Sunday, March 22, 2026
Sunday, March 22, 2026

ದೇಶದಲ್ಲಿ ನಿನ್ನೆಗೆ 6.809 ,ಕೋವಿಡ್ ಸೋಂಕು ಪ್ರಕರಣ ಪತ್ತೆ

Date:

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 6,809 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. 16 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ ಅಂಶದಿಂದ ಮಾಹಿತಿ ತಿಳಿದು ಬಂದಿದೆ.

ದೇಶಾದ್ಯಂತ ಕೊರೋನಾ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 4,38,80,464 ಕೋಟಿಗೆ ಏರಿಕೆಯಾಗಿದೆ. ಭಾರತದಲ್ಲಿನ ಕೋವಿಡ್ ಸೋಂಕಿನ ಒಟ್ಟು ಚೇತರಿಕೆ ಪ್ರಮಾಣ ಶೇ.98.69ರಷ್ಟಿದೆ.

ಭಾರತದಲ್ಲಿನ ಸಕ್ರಿಯ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ 53,974ಕ್ಕೆ ಇಳಿಕೆಯಾಗಿದೆ ಎಂದು ಅಂಕಿಅಂಶ ವಿವರಿಸಿದೆ. ಭಾನುವಾರ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 55,114ರಷ್ಟಿತ್ತು.

ಒಂದೇ ದಿನದಲ್ಲಿ ಕೋವಿಡ್ 19 ಸೋಂಕಿನಿಂದ 16 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶಾದ್ಯಂತ ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,28,007ಕ್ಕೆ ತಲುಪಿದೆ.

ಐಸಿಎಂಆರ್ ಅಂಕಿಅಂಶದ ಪ್ರಕಾರ, ದೇಶಾದ್ಯಂತ ಸೆಪ್ಟೆಂಬರ್ 04ರವರೆಗೆ 88,73,79,274 ಕೊರೋನಾ ಸ್ಯಾಂಪಲ್ಸ್ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದೆ.

2020ರ ಮಾರ್ಚ್ ನಲ್ಲಿ ದೇಶದಲ್ಲಿ ಕೋವಿಡ್ ಸೋಂಕಿನಿಂದ ಮೊದಲ ಸಾವು ಸಂಭವಿಸಿದ ಪ್ರಕರಣ ವರದಿಯಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ripponpet News ಪೆಟ್ರೋಲ್ ಕೊರತೆ ಎಂಬ ಸುದ್ದಿ ನಂಬಿ ರಿಪ್ಪನ್ ಪೇಟೆಯ ‘ಬಂಕ್’ ಗಳಿಗೆ ಮುಗಿಬಿದ್ದ ಜನ.

Ripponpet News ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿರುವ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್...

Yakshagana ಶಿವಮೊಗ್ಗದ ವರದಾ ಐತಾಳ್ ಅವರಿಗೆ ಶಿವರಾಮ ಕಾರಂತ ಪ್ರತಿಷ್ಠಾನದಿಂದ “ಸಾಧಕಿ ಪ್ರಶಸ್ತಿ” ಪುರಸ್ಕಾರ.

Yakshagana ತಾll 15.03.2026 ರಂದು ಯಕ್ಷಗಾನ ದಲ್ಲಿ ಹೊಸಸಾಧ್ಯತೆಯ ಅನಾವರಣಕ್ಕಾಗಿ ಡಾllಶಿವರಾಮ...

Ramadan ಸಮಾಜದಲ್ಲಿ ಶಾಂತಿ – ಸೌಹಾರ್ದದಿಂದ ಬಾಳಬೇಕು- ಮೌಲಾನಾ ಮುಫ್ತಿ ತಪ್ಜಿಲ್ ಆಲಂ ಖಾಸ್ಮಿ

Ramadan ತಿಂಗಳು ಪೂರ್ತಿ ಉಪವಾಸ ವ್ರತ ಆಚರಣೆಯ ನಂತರ ಮುಸ್ಲಿಂ ಬಾಂಧವರು...

Chess ಮಾರ್ಚ್ 25 ರಿಂದ ಶಿವಮೊಗ್ಗದಲ್ಲಿ ಬೇಸಿಗೆ ರಜೆ ನಿಮಿತ್ತ ಚೆಸ್ ತರಬೇತಿ ಶಿಬಿರ.

Chess ಶಿವಮೊಗ್ಗ ನಗರದ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯಿಂದ ಈ...