Tuesday, December 9, 2025
Tuesday, December 9, 2025

ಮಳೆ ಹಾವಳಿಗೆ ರಾಜ್ಯದ ನಾನಾ ಕಡೆ ಜನರ ಸಾವು ಮತ್ತು ಆಸ್ತಿ ಜಖಂ

Date:

ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ.

ಹಲವು ಪ್ರದೇಶಗಳಿಗೆ ನೀರು ನುಗ್ಗಿ ಬದುಕು ದುರ್ಭರವಾಗಿದೆ. ಮಳೆಯಿಂದಾಗಿ ರಾಜ್ಯದಲ್ಲಿ ಶುಕ್ರವಾರ ನಾಲ್ವರು ಅಸುನೀಗಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ತುದೂರು ಗ್ರಾಮದಲ್ಲಿ ಗದ್ದೆಯ ಹೊಂಡಕ್ಕೆ ಬಿದ್ದು ಶಂಕರ್‌ ಬಿನ್‌ ಲಿಂಗಾನಾಯ್ಕ (53) ಮೃತಪಟ್ಟಿದ್ದಾರೆ.

ಶಿವಮೊಗ್ಗದ ಆರ್‌ಎಂಎಲ್‌ ನಗರದ ರಾಜ ಕಾಲುವೆಯ ಮಳೆ ನೀರಿನಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿದೆ.

ಮುಂಡರಗಿ ಬಳಿ ಹಳ್ಳದಲ್ಲಿ ಟಿಪ್ಪುಸುಲ್ತಾನ ಅಕ್ಬರಸಾಬ ದೊಡ್ಡಮನಿ (28) ಎಂಬುವರು ಬೈಕ್‌ ಸಮೇತ ಕೊಚ್ಚಿ ಹೋಗಿದ್ದಾರೆ. ಕುಮಟಾದ ಗುಡೇ ಅಂಗಡಿಯಲ್ಲಿ ನೀರಿನ ಪಂಪ್‌ ಸ್ವಿಚ್‌ ಹಾಕಲು ಹೋದ ಸುಮಾ ಎಂಬ ಮಹಿಳೆ ವಿದ್ಯುತ್‌ ಶಾಕ್‌ನಿಂದ ಮೃತಪಟ್ಟಿದ್ದಾರೆ.

ಗಂಗಾವಳಿ, ವರದಾ, ಘಟಪ್ರಭಾ ಸೇರಿ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ತೀರ ಪ್ರದೇಶಗಳಲ್ಲಿ ಮತ್ತೆ ನೆರೆ ಭೀತಿ ಎದುರಾಗಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನಲ್ಲಿ 5 ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.

ಹೇಮಾವತಿ ತುಂಗಾ, ಭದ್ರಾ, ಮಲಪ್ರಭಾ ನದಿಗಳ ಒಳ ಹರಿವು ಹೆಚ್ಚಾಗಿದ್ದರಿಂದ ಆತಂಕ ಆರಂಭವಾಗಿದೆ. ಧಾರವಾಡ ಜಿಲ್ಲೆಯ ಬೆಣ್ಣಿ ಮತ್ತು ಗೂಗಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಮೈಸೂರು, ಹಾಸನ,ಕೊಪ್ಪಳ, ಮಂಡ್ಯ ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಮನೆಗಳು, ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಧಾರವಾಡ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ಎರಡು ದಿನಗಳಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಉತ್ತರ ಕನ್ನಡದ ಕರಾವಳಿ ಮತ್ತು ಘಟ್ಟದ ಮೇಲಿನ ತಾಲೂಕುಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ.
ಸಿಎಂ ತವರು ಹಾವೇರಿ ಜಿಲ್ಲೆಯಲ್ಲಿ ಒಂದೇ ದಿನ 87 ಮನೆಗಳು ಧರೆಗುರುಳಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 354 ವಿದ್ಯುತ್‌ ಕಂಬ, 45 ಟ್ರಾನ್ಸ್‌ಫಾರ್ಮರ್‌ ಹಾನಿಗೀಡಾಗಿವೆ. ಲಿಂಗನಮಕ್ಕಿ, ಟಿಬಿ ಡ್ಯಾಂಗೆ ಒಳ ಹರಿವು ಗಣನೀಯ ಪ್ರಮಾಣ ದಲ್ಲಿ ಹೆಚ್ಚಾಗಿದೆ.

ಮಳೆ ಮುಂದುವರಿದಿದ್ದರಿಂದ ಹಾವೇರಿ, ಗದಗ ಮತ್ತು ವಿಜಯನಗರ ಜಿಲ್ಲೆಯ ಕೊಟ್ಟೂರು, ಕೂಡ್ಲಗಿ, ಹಗರಿಬೊಮ್ಮನಹಳ್ಳಿ, ಹಡಗಲಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ಶನಿ ವಾರ ಕೂಡ ರಜೆ ಘೋಷಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

YADAV School Of Chess ಆನ್ ಲೈನ್ ಮೂಲಕಹಿಂದುಳಿದ & ಬಡಮಕ್ಕಳಿಗೆಒಂದು ತಿಂಗಳ ಚೆಸ್ ಕ್ರೀಡಾ ತರಬೇತಿ

YADAV School Of Chess ರಾಜೇಂದ್ರ ನಗರದಲ್ಲಿರುವ ಪ್ರತಿಷ್ಠಿತ ಯಾದವ ಸ್ಕೂಲ್...

Vallabhbhai Patel ಭ್ರಷ್ಟಾಚಾರವು ದೇಶದ ಆಂತರಿಕ ಶತ್ರು.- ಡಾ.ಹೆಚ್.ಬಿ.ಮಂಜುನಾಥ್

ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಸ್ಮರಣೆಯಲ್ಲಿ ಹಿರಿಯ ಪತ್ರಕರ್ತ ಡಾ ಎಚ್...

Shimoga News ಶಿವಮೊಗ್ಗದಲ್ಲಿ ವಿಮಾ ನಿಗಮದ ಉಪ ಕಚೇರಿ ತೆರೆಯಲು ಆಗ್ರಹ

Shimoga News ಶಿವಮೊಗ್ಗ ನಗರದಲ್ಲಿ ನೌಕರರ ರಾಜ್ಯ ವಿಮಾ ನಿಗಮದ ಉಪ...

K. S. Eshwarappa ಗುಣಮಟ್ಟದ ಚಹಾ ಸೇವೆಯ ” ಸ್ವಸ್ತಿಕ್ ಚಾಯ್” ಗೆ ಚಾಲನೆ.

K. S. Eshwarappa ನಗರದ ರಾಜೇಂದ್ರನಗರ, ಲಕ್ಷ್ಮೀ ಟಾಕೀಸ್ ಹಿಂಭಾಗ ಆಕ್ಸಿಸ್...