ಏಷ್ಯಾ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಫುಟ್ಬಾಲ್ ತಂಡ ಮತ್ತೊಂದು ರೋಚಕ ಪ್ರದರ್ಶನ ನೀಡಿತು.
ಕೋಲ್ಕತಾದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 2-1 ಗೋಲುಗಳ ಅಂತರದಿಂದ ಮಣಿಸಿ ಫುಟ್ಬಾಲ್ ಪ್ರೇಮಿಗಳ ಗಮನ ಸೆಳೆಯಿತು.
ದೇಶದ ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ ಮತ್ತು ತಂಡದ ನಾಯಕ ಸುನಿಲ್ ಚೇಟ್ರಿ ತಮ್ಮ 83ನೇ ಅಂತರರಾಷ್ಟ್ರೀಯ ಗೋಲು ದಾಖಲಿಸುವ ಮೂಲಕ ಮತ್ತು ಗಾಯದ ಅವಧಿಯಲ್ಲಿ ಸಹಲ್ ಸಮದ್ ದಾಖಲಿಸಿದ 2ನೇ ಗೋಲು ಭಾರತ ತಂಡದ ಜಯಭೇರಿಯಲ್ಲಿ ಪ್ರಧಾನ ಪಾತ್ರವಹಿಸಿತು.
ಇದು ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತದ ಸತತ 2ನೇ ಕ್ವಾಲಿಫೈಯರ್ ಪ್ರಯತ್ನವಾಗಿದೆ.
ಈ ಮೂಲಕ ಭಾರತ 2023ರ ಎಎಫ್‌ಸಿ ಏಷ್ಯಾ ಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸುವ ಸನಿಹ ತಲುಪಿದೆ.
ಈ ವಿಜಯದೊಂದಿಗೆ ಭಾರತ ಫುಟ್ಬಾಲ್ ತಂಡ ಏಷ್ಯಾಕಪ್ ಟೂರ್ನಿಯ ಗುಂಪು ಹಂತದಲ್ಲಿ ಸತತ 2ನೇ ಬಾರಿ ಮತ್ತು ಈವರೆಗೆ ಒಟ್ಟು 5 ಬಾರಿ ಅವಕಾಶ ಪಡೆಯಲು ನೆರವಾಯಿತು.
2019ರಲ್ಲಿ ಚೆಟ್ರಿ ಟೀಂ ಗುಂಪು ಹಂತದಲ್ಲೇ ಸೋತು ಟೂರ್ನಿಯಿಂದ ನಿರ್ಗಮಿಸಿರುವುದನ್ನು ಇಲ್ಲಿ ನೆನಪಿಸಬಹುದು.
