Tuesday, March 24, 2026
Tuesday, March 24, 2026

ಅಸಮರ್ಪಕ ಮಳೆಯಿಂದ ಖಾರಿಫ್ ಬೆಳೆ ಕುಸಿತ ಆದರೂ ಆಹಾರ ಭದ್ರತೆಗೆ ಚ್ಯುತಿಯಿಲ್ಲ

Date:

ಮಾನ್ಸೂನ್ ಋತುವಿನಲ್ಲಿ ಅಸಮರ್ಪಕ ಮಳೆಯಿಂದಾಗಿ ಖಾರಿಫ್ ಬೆಳೆ ಉತ್ಪಾದನೆಯಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡು ಬಂದಿದ್ದರೂ ಆಹಾರ ಭದ್ರತೆಯ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇಲ್ಲ ಅಂತೆಯೇ ಭಾರತದಲ್ಲಿ ಸಾಕಷ್ಟು ಆಹಾರ ದಾಸ್ತಾನುಗಳಿರುವುದರಿಂದ ಹಣದುಬ್ಬರದ ಮೇಲೆ ಕೂಡ ಇದು ಪರಿಣಾಮ ಬೀರುವುದಿಲ್ಲ ಎಂದು ಕೃಷಿ ಮತ್ತು ಆಹಾರ ನೀತಿ ತಜ್ಞರು ತಿಳಿಸಿದ್ದಾರೆ.

ಆದರೆ, ಮಳೆಯಲ್ಲಿ ಉಂಟಾದ ಏರುಪೇರು ವೈಯಕ್ತಿಕ ಮಟ್ಟದಲ್ಲಿ ರೈತರಿಗೆ ಹಾನಿಯನ್ನುಂಟು ಮಾಡಿದ್ದು ಅನೇಕ ರೈತರಿಗೆ ರಾಜ್ಯ ಸರಕಾರದ ನೆರವು ದೊರೆತಿಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರವು ಬಿಡುಗಡೆ ಮಾಡಿರುವ ಸುಧಾರಿತ ಅಂಕಿ ಅಂಶಗಳ ಪ್ರಕಾರ ಖಾರಿಫ್ ಅಕ್ಕಿಯ ಉತ್ಪಾದನೆಯು ಶೇ. 6 ದಷ್ಟು ಕುಸಿಯುವ ಸಾಧ್ಯತೆ ಇದ್ದು ಕಳೆದ ವರ್ಷ 111 ಮಿಲಿಯನ್‌ ಟನ್‌ನಷ್ಟಿದ್ದ ಅಕ್ಕಿ ಉತ್ಪಾದನೆಯು ಈ ವರ್ಷ 104.99 ಮಿಲಿಯನ್ ಟನ್‌ಗಳಿಗೆ ಕುಸಿದಿದೆ. ಇದಕ್ಕೆ ಕಾರಣ ಅಕ್ಕಿ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಬಿದ್ದಿರುವ ಅಸಮರ್ಪಕ ಮಳೆ ಎಂದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ...

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ...

CM Siddaramaiah ಮೌಢ್ಯತೆ ವಿರುದ್ಧ ಸಿಡಿದೆದ್ದುಸಮಸಮಾಜದ ಕನಸು ಬಿತ್ತಿದ ಶರಣ ದೇವರ ದಾಸಿಂಯ್ಯ- ಸಿದ್ಧರಾಮಯ್ಯ

CM Siddaramaiah ಮೌಢ್ಯ, ಕಂದಾಚಾರಗಳ‌ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು...