ಪಾಕಿಸ್ತಾನ ಈಗಾಗಲೇ ಜಾಗತಿಕವಾಗಿ ಒಬ್ಬಂಟಿಯಾಗಿದೆ. ಹಾಗಾಗಿ ಭಾರತದೊಂದಿಗೆ ನಮ್ಮ ಸ್ನೇಹವನ್ನು ಮತ್ತೆ ಆರಂಭಿಸಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಬುಟ್ಟೋ ಜರ್ಧಾರಿ ಅವರು ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಭಾರತದ ರಾಜಕೀಯ ನೀತಿಗಳು, ಮುಸ್ಲಿಂ ವಿರೋಧಿ ನಿಲುವುಗಳಿಂದ ನಮ್ಮ ಅವರ ಸಂಬಂಧ ಕಠಿಣವಾಗಿದೆ. ಕೆಲವು ವಿಚಾರಗಳಲ್ಲಿ ನಾವು ಅವರಿಗೆ ವಿರೋಧ ವ್ಯಕ್ತಪಡಿಸಿದ್ದೇವೆ. ಆದರೆ ಅವರ ಜೊತೆಗೆ ನಾವು ಮಾತನಾಡದಿದ್ದರೆ ನಮ್ಮ ಆಸಕ್ತಿಗಳನ್ನು ಅವರ ಜೊತೆಗೆ ಹೇಗೆ ಹಂಚಿಕೊಳ್ಳಲು ಸಾಧ್ಯ ಎಂದರು.
ನಾವು ಭಾರತದೊಂದಿಗೆ ಗಂಭೀರವಾದ ಸಮಸ್ಯೆಗಳನ್ನ ಹೊಂದಿದ್ದೇವೆ.
ಇತಿಹಾಸವನ್ನು ತೆಗೆದು ನೋಡಿದರೆ ಅವರ ಜೊತೆಗೆ ಯುದ್ದಗಳೂ ಆಗಿವೆ. ಆದರೆ ಅವರ ಜೊತೆಗೆ ಸಂಬಂಧವನ್ನ ಕಳೆದು ಕೊಳ್ಳಲು ಸಾಧ್ಯವಾಗುತ್ತಾ? ಒಬ್ಬ ವಿದೇಶಾಂಗ ಸಚಿವನಾಗಿ ನಾನು ಅಲ್ಲಿನ ಜನರ ಜೊತೆಗೆ ಮಾತನಾಡದೇ ಅಲ್ಲಿನ ಸರ್ಕಾರದ ಜೊತೆ ಮಾತನಾಡದೇ ನಮ್ಮ ಹಿತಾಸಕ್ತಿಗಳನ್ನು, ನಮ್ಮ ಉದ್ದೇಶಗಳನ್ನು ಹೇಗೆ ಹಂಚಿಕೊಳ್ಳಲು ಆಗುತ್ತದೆ ಎಂದು ಪ್ರಶ್ನಿಸಿದರು.
ಇದಲ್ಲದೇ ಭಾರತದೊಂದಿಗೆ ನಾವು ವ್ಯಾಪಾರ ಮಾಡಲು ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ. ನನಗೆ ಆ ರೀತಿಯ ವಿಮರ್ಶೆಗಳೇ ತಪ್ಪು ಎಂದೆನಿಸುತ್ತದೆ ಎಂದು ತಿಳಿಸಿದರು.