ನಮ್ಮ ದೇಶದ ಮೊದಲ ಸ್ವಾತಂತ್ರ್ಯ ಹೋರಾಟದ ದಾಖಲೆಯಾಗಿರುವುದು 1857.
ನಿಜ. ಚರಿತ್ರಕಾರರು ಅನೇಕ ಮಾಹಿತಿಗಳನ್ನ ಹೆಕ್ಕದೇ ನಮ್ಮ ಮುಂದೆ ಬ್ರಿಟಿಷರ ಕಾಲದಲ್ಲಿ ಕಂಡ, ಬರೆದ ಕೆಲವು ಮಾಹಿತಿಗಳೇ ಆಕರವಾಗಿವೆ.
ಆದರೆ ದಾಖಲೆಗೆ ಸಿಗದೆ ಅಸಂಖ್ಯ ಪುರುಷರು,ವನಿತೆಯರು ತಮ್ಮ ಜೀವವನ್ನೇ ಬಲಿಗೊಟ್ಟಿರುವುದನ್ನ
ಅವು ದಾಖಲೆಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ನಗಣ್ಯಮಾಡುವಂತಿಲ್ಲ.
ಅಂತಹ ಅಸಂಖ್ಯ ವೀರರ ಪಟ್ಟಿಯಲ್ಲಿ ನಾವೀಗ ಓರ್ವ ಚಳವಳಿಗಾರ, ವೀರ,ಧೀರನ ಹೆಸರನ್ನ ಬರೆಯಲೇಬೇಕಿದೆ.
ಆತನೇ ವೀರ ಧೋಂಡಿಯಾ ವಾಘ್.
ಈಗಿನ ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಜನಿಸಿದ ಶೂರ ದೋಂಢಿಯಾ.
ಯುದ್ಧೋತ್ಸಾಹಿ ಮರಾಠೀ ಕುಟುಂಬದಲ್ಲೇ ಜನಿಸಿದವ.
ಬಾಲ್ಯ ಸಹಜ ತುಂಟಾಟಗಳಲ್ಲೇ ಚನ್ನಗಿರಿಯಲ್ಲಿ ಕಳೆದವ.
ಮೀಸೆ ಹೊತ್ತ ತರುಣ ಕೆಳದಿ ಸೈನ್ಯ ಸೇರುವ ಆಸೆಯಲ್ಲಿದ್ದ.
ಕೊನೆಗೆ ಹೈದರಾಲಿಯ ಸೇರಿದ.
ಹೋರಾಡಿ ಹೈದರ್ ಪ್ರೀತಿ ,ಮೆಚ್ಚುಗೆಗೆ ಪಾತ್ರನಾದ. ಸಾವಿರ ಕುದುರೆಗಳ ಜಮೇದಾರನಾದ.
ಹೈದರ್ ಅವಸಾನದ ನಂತರ ಟಿಪ್ಪು ಆಡಳಿತಕ್ಕೆ ಬಂದ.
ಆದರೆ ವಾಘ್ ಅಲ್ಲಿಂದ ಹೊರಬಂದ.
ಗೆಳೆಯರ ಒಟ್ಟಿಗೆ ಸೇರಿ ಧೀರಪಡೆ ರಚಿಸಿಕೊಂಡ.
ಬ್ರಿಟಿಷ್ ವಿರುದ್ದ ದಂಗೆ ಎದ್ದ.
ಅವನನ್ನ ದರೋಡೆ ಕೋರ ಎಂದು ಬಿಳಿಯರು ಹಣೆಪಟ್ಟಿ ಕಟ್ಟಿದರು.
ರಾಜ್ಯದಾದ್ಯಂತ ಅಲ್ಲದೆ ಪಕ್ಜದ ಮರಾಠಿ, ಕೇರಳ ಮುಂತಾದೆಡೆಯ ಪಾಳೆಗಾರರು,ಅರಸರು ಇವನ ಪರಾಕ್ರಮಕ್ಕೆ ಸೋತು ಮಿತ್ರರಾಗಿದ್ದರು.
ಟಿಪ್ಪು ಬಿಳಿಯರ ವಿರುದ್ಧ ಸೋತಾಗ ನಿನ್ನ ಮಕ್ಕಳನ್ನ ಗೆದ್ದು ಕೊಡುತ್ತೇನೆ.ತನಗೆ ನೆರವು ನೀಡಿ ಸಾಕು ಎಂಬ ಧೈರ್ಯದ ಸಾಂತ್ವನ ಹೇಳಿದ್ದ.
ಇಂತಹ ಶೂರ ವೆಲ್ಲೆಸ್ಲಿಯ ಪಡೆಯ ಮೋಸಕ್ಕೆ ಸಿಕ್ಕ.ಗುಂಡಿನ ಸುರಿಮಳೆಗೆ 1800 ಸೆ. 10 ರಂದು ಎದೆ ನೀಡಿದ.
ಅವನು ಬದುಕಿದ್ದಿದ್ದರೆ
ಮುಂದಿನ ಬ್ರಿಟಿಷರ ಚರಿತ್ರೆಯೇ ಬದಲಾಗುತ್ತಿತ್ತು.
ಅಮರ ಚೇತನ ನಿನಗೆ
ನೆನಪಿನ ವಂದನೆ.
ಲೇ: ಡಾ.ಸುಧೀಂದ್ರ