ಉಕ್ರೇನ್ ಮೇಲೆ ಯುದ್ದಕ್ಕೆ ಬಿದ್ದಿರೋ ರಷ್ಯಾಗೆ ಇರಾನ್ ಆಯುಧ ಕಳುಹಿಸಿಕೊಡೋದಕ್ಕೆ ತಯಾರಿ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.
ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅಮೆರಿಕದ ಭದ್ರತಾ ಸಲಹೆಗಾರ ಜೆಕ್ ಸಲ್ಲೀವನ್ ಇರಾನ್ ರಷ್ಯಾಗೆ ನೂರಾರು ಅನ್‌ಮ್ಯಾನಡ್ ಏರಿಯಲ್ ವೆಹಿಕಲ್ ಡ್ರೋನ್‌ಗಳನ್ನ ಕೊಡೋಕೆ ರೆಡಿಯಾಗಿದೆ.
ನಮಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿದೆ. ಜುಲೈ ಅಂದರೆ ಈ ತಿಂಗಳ ಅಂತ್ಯದಲ್ಲಿ ಅವರ ರಷ್ಯಾಗೆ ತಮ್ಮ ಡ್ರೋನ್‌ಗಳನ್ನ ಪೂರೈಕೆ ಮಾಡಲಿದ್ದಾರೆ. ಆದಷ್ಟು ಬೇಗ ಅದು ರಷ್ಯಾದ ಕೈಗೆ ತಲುಪುತ್ತದೆ ಎಂದು ಹೇಳಿದ್ದಾರೆ.