ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಕಾನ್ಸರ್ ಮತ್ತು ಇನ್ನಿತರ ಗಂಭೀರ ಕಾಯಿಲೆಗಳು ಇವೆ ಎನ್ನಲಾಗಿದೆ.
ರಷ್ಯಾದಲ್ಲಿ ದಂಗೆ ರೂಪುಗೊಳ್ಳುತ್ತಿದ್ದು, ಅವರ ಅಧಿಕಾರದ ಅವಸಾನಕ್ಕೆ ಈ ಯುದ್ಧವೇ ಕಾರಣ ಆಗಲಿದೆ ಯೂಕ್ರೇನ್ ಆರೋಪಿಸಿದೆ.
ರಷ್ಯಾದಲ್ಲಿ ಜನರು ದಂಗೆಯನ್ನು ತಡೆಯಲು ಯಾರಿದಂಲೂ ಸಾಧ್ಯವಾಗುವುದಿಲ್ಲ. ಇದಕ್ಕೆ ಪುತಿನ್ ಬಲಿಪಶು ಆಗುವುದು ಮತ್ತು ರಷ್ಯಾ ಪತನ ನಿಶ್ಚಿತ ಎಂದು ಯೂಕ್ರೇನ್ ಸೇನೆಯ ಬೇಹುಗಾರಿಕಾ ವಿಭಾಗದ ಮುಖ್ಯಸ್ಥ ಮೇಜರ್ ಜನರಲ್ ಕಿರಿಲೋ ಬುಡಾ-ನೋವ್ ಹೇಳಿದ್ದಾರೆ.
ಈ ಯುದ್ಧವು ಆಗಸ್ಟ್ ಎರಡನೇ ವಾರದಲ್ಲಿ ನಿರ್ಣಾಯಕ ಹಂತ ತಲುಪುವ ಸಾಧ್ಯತೆ ಇದೆ. ಈ ವರ್ಷಾಂತ್ಯಕ್ಕೆ ಸಕ್ರಿಯ ಸಮರ ಕೊನೆಯಾಗಲಿದೆ. ಡಾನ್ಬಾಸ್, ಕ್ರಿಮಿಯಾ ಸೇರಿ ನಮ್ಮೆಲ್ಲ ಪ್ರದೇಶಗಳ ಮೇಲೆ ಪಾರಮ್ಯ ಸಾಧಿಸಲಿದ್ದೇವೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಡೊನೆಟ್ಸ್ಕ್ ಪ್ರಾಂತ್ಯದ ಕೈಗಾರಿಕಾ ಪ್ರದೇಶಗಳಿಗೆ ಪೂರೈಕೆಯ ಮಾರ್ಗವನ್ನು ನಾಶ ಮಾಡಲು ಮಾರ್ಟರ್ ದಾಳಿಯನ್ನು ರಷ್ಯಾ ಆರಂಭಿಸಿದೆ ಎಂದು ತಿಳಿಸಿದೆ.
ಖಾರ್ಕಿವ್ನಿಂದ ಹಿಂದೆ ಸರಿದ ರಷ್ಯಾ ಪಡೆ
ಯೂಕ್ರೇನ್ ಎರಡನೇ ಅತಿ ದೊಡ್ಡ ನಗರ ಖಾರ್ಕಿವ್ ಮೇಲೆ ಒಂದು ವಾರ ಬಾಂಬ್ ಹಾಕಿ, ಅದನ್ನು ಸುತ್ತುವರಿದಿದ್ದ ರಷ್ಯಾ ಸೇನೆ ಈಗ ಹಿಂದೆ ಸರಿಯುತ್ತಿದೆ ಎಂದು ತಿಳಿದುಬಂದಿದೆ.