ಕತ್ತೆ ಕಾಯೋಕೆ ಹೋಗ್ “ಅಂತ ಬೈಯೋದನ್ನ ನಾವು ಕೇಳಿದೀವಿ. ಹಾಗಂತ ಯಾರೂ ತಕ್ಷಣ ಅದನ್ನ ಆಜ್ಞೆ ಅಂತ ಪಾಲಿಸೋದಿಲ್ಲ!. ಬದಲಾಗಿ ಕೋಪದಿಂದ ಎರಡೇಟು ಬಿಗಿದೇ ಬರೋದು. ಪಾಪ ! ಕತ್ತೇದು ತಪ್ಪಲ್ಲ..ಅದರ ಜನ್ಮದ ಬಗ್ಗೆಯೂ ಅವಹೇಳನವಲ್ಲ.
ಈಗ ಅದಕ್ಕೆ ಮನುಷ್ಯರಿಗಿಂತ ಬೆಲೆ ಬರುವ ಕಾಲ ಸನ್ನಿಹಿತವಾಗಿದೆ. ಹಾಗಂತ ಹೇಳಿದ್ರೆ ನಿಮಗೆ ಅಚ್ಚರಿಯಾಗತ್ತೆ. ಕೇರಳದಲ್ಲಿ ಕತ್ತೆ ಸಾಕಾಣಿಕೆ ನಡೆದ ಬಗ್ಗೆ ನಿಮ್ಮಲ್ಲಿ ಬಹಳ ಮಂದಿ ಕೇಳಿರಬಹುದು. ಈಗ ಕರ್ನಾಟಕದಲ್ಲಿ ಸುದ್ದಿಯಾಗಿದೆ. ಮಂಗಳೂರಿನ ಬಳಿಯ ಶ್ರೀನಿವಾಸ ಗೌಡ ಎನ್ನುವವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ.
ಅವರು ಪದವೀಧರರು. ಕತ್ತೆ ಸಾಕೋಕೆ ಮುಂಚೆ ಸಾಕಷ್ಟು ಯೋಚನೆ ಮತ್ತು ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವುದೇ ವ್ಯವಹಾರ ಅಥವಾ ಉದ್ದಿಮೆ ನಡೆಸೋಕೆ ಮುಂಚೆ ಒಂದು ಸರ್ವೆ ಅಂತ ಮಾಡ್ತಾರೆ. ಅವರದ್ದು ಅದೇ ವಿಚಿತ್ರ ಹಾದಿ.!
ಈಗ ಕತ್ತೆ ಹಾಲಿಗೆ ಮಾರ್ಕೆಟ್ ಇದೆಯ? ನೋಡೋಣ ಅನ್ನಿಸಿತು. ಊರೂರು ಸುತ್ತಾಡಿದರು. ಅವರಿವರನ್ನ ವಿಚಾರಿಸಿದರು. ಕೊನೆಗೆ ಸತ್ಯ ಸಂಗತಿ ಹೊರಬಿತ್ತು. ಸೌಂದರ್ಯ ವರ್ಧಕಗಳಿಗೆ ಕತ್ತೆ ಹಾಲನ್ನ ತಯಾರಕರು ಬಳಸುತ್ತಾರೆ!. ಅವರಿಗೆ ಕತ್ತೆ ಹಾಲು ಕರೆದು ಮಾರಿದರೆ ಸಾಕು!. ಅದರ ರೇಟು.30 ml ಗೆ ₹ 150.ಲೆಕ್ಕ ಹಾಕಿದರು. ಕಂಪನೆಗಳಿಗೆ ವರ್ಷಕ್ಕೆ ಎಷ್ಟು ಲೀಟರ್ ಕತ್ತೆಯ ಹಾಲಿನ ಅಗತ್ಯವಿದೆ. ಅದನ್ನ ನಿಭಾಯಿಸಲು ಎಷ್ಟು ಕತ್ತೆಗಳನ್ನ ಸಾಕಬೇಕು.ಅವುಗಳ ನಿರ್ವಹಣೆ ,ಹಾಲು ಸಂಗ್ರಹ, ಪ್ಯಾಕಿಂಗ್ ಇತ್ಯಾದಿ ಲೆಕ್ಕಾಚಾರ ಮಾಡಿದರು.
ಇದರ ಜೊತೆಯಲ್ಲಿ ಶ್ರೀನಿವಾಸ್ ಮೊಲ ಮತ್ತು ಕಡಕ್ ನಾಥ್ ಕೋಳಿಗಳನ್ನು ಸಹ ಸಾಕಾಣಿಕೆ ಮಾಡುತ್ತಿದ್ದಾರೆ. ಪ್ರಸ್ತುತ ಶ್ರೀನಿವಾಸ್ ಅವರ ಫಾರ್ಮ್ ನಲ್ಲಿ 20 ಕತ್ತೆಗಳಿವೆ ಎನ್ನುವುದು ಇನ್ನೂ ಒಂದು ಗಮನಾರ್ಹ ಸಂಗತಿ.
ಅವರೀಗ ಸೌಂದರ್ಯವರ್ಧಕಗಳ ತಯಾರಿಕಾ ಕಂಪನಿಗಳಿಂದ ₹174 ಲಕ್ಷದ ಆರ್ಡರ್ ಪಡೆದಿದ್ದಾರಂತೆ.!
ಈಗ ಹೇಳಿ!, ದನ ಕಾಯೋವ್ನೆ.! ಕತ್ತೆ ಮಗನೆ, ಕತ್ತೆ ನನ್ ಮಗ್ನೆ ..ಕತ್ತೆ ಕಾಯೋಕೆ ಹೋಗ್ ಅಂತ ಬೈಯುವವರಿಗೆ ಆ ಬೈಗಳೆಲ್ಲಾ out of date ಆಗಿವೆ ಅಂತ ತಿಳಿಯ ಹೇಳಬೇಕಲ್ವೆ?