Wednesday, November 27, 2024
Wednesday, November 27, 2024

ವಿದ್ಯಾರ್ಥಿಗಳು ಕಷ್ಟವೆನಿಸುವ ಪಠ್ಯ ವಿಷಯಗಳನ್ನ ಪ್ರೀತಿಸಬೇಕು

Date:

ವಿದ್ಯಾರ್ಥಿಗಳು ತಮಗೆ ಕಷ್ಟವೆನಿಸುವ ವಿಷಯಗಳನ್ನು ಮೊದಲು ಪ್ರೀತಿಸಬೇಕು. ಆಗ ಅದು ನಿಮ್ಮದಾಗಿ ಅರ್ಥವಾಗುತ್ತದೆ, ಸುಲಭವಾಗುತ್ತದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಕಿವಿಮಾತು ಹೇಳಿದರು.

ಅವರಿಂದು ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಹಾಗೂ ವನಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಶಿಸ್ತು, ಶ್ರಮ, ಶ್ರದ್ಧೆಯಿಂದ ಪಾಠ ಕೇಳಿ ಅದನ್ನು ಬುದ್ಧಿ, ಕರುಣೆ ಮತ್ತು ಕೌಶಲ್ಯದೊಂದಿಗೆ ಜೀವನದಲ್ಲಿ ಅಳವಡಿಸಿ ಬಳಸಿಕೊಳ್ಳಬೇಕು ಆಗ ಯಶಸ್ಸು ಸಾಧ್ಯ, ಪರಿಪೂರ್ಣತೆ ನಮ್ಮಲ್ಲಿ ಅಡಗಿರುವ ವಿದ್ಯೆ, ಅದನ್ನು ಹೊರ ತೆಗೆಯುವುದು ಶಿಕ್ಷಕರ ಪಾತ್ರ, ಶಿಕ್ಷಕರು ವಿದ್ಯಾರ್ಥಿಗಳಿಗೆ ಎರಡನೇ ಪೋಷಕರು ಇದ್ದಂತೆ ಎಂದರು.

ಪದವಿಪೂರ್ವ ಶಿಕ್ಷಣವು ನಿರ್ಣಾಯಕ ಘಟ್ಟವಾಗಿದ್ದು ವಿದ್ಯಾರ್ಥಿಗಳು ಮುಂದೆ ತಾವು ಏನಾಗಬೇಕೆಂಬ ನಿರ್ಧಾರ ತೆಗೆದುಕೊಳ್ಳುವ ಪರ್ವ ಕಾಲವಿದು ಎಂದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ನಸೀಮಾ ಬಾನು, ಉದಯ್ ಕಿರಣ್, ಹಾಗೂ ಬಾಲಾಜಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ತಮ್ಮ ಕಾಲೇಜು ಜೀವನದ ಅನುಭವಗಳನ್ನು ಹಾಗೂ ತಮ್ಮ ಸಾಧನೆಗೆ ರೂಢಿಸಿಕೊಂಡ ಮಾರ್ಗಗಳನ್ನು ವಿವರಿಸಿದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಪಿ.ರು ದ್ರಪ್ಪನವರು ಅಂದಂದಿನ ಪಠ್ಯ ವಿಷಯಗಳನ್ನು ವಿದ್ಯಾರ್ಥಿಗಳು ಅಂದೇ ಅರ್ಥ ಮಾಡಿಕೊಂಡಲ್ಲಿ ಪರೀಕ್ಷೆಗಳಿಗೆ ಭಯಪಡುವ ಸಂದರ್ಭ ಬರುವುದಿಲ್ಲ, ಇದಕ್ಕೆ ಆಸಕ್ತಿ ಬಹುಮುಖ್ಯ ಎಂದರು.

ಗಣಿತ ಉಪನ್ಯಾಸಕ ಕೆ.ಸಿ.ಶಿವಶಂಕರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಚೈತ್ರ ಮತ್ತು ಸಂಗಡಿಗರು ಹಾಡಿದರು. ಸ್ವಾಗತವನ್ನು ಇಂಗ್ಲಿಷ್ ಭಾಷಾ ಉಪನ್ಯಾಸಕ ಕೆ.ಸಿ.ವಿಜಯಕುಮಾರ್ ಕೋರಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಅಧ್ಯಾಪಕಿ ಶರ್ಮಿಳಾ ಮಾಡಿದರು. ಕನ್ನಡ ಭಾಷಾ ಉಪನ್ಯಾಸಕ ಹೆಚ್.ಸಿ. ವಿನಯ್ ಕುಮಾರ್ ವಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದ ಪೂರ್ವದಲ್ಲಿ ವನಮಹೋತ್ಸವದ ಅಂಗವಾಗಿ ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು.

ಚಿತ್ರ ಹಾಗೂ ವರದಿ ಸೌಜನ್ಯ; ಎಚ್.ಬಿ.ಮಂಜುನಾಥ.
ದಾವಣಗೆರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

K.H. Muniyappa ನ.28ರೊಳಗೆ ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ವಿತರಿಸಲು ಅಧಿಕಾರಿಗಳಿಗೆ ಸೂಚನೆ- ಸಚಿವ ಕೆ ಎಚ್. ಮುನಿಯಪ್ಪ

K.H. Muniyappa ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಗಳ ಆದೇಶದಂತೆ...

Department of Social Welfare ನಮ್ಮ ಸಂವಿಧಾನದ ಪೀಠಿಕೆಯನ್ನ ನಾವೆಲ್ಲಾ ಪಾಲಿಸಿದರೆ ಸಂತೋಷ & ನೆಮ್ಮದಿ ಜೀವನ ಸಾಧ್ಯ- ಬಲ್ಕೀಷ್ ಬಾನು

Department of Social Welfare ಸಮಾನತೆ, ಸೌಹಾರ್ದತೆ, ಭ್ರಾತೃತ್ವ, ಐಕ್ಯತೆ, ಭಾವೈಕ್ಯತೆ,...

Yuvanidhi Scheme ಯುವನಿಧಿ ಯೋಜ‌‌ನೆಗೆ ಆನ್ ಲೈನ್ ನೋಂದಾಯಿಸಲು ಆಹ್ವಾನ

Yuvanidhi Scheme ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಗೆ ನೋಂದಣೆ ಚಾಲ್ತಿಯಲ್ಲಿದ್ದು, ಅರ್ಹರು...

Constitution Day ಸಂವಿಧಾನದ ಸಂದೇಶವೇ ನಮ್ಮ ಸರ್ಕಾರದ ಸಿದ್ಧಾಂತ- ಸಿದ್ಧರಾಮಯ್ಯ

Constitution Day ಸಂವಿಧಾನ ದಿನಾಚರಣೆಯ ವಿಶೇಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು...