ತಾಂತ್ರಿಕ ಕಾರಣಗಳಿಂದ ಯುರೋಪ್‌ಗೆ ಹೋಗುತ್ತಿದ್ದ, ಗ್ಯಾಸ್ ಸಪ್ಲೈಯನ್ನು ಬಂದ್ ಮಾಡುತ್ತಿದ್ದಿವಿ. ಹೀಗೆಂದು, ರಷ್ಯಾದ ಗ್ಯಾಸ್ ಪೂರೈಕೆದಾರ ಕಂಪನಿ ಗ್ಯಾಜ್‌ಪ್ರೋಂ ತಿಳಿಸಿದೆ.
ಈ ವಿಷಯದ ಬಗ್ಗೆ ಹೇಳಿಕೆ ಪ್ರಕಟ ಮಾಡಿದ್ದು ಗ್ಯಾಸ್ ಸಪ್ಲೈ ಮಾಡೋ ಕಾಂಪ್ರೆಸರ್ ಕೆಟ್ಟೋಗಿದೆ.
ಅದನ್ನು ಸರಿ ಮಾಡುತ್ತಿದ್ದಿವಿ. ಆದ್ದರಿಂದ,ಯುರೋಪ್‌ಗೆ ಹೋಗ್ತಿದ್ದ ಶೇ. 40 ಅನಿಲ ಪೂರೈಕೆ ಬಂದ್ ಮಾಡುತ್ತಿದ್ಧೇವೆ ಎಂದು ತಿಳಿಸಿದೆ. ಇದರ ಬೆನ್ನಲ್ಲೇ ಇದಕ್ಕೆ ಜರ್ಮನಿ ಪತ್ರಿಕ್ರಿಯೆ ಇದು ಟೆಕ್ನಿಕಲ್ ಕಾರಣಗಳಿಂದ ನಿಂತಿಲ್ಲ. ಪೊಲಿಟಿಕಲ್ ಕಾರಣಗಳಿಂದ ನಿಂತಿರೋದು ಅಂತ ಕಿಡಿಕಾರಿದೆ. ಅಂದ್ಹಾಗೆ ನಿನ್ನೆಯಷ್ಟೇ ಯುರೋಪಿಯನ್ ಕಮಿಷನ್ ರಷ್ಯಾ ನಮಗೆ ಬ್ಲಾಕ್ ಮೇಲ್ ಮಾಡ್ತಿದೆ. ನಾವು ಇಸ್ರೇಲ್‌ನಿಂದಲೇ ಗ್ಯಾಸ್ ತರಿಸಿಕೊಳ್ತೀವಿ ಅಂತ ಹೇಳಿತ್ತು.