Sunday, October 18, 2026
Sunday, October 18, 2026

ಬಸ್ ಸ್ಟಾಂಡ್ ಕಳಪೆ ಕಾಮಗಾರಿ ಜೆಡಿಎಸ್ ಪ್ರತಿಭಟನೆ

Date:

ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬೃಹತ್ ಕಳಪೆ ಕಾಮಗಾರಿ ನಡೆದಿದ್ದು ಇಂದು ಬೆಳಗಾವಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಶ್ರೀ ಶಂಕರ ಅಣ್ಣ ಮಾಡಲಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಒಳಗಡೆ ಭೇಟಿಕೊಟ್ಟು ಕಾಮಗಾರಿಯನ್ನು ವೀಕ್ಷಣೆ ಮಾಡಿದರು ನಂತರ ಮಾತನಾಡಿ ಇದು ಒಂದು ಬೃಹತ್ ಕಳಪೆ ಕಾಮಗಾರಿ ನಡೆದಿದ್ದು ಇದನ್ನ ತಕ್ಷಣವೇ ಈ ಕಾಮಗಾರಿಯನ್ನು ನಿಲ್ಲಿಸಬೇಕು.

ಹಾಗೂ ತಕ್ಷಣವೇ ಸ್ಥಳೀಯ ಶಾಸಕರಾದ ಹಾಗೂ ಮಾಜಿ ಶಾಸಕರುಗಳು ಇದನ್ನು ಬಂದು ಕಳಪೆ ಕಾಮಗಾರಿನು ವೀಕ್ಷಣೆ ಮಾಡಬೇಕೆಂದು ಶ್ರೀ ಶಂಕರ ಮಾಡಲಗಿ ಅವರು ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಒಳಗಡೆ ಪ್ರತಿಭಟನೆ ಮಾಡುವ ಮುಖಾಂತರ ರಸ್ತೆ ಮಧ್ಯ ಕುಳಿತುಕೊಂಡು ಸರ್ಕಾರದ ವಿರುದ್ಧ ಸ್ಥಳೀಯ ಶಾಸಕರ ವಿರುದ್ಧ ಪ್ರತಿಭಟನೆ ಮುಖಾಂತರ ಎಚ್ಚರಿಕೆಯನ್ನು ನೀಡಿದರು.

ಮುಂದಿನ ದಿನಗಳಲ್ಲಿ ಈ ಕಾಮಗಾರಿಯನ್ನು ಸರಿಯಾಗಿ ಮಾಡಬೇಕೆಂದು ಪ್ರತಿಭಟನೆ ಮುಖಾಂತರ ಇಂಜಿನಿಯರ್ ಗಳಿಗೆ ಹಾಗೂ ಸ್ಥಳೀಯ ಶಾಸಕರಿಗೆ ಎಚ್ಚರಿಕೆ ನೀಡಿದರು ಪ್ರತಿಭಟನೆಯಲ್ಲಿ ಭಾಗಿಯಾದಂತ ಜೆಡಿಎಸ್ ಕಾರ್ಯಕರ್ತರುಗಳಾದ ಬೈಲಹೊಂಗಲ ತಾಲೂಕು ಅಧ್ಯಕ್ಷರಾದ ಸತ್ಯನ ಗೌಡ ಪಾಟೀಲ್ ಹಾಗೂ ನಿಂಗಪ್ಪ ಕಾಂಬಳೆ ಮತ್ತು ಬೈಲಹೊಂಗಲ ಸಿಟಿ ಅಧ್ಯಕ್ಷರಾದ ಆನಂದ ಕಾಗರ್ ಮತ್ತು ಬೆಳಗಾವಿ ಜಿಲ್ಲಾ ಜೆಡಿಎಸ್ ವಿದ್ಯಾರ್ಥಿ ಘಟಕ ಅಧ್ಯಕ್ಷರಾದ ಅರ್ಬಾಜ್ ಮುಲ್ಲಾ ಮತ್ತು ಸಂಜು ಮುರುಗೋಡ ಹಾಗೂ ಎಲ್ಲಾ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವರದಿ ಕೃಪೆ: ಸುದರ್ಶನ್ ಬೋಳಶೆಟ್ಟಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...