ಪ್ರಧಾನಿ ಮೋದಿ ಸರ್ಕಾರದ ಅನೇಕ ಯೋಜನೆಗಳಲ್ಲಿ ಒಂದಾದ ಬುಲೆಟ್ ಟ್ರೈನ್ ಗೆ ಈಗ ಒಳ್ಳೆಯ ಕಾಲ ಕೂಡಿ ಬಂದಿದೆ.
ಅದೇನು ಅಂದ್ರೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಲೆಟ್ ಟ್ರೈನ್ ದರವನ್ನು ಫಸ್ಟ್ ಎಸಿಗೆ ಸಮನಾಗಿ ಇರಿಸಲು ಸೂಚನೆ ನೀಡಿದ್ದಾರೆ.
ಬಾಡಿಗೆ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೂ, ಇದು ಜನರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ ಎಂದು ತಿಳಿಸಿದ್ದಾರೆ.
ಇದಕ್ಕಾಗಿ, ಫಸ್ಟ್ ಎಸಿಯ ಆಧಾರದ ಮೇಲೆ ಬುಲೆಟ್ ಟ್ರೈನ್ ದರ ನಿಗದಿ ಮಾಡಲಾಗುತ್ತಿದೆ. ಇದು ತುಂಬಾ ಜಾಸ್ತಿ ದರವೇನಿಲ್ಲ, ವಿಮಾನ ದರಕ್ಕಿಂತ ಕಡಿಮೆಯಿರುತ್ತದೆ. ಆದರೆ, ಇಯ್ಲಿ ಸಿಗುವ ಸೌಲಭ್ಯಗಳು ಉತ್ತಮವಾಗಿರುತ್ತವೆ. ಯೋಜನೆ ಪೂರ್ಣಗೊಂಡ ನಂತರ ಬಾಡಿಗೆ ನಿಗದಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಅಶ್ವಿನಿ ವೈಷ್ಣವ್ ಅವರು ಬುಲೆಟ್ ರೈಲು ಯೋಜನೆಗೆ ಭೇಟಿ ನೀಡಿ, ಮುಂಬೈ, ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆ ಪೂರ್ಣಗೊಂಡ ನಂತರವೇ 2ನೇ ಹೈಸ್ಪೀಡ್ ರೈಲು ಯೋಜನೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಈ ನಿಟ್ಟಿನಲ್ಲಿ ಉತ್ತಮ ಪ್ರಗತಿ ಕಾಣುತ್ತಿರುವುದರಿಂದ 2026ರಲ್ಲಿ ಗುಜರಾತ್‌ನ ಸೂರತ್ ಹಾಗೂ ಬಿಲಿಮೊರಾ ನಡುವೆ ದೇಶದ ಮೊದಲ ಬುಲೆಟ್ ರೈಲು ಓಡಿಸುವ ಗುರಿಯನ್ನು ಸಾಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಅಹಮದಾಬಾದ್,ಮುಂಬೈ ಬುಲೆಟ್ ರೈಲು ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ಸೂರತ್‌ಗೆ ಬಂದಿದ್ದರು.
2026 ರಲ್ಲಿ ಸೂರತ್ ಹಾಗೂ ಬಿಲಿಮೋರಾ ನಡುವೆ ಮೊದಲ ಬುಲೆಟ್ ರೈಲು ಓಡಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದರಲ್ಲಿ ಉತ್ತಮ ಪ್ರಗತಿ ಕಾಣುತ್ತಿದ್ದೇವೆ, ಅಷ್ಟರೊಳಗೆ ರೈಲು ಓಡಿಸುವ ಕಾರ್ಯವನ್ನು ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.