ಅಮೆರಿಕದಲ್ಲಿ ಕ್ಯಾನ್ಸರ್ ಸಂಬಂಧಿ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅಧ್ಯಕ್ಷ ಜೋ ಬೈಡನ್ ಅವರು ಘೋಷಿಸಿದರು.
ಎಆರ್‌ಪಿಎ-ಎಚ್ ನಿರ್ಮಿಸುವುದಾಗಿ ಬೋಸ್ಟನ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ಹೇಳಿದರು.
ಕ್ಯಾನ್ಸರ್ ರೋಗಿಗಳ ಜೀವಿತಾವಧಿ ಹೆಚ್ಚಿಸುವಂಥ ಮತ್ತು ರೋಗಿಗಳ ಪ್ರಾಣ ಉಳಿಸುವಂಥ ಹಲವಾರು ವೈದ್ಯಕೀಯ ಕ್ರಮಗಳನ್ನು ಕೈಗೊಂಡ ಬಳಿಕವೂ ಅಮೆರಿಕದಲ್ಲಿ ಜನರು ಸಾವಿಗೀಡಾಗುವುದಕ್ಕೆ ಕ್ಯಾನ್ಸರ್ ಎರಡನೇ ಕಾರಣವಾಗಿದೆ. ಹಲವಾರು ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬಕ್ಕೆ ಭರವಸೆ ಬದಲು ಆತಂಕವಿದೆ ಎಂದು ಬೈಡನ್ ಹೇಳಿದರು.
ಕ್ಯಾನ್ಸರ್, ಮಧುಮೇಹ ಹಾಗೂ ಇತರ ಕಾಯಿಲೆಗಳು ವ್ಯಕ್ತಿಗೆ ಬರುವುದಕ್ಕೂ ಮೊದಲೇ ಅದನ್ನು ಪತ್ತೆಮಾಡಿ, ಅದನ್ನು ತಡೆಯುವ ಮತ್ತು ಚಿಕಿತ್ಸೆ ನೀಡುವ ಉದ್ದೇಶವನ್ನು ಎಆರ್‌ಪಿಎ-ಎಚ್ ಹೊಂದಿದೆ ಎಂದು ಅವರು ಹೇಳಿದರು.