Tuesday, August 25, 2026
Tuesday, August 25, 2026

ಸರ್ಕಾರಿ ಸಿಬ್ಬಂದಿಗೆ ಷಾಕ್ ನೀಡುತ್ತಿರುವ ಪಂಜಾಬ್ ಸಿಎಂ ಮಾನ್

Date:

ಜೈಲುಗಳಲ್ಲಿ ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಲು ಪಂಜಾಬ್ ಸರ್ಕಾರ ಮುಂದಾಗಿದೆ.

ಕೈದಿಗಳ ಬಳಿ ಮೊಬೈಲ್​ ಸೇರಿ ಯಾವುದೇ ವಸ್ತುಗಳು ಕಂಡ ಬಂದರೆ ಜೈಲಿನ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದೆ. ಇದರಲ್ಲಿ ಈಗ ಫರೀದ್‌ಕೋಟ್ ಜೈಲಿನ ಅಧೀಕ್ಷಕನ ತಲೆ ತಂಡವಾಗಿದೆ.

ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಮ್​ ಆದ್ಮಿ ಸರ್ಕಾರವು ಮಾರ್ಚ್ 16ರಿಂದ ಮೇ 10ರವರೆಗೆ ಜೈಲುಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದೆ. ಈ ಕಾರ್ಯಾಚರಣೆಯಲ್ಲಿ 710 ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ನಡುವೆ ಫರೀದ್‌ಕೋಟ್ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಕೈದಿಯೊಬ್ಬನ ವಿಡಿಯೋ ವೈರಲ್​ ಆಗಿತ್ತು. ಹೀಗಾಗಿ ಜೈಲಿನ ಅಧೀಕ್ಷಕ ಜೋಗಿಂದರ್ ಪಾಲ್ ಅವರನ್ನು ಅಮಾನತುಗೊಳಿಸಲಾಗಿದೆ.

ಈ ಬಗ್ಗೆ ಸ್ವತಃ ಕಾರಾಗೃಹ ಸಚಿವ ಹರ್ಜೋತ್ ಬೈನ್ಸ್ ಟ್ವೀಟ್​ ಮಾಡಿದ್ದು, ‘ಈಗಾಗಲೇ ಆಪ್​ ಸರ್ಕಾರ ಜೈಲುಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಲ್ಲಿಸಲು ಕಟ್ಟುನಿಟ್ಟಿನ ಆದೇಶ ನೀಡಿದೆ ಎಂದು ತಿಳಿಸಿದ್ದಾರೆ.

ಜೈಲಿನಲ್ಲಿ ಕೈದಿಯ ವಿಡಿಯೋ ವೈರಲ್ ಆದ ಪ್ರಕರಣ ಸಂಬಂಧ ಜೈಲ್ ಸೂಪರಿಂಟೆಂಡೆಂಟ್​ನ್ನು ಅಮಾನತುಗೊಳಿಸಲಾಗಿದೆ.

ಎರಡು ದಿನಗಳ ಹಿಂದೆಯಷ್ಟೇ ಪಂಜಾಬ್​​ ಸಿಎಂ ಭಗವಂತ್ ಮಾನ್ ಅವರು ಕಮಿಷನ್​ ವಿಚಾರ ಸದ್ದು ಮಾಡ್ತಿದ್ದಂತೆ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಸಂಪುಟದಿಂದ ದಿಢೀರ್ ಕಿತ್ತಾಕಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...