Saturday, June 20, 2026
Saturday, June 20, 2026

ಐಪಿಎಲ್ ಗೆ ರಣವೀರ್ -ದೀಪಿಕಾ ಆಸಕ್ತಿ?

Date:

ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಐಪಿಎಲ್ ಪಂದ್ಯಾವಳಿಯು ಕ್ರಿಕೆಟ್ ಪ್ರಿಯರನ್ನು ಸದಾ ಮನ ತಣಿಸುತ್ತಿದೆ. ಕ್ರಿಕೆಟ್ ಆಟಗಾರರ ಪ್ರತಿಭೆಯನ್ನು ಗುರುತಿಸುವ ಕೆಲಸ ಐಪಿಎಲ್ ನಲ್ಲಿ ಸಾರ್ಥಕವಾಗಿ ನಡೆಯುತ್ತಿದೆ. ಇದರಲ್ಲಿ ಅತ್ಯಂತ ಸ್ವಾರಸ್ಯ ಮತ್ತು ಕುತೂಹಲದ ವಿಷಯ ಎಂದರೆ ಆಟಗಾರರ ಹರಾಜು ಪ್ರಕ್ರಿಯೆ.
ಈ ಹರಾಜಿನಲ್ಲಿ ಆಯ್ಕೆಯಾದ ಆಟಗಾರರು ಇಂತಿಷ್ಟು ವರ್ಷ ಹರಾಜಿನಲ್ಲಿ ಪಡೆದ ಕಂಪನಿ ಅಥವಾ ತಂಡವನ್ನು ಪ್ರತಿನಿಧಿಸಿ ಆಡುವುದು ಒಂದು ಶರತ್ತು.
ಈ ಹರಾಜು ಪ್ರಕ್ರಿಯೆಯಲ್ಲಿ ಖ್ಯಾತ ಉದ್ಯಮಿಗಳು, ಶ್ರೀಮಂತರು, ಅಷ್ಟೇ ಅಲ್ಲದೇ ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು ಸಹ ತಂಡಕ್ಕೆ ಆಟಗಾರರನ್ನು ಖರೀದಿಸುವ ಪರಿಪಾಠ ನಡೆದು ಬಂದಿದೆ.


ಸಿನಿಮಾ ತಾರೆಯರಾದ ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ, ಶಾರುಖ್ ಖಾನ್ ಅವರ ಸಾಲಿಗೆ ಈಗ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಸೇರಿದ್ದಾರೆ ಎಂದು ಮಾಧ್ಯಮಗಳು ಸುಳಿವು ನೀಡಿವೆ. ಕ್ರಿಕೇಟ್ ಜನಪ್ರಿಯ ಕ್ರೀಡೆಯಾಗಿ ಹಲವರಲ್ಲಿ ಉತ್ಸಾಹ ತುಂಬುತ್ತದೆ. ಕೆಲವರಲ್ಲಿ ಅಷ್ಟೇ ವ್ಯಸನವನ್ನೂ ಉಂಟು ಮಾಡುತ್ತದೆ.
ಹಣ, ಕೀರ್ತಿ ಹಾಗೂ ಪ್ರತಿಷ್ಠೆಗಾಗಿ ನಡೆಸುವ ಕ್ರೀಡೆಯಾಗಿ ಐಪಿಎಲ್ ಪಂದ್ಯಾವಳಿ ಮಾರ್ಪಟ್ಟಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಜೂನ್ 19. ಸಂಜೆ 4 ಗಂಟೆಗೆ ವಿಕಸಿತ್ ಭಾರತ್ ರೋಜ್ ಗಾರ್ ಪ್ರೋತ್ಸಾಹ ಧನ ಬಿಡುಗಡೆ ಕಾರ್ಯಕ್ರಮದ ನೇರಪ್ರಸಾರ

B.Y. Raghavendra ಕಾರ್ಮಿಕ ಭವಿಷ್ಯನಿಧಿ ಸಂಘಟನೆ, ಶಿವಮೊಗ್ಗ ಪ್ರಾದೇಶಿಕ ಕಚೇರಿ ಮತ್ತು...

D.K. Shivakumar ರಾಜ್ಯದ ಹಿತಕ್ಕೆ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾತೀತ ಬೆಂಬಲ- ಸೀಎಂ ಡಿ.ಕೆ.ಶಿವಕುಮಾರ್

D.K. Shivakumar ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಗೆಲುವು...