ಅಮ್ಮ- ಇದು ಕೇವಲ ಒಂದು ಪದವಲ್ಲ; ಭಾವನೆಗಳ ಆಗರ ಎಂದು
-ಶನಿವಾರ 100ನೇ ವಸಂತಕ್ಕೆ ಕಾಲಿಟ್ಟ ತಾಯಿ ಹೀರಾಬೆನ್ ಅವರಿಗೆ ಶುಭ ಕೋರಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹೀರಾಬೆನ್ ಅವರ ಜನ್ಮದಿನ ಪ್ರಯುಕ್ತ ಶನಿವಾರ ತಾಯಿಗೆಂದೇ ವಿಶೇಷವಾಗಿ ಬ್ಲಾಗ್‌ನಲ್ಲಿ ಬರೆದ ಮೋದಿಯವರು ತಮ್ಮ ವ್ಯಕ್ತಿತ್ವ, ಮನಸ್ಸು, ಆತ್ಮವಿಶ್ವಾಸವನ್ನು ರೂಪಿಸಿ ಬದುಕಿಗೆ ಹೊಸ ರೂಪ ಕೊಟ್ಟ ತಾಯಿಯ ತ್ಯಾಗ ಗಳನ್ನು ಸ್ಮರಿಸಿದ್ದಾರೆ.
2001ರಲ್ಲಿ ಗುಜರಾತ್ ಸಿಎಂ ಆಗಿ ಆಯ್ಕೆಯಾದಾಗ ಅಮ್ಮ ಹೇಳಿದ್ದು ಒಂದೇ ಮಾತು – “ಸರಕಾರದಲ್ಲಿ ನಿನ್ನ ಕೆಲಸವೇನು ಎಂಬುದು ನನಗೆ ಅರ್ಥವಾಗದು. ಆದರೆ ನಾನು ಹೇಳುವುದೊಂದೇ- ಲಂಚ ಮಾತ್ರ ಸ್ವೀಕರಿಸಬೇಡ’. ಸುತ್ತಮುತ್ತಲಿನ ಜನರ ಸಂತೋಷವೇ ನನ್ನ ಅಮ್ಮನ ಸಂತೋಷವಾಗಿತ್ತು ಎಂದಿದ್ದಾರೆ ಮೋದಿ.
“ಗರೀಬ್ ಕಲ್ಯಾಣ'(ಬಡವರ ಕಲ್ಯಾಣ)ಕ್ಕಾಗಿ ದೃಢ ನಿಶ್ಚಯ ಕೈಗೊಳ್ಳಲು ನನ್ನ ಅಮ್ಮನೇ ಸ್ಫೂರ್ತಿ ಎಂದಿದ್ದಾರೆ. ವಿಶೇಷವೆಂದರೆ ಮೋದಿ ಅವರು ಜಾರಿಗೊಳಿಸಿದ ಕೇಂದ್ರ ಸರಕಾರದ ಹಲವು ಯೋಜನೆಗಳಿಗೆ “ಗರೀಬ್ ಕಲ್ಯಾಣ್’ ಎನ್ನಲಾಗುತ್ತದೆ.