Monday, May 25, 2026
Monday, May 25, 2026

ಏಳುಮಲೆಯೊಡೆಯನಿಗೆ ₹10 ಕೋಟಿ ದಾಖಲೆ ದೇಣಿಗೆ

Date:

ತಿರುಪತಿ ವೆಂಕಟೇಶ್ವರನಿಗೆ ಭಕ್ತರು ಹಣ, ಚಿನ್ನ, ವಜ್ರ ವೈಡೂರ್ಯಗಳನ್ನು ದೇಣಿಗೆ ರೂಪದಲ್ಲಿ ನೀಡುವುದು ಸಾಮಾನ್ಯ. ಭಕ್ತರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೇ ಕಾಣಿಕೆಗಳನ್ನು ನೀಡುತ್ತಾರೆ. ಹೀಗೆ ತಮಿಳುನಾಡಿನ ಕುಟುಂಬ ಹಾಗೂ ಕಂಪನಿಗಳು ಒಟ್ಟು 10 ಕೋಟಿ ರೂಪಾಯಿ ದೇಣಿಗೆ ನೀಡಿ ದಾಖಲೆ ಬರೆದಿದೆ.

ವಿಶೇಷ ಅಂದರೆ 10 ಕೋಟಿ ರೂಪಾಯಿ ದೇಣಿಗೆ ಸಂಪೂರ್ಣ ನಗದು ಹಣವಾಗಿದೆ.
10 ಕೋಟಿ ರೂಪಾಯಿ ದೇಣಿಗೆಯಿಂದ ಒಂದು ದಿನದ ದೇಣಿಗೆ ಸಂಗ್ರಹದಲ್ಲಿ ತಿರುಪತಿಯಲ್ಲಿ ದಾಖಲೆ ನಿರ್ಮಾಣವಾಗಿದೆ. ಇದು ಒಂದು ದಿನದಲ್ಲಿ ಸಂಗ್ರಹವಾದ ಗರಿಷ್ಠ ದೇಣಿಗೆಯಾಗಿದೆ ಎಂದು ತಿರಮಲ ಟ್ರಸ್ಟ್ ಹೇಳಿದೆ.

ತಮಿಳುನಾಡಿನ ತಿರುವೇನಲ್ಲಿಯ ಗೋಪಾಲ ಕೃಷ್ಣನ್ ಎಂಬವರರು 7 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಇನ್ನು ಖಾಸಗಿ ಕಂಪನಿಗಳು 3 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಹೀಗೆ ಒಂದು ದಿನ 10 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. 10 ಕೋಟಿ ರೂಪಾಯಿ ದೇಣಿಗೆಯೂ ತಮಿಳನಾಡಿನ ತಿರುವೇನಲ್ಲಿಯಿಂದಲೇ ಬಂದಿದೆ ಎನ್ನುವುದು ವಿಶೇಷ.

10 ಕೋಟಿ ರೂಪಾಯಿ ದೇಣಿಗೆ ನೀಡಿದ ದಿನದ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆಯನ್ನು ಇನ್ನೂ ಲೆಕ್ಕ ಹಾಕಿಲ್ಲ. ಇವೆಲ್ಲ ಒಟ್ಟಗೂಡಿಸಿದರೆ ಮತ್ತೊಂದು ದಾಖಲೆ ನಿರ್ಮಾಣವಾಗೋದರಲ್ಲಿ ಯಾವುದೇ ಅನುಮಾನವಿಲ್ಲ. ತಮಿಳುನಾಡಿನ ಉದ್ಯಮಿ ಕುಟುಂಬ 10 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಟ್ರಸ್ಟ್ ಹೇಳಿದೆ.

ಇತ್ತೀಚೆಗೆ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ದೇಣಿಗೆ ಸಂಗ್ರಹ, ಕಾಣಿಕೆ ಸಂಗ್ರಹದಲ್ಲೂ ಭಾರಿ ಏರಿಕೆಯಾಗಿದೆ. ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ದೇಣಿಗೆ ರೂಪದಲ್ಲಿ, ಕಾಣಿಕೆ ರೂಪದಲ್ಲಿ, ಸೇವೆ ರೂಪದಲ್ಲಿ ಸಲ್ಲಿಸುತ್ತಾರೆ ಎಂದು ಟ್ರಸ್ಟ್ ಹೇಳಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dinesh Gundu Rao ಎಬೊಲಾ ಸೋಂಕು ಬಾರದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ.- ದಿನೇಶ್ ಗುಂಡೂರಾವ್

Dinesh Gundu Rao ಎಬೋಲಾ ಸೋಂಕು ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ...

Madhu Bangarappa ಶಿವಮೊಗ್ಗಕ್ಕೆ ಜೂನ್ 1 ರಂದು ಸೀಎಮನ ಭೇಟಿ: ಮಧು ಬಂಗಾರಪ್ಪ ಅವರಿಂದ ಪೂರ್ವಸಿದ್ಧತೆ ಪರಿಶೀಲನೆ

Madhu Bangarappa ಜೂನ್ 01 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ನೆರವೇರಿಸಲಿರುವ...

Madhu Bangarappa ಜಿಲ್ಲಾ ಪ್ರಗತಿ ಪರಿಶಿಲನಾ ಸಭೆ. ವಿವಿಧ ಸಮಸ್ಯೆಗಳ ಬಗ್ಗೆ ಪಕ್ಷಾತೀತ ನಿರ್ಣಯ- ಮಧು ಬಂಗಾರಪ್ಪ.

Madhu Bangarappa ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ...

CM Siddharamaiah ಸಮಗ್ರ ಅಭಿವೃದ್ಧಿಗೆ ನಾವು ಮುಂದಡಿ ಇಟ್ಟಿದ್ದೇವೆ- ಸಿದ್ಧರಾಮಯ್ಯ

CM Siddharamaiah ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ,...