಾತ್ರಿವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಕೆಲವು ಸಾಮಾನ್ಯ ಕಾರ್ಯಕರ್ತರ ಖಾತೆಯಲ್ಲಿ ಲಕ್ಷಾಂತರ ರೂ ಹಣ ಪತ್ತೆಯಾಗಿದೆ. ಇದು ದೇಶ, ವಿದೇಶಗಳಿಂದ ಬಂದಿರುವ ದೇಣಿಗೆ ಹಣವಾಗಿದ್ದು, ಯುಪಿಐ ಕೋಡ್, ಕ್ಯು ಆರ್ ಕೋಡ್ ಮೂಲಕ ಹಣವನ್ನು ಹಲವು ಬಾರಿ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಅಂಗಸಂಸ್ಥೆಗಳ ಮೇಲೆ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಐದು ವರ್ಷಗಳ ನಿಷೇಧದ ನಂತರ, ಗೃಹ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಮುಖ್ಯಸ್ಥರಿಗೆ ಸಂಘಟನೆಯ ಇತರ ಕಚೇರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮತ್ತು ಹಣವನ್ನು ವಶಪಡಿಸಿಕೊಳ್ಳಲು ಹೇಳಿದೆ.

ಈ ನಡುವೆ ಹಿರಿಯ ಸರ್ಕಾರಿ ಅಧಿಕಾರಿಗಳ ಪ್ರಕಾರ, ಪಿಎಫ್‌ಐ ಸದಸ್ಯರು ಸಂಘಟನೆಯಿಂದ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಬೇಕಾಗುತ್ತದೆ, ಆದರೆ, ಅವರು ಮುಂದುವರಿದರೆ, ಅವರು ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ಎದುರಿಸಬೇಕಾಗುತ್ತದೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಸೆಕ್ಷನ್ 3 ರ ಪ್ರಕಾರ, ಪಿಎಫ್‌ಐ ಅನ್ನು ನಿಷೇಧಿಸಲಾಗಿದ್ದು, ಒಮ್ಮೆ ಸಂಘಟನೆಯನ್ನು ಕಾನೂನುಬಾಹಿರ ಎಂದು ಘೋಷಿಸಿದ ನಂತರ, ಸ್ವಯಂ ಬಹಿರಂಗಪಡಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು ಎಂದು ಯುಎಪಿಎ ತಿಳಿಸಿದೆ. ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳ ಸದಸ್ಯರು ಸಂಬಂಧಿತ ದಾಖಲೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಮತ್ತು ಅವುಗಳನ್ನು ಅವರಿಗೆ ಹಸ್ತಾಂತರಿಸಬೇಕು. ಪಿಎಫ್‌ಐ ಅನ್ನು ನಿಷೇಧಿಸಿದ ನಂತರ, ಸಂಘಟನೆಯನ್ನು ತೊರೆಯಲು ಅದರ ಸದಸ್ಯರಿಗೆ ಸಾಕಷ್ಟು ಸಮಯ ನೀಡಲಾಗುವುದು, ಆದರೆ ಅವರಿಂದ ಯಾವುದೇ ದೋಷಾರೋಪಣೆಯ ದಾಖಲೆಗಳು ಕಂಡುಬಂದರೆ, ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...