Wednesday, December 17, 2025
Wednesday, December 17, 2025

ನಮಾಮಿ ಶಂಕರಂ

Date:

ಜಗದ್ಗುರು ಶಂಕರಾಚಾರ್ಯ’ ಎಂದೂ ಕರೆಯಲ್ಪಡುವ ಆದಿ ಶಂಕರಾಚಾರ್ಯರ ಜನ್ಮದಿನವಿಂದು. ಆದ್ದರಿಂದ ಇಂದು ಶಂಕರ ಜಯಂತಿಯನ್ನು ಆಚರಿಸಲಾಗುತ್ತದೆ.

ಭಗವಾನ್ ಶಂಕರಾಚಾರ್ಯರು ವೈಶಾಖ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಜನಿಸಿದರು. ಆದಿ ಗುರು ಶಂಕರಾಚಾರ್ಯರು ಕೇರಳದ ಕಾಲಡಿ ಗ್ರಾಮದಲ್ಲಿ ಶಿವಗುರು ನಾಮ್ ಪುದ್ರಿ ಮತ್ತು ವಿಶಿಷ್ಟ ದೇವಿ ಎಂಬ ಬ್ರಾಹ್ಮಣ ದಂಪತಿಗಳಿಗೆ ಜನಿಸಿದರು.

ಮಗನನ್ನು ಪಡೆಯಲು ಶಿವಗುರುಗಳು ತಮ್ಮ ಪತ್ನಿಯೊಂದಿಗೆ ಶಿವನನ್ನು ಆರಾಧಿಸಿದ್ದರು. ಇದರ ನಂತರ, ಶಿವನು ಸಂತೋಷಪಟ್ಟನು ಮತ್ತು ಅವನಿಗೆ ಪುತ್ರ ವರವನ್ನು ನೀಡಿದನು. ಆದರೆ ಮಗುವಿಗೆ ಅಲ್ಪಾಯುಷ್ಯವಿರುತ್ತದೆ ಎನ್ನುವ ಷರತ್ತನ್ನು ನೀಡಿದನು ಎಂಬ ಪ್ರತೀತಿ ಇದೆ.

ಕೇವಲ 7 ವರ್ಷ ವಯಸ್ಸಿನಲ್ಲಿ, ಆದಿ ಶಂಕರಾಚಾರ್ಯರು ಸನ್ಯಾಸಿ ಜೀವನಕ್ಕೆ ಕಾಲಿಟ್ಟರು. 2 ನೇ ವಯಸ್ಸಿನಲ್ಲಿ, ಅವರು ವೇದಗಳು ಮತ್ತು ಉಪನಿಷತ್ತುಗಳ ಜ್ಞಾನವನ್ನು ಹೊಂದಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಜೀವನದಲ್ಲಿ ಹಲವಾರು ಯಶಸ್ಸುಗಳನ್ನು ಗಳಿಸಿದ ಅವರು ಯಶಸ್ಸಿನ ಹಿಂದೆ ತಾಯಿಯ ಕೈವಾಡವಿದೆ ಎಂಬುದನ್ನು ದೃಢವಾಗಿ ನಂಬಿಕೊಂಡಿದ್ದರು.

ಶಂಕರಾಚಾರ್ಯರಿಗೆ ಜಗದ್ಗುರುವಾಗಲು ಅವರ ತಾಯಿಯೇ ದಾರಿ ಮಾಡಿಕೊಟ್ಟರು. ಅವರು ಕೇವಲ 32 ವರ್ಷ ವಯಸ್ಸಿನವರಾಗಿದ್ದಾಗ ನಿಧನರಾದರು. ಅವರು ಜೀವಿಸಿದ ಅಲ್ಪಾವಧಿಯಲ್ಲೆ ಅವರು ನೀಡಿದ ಕೊಡುಗೆ ಅಪಾರವಾದದ್ದು..

ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಶ್ರೇಷ್ಠ ಮಹಾಪುರಷರೆಂದು ಗುರುತಿಸಲ್ಪಟ್ಟವರಲ್ಲಿ ಶ್ರೀ ಶಂಕರಾಚಾರ್ಯರು ಪ್ರಮುಖರು. ಪ್ರಾಚೀನ ಕಾಲದ ಸಂರ್ಭದಲ್ಲಿ ಪ್ರಯಾಣ ಎಂಬುದು ಕಷ್ಟಕರವಾಗಿತ್ತು. ಆ ಪರಿಸ್ಥಿತಿಯಲ್ಲಿಯೇ ದೇಶಾದ್ಯಂತ ಸಂಚರಿಸಿ ಜನಮನ ಗೆದ್ದರು. ಸನಾತನ ಧರ್ಮ ಮತ್ತು ರಾಷ್ಟ್ರೀಯ ಏಕತೆಗೆ ಭಾರೀ ಅಪಾಯ ಬಂದಿದ್ದ ಕಾಲಘಟ್ಟದಲ್ಲಿ ಹಾಗೂ ಅಂತಹ ದುಃಸ್ಥಿತಿಯ ಸಂದರ್ಭದಲ್ಲಿ ದೇಶವನ್ನು ಸಂರಕ್ಷಿಸಿ, ಧರ್ಮ ಸಂಸ್ಥಾಪನೆ ಮಾಡಲು ಪರಮೆಶ್ವರನೇ ಧರೆಗಿಳಿದು ಬರಬೇಕಾಯಿತು. ಅಂತಹ ಪರಮಾವತಾರವೇ ಶ್ರೀಶಂಕರರು.

ಶ್ರೀ ಆದಿ ಶಂಕರಾಚಾರ್ಯರು ಒಬ್ಬ ಮಹಾನ್ ದಾರ್ಶನಿಕನಲ್ಲದೆ, ಅವರು ಒಬ್ಬ ಮಹಾನ್ ಕವಿಯೂ ಆಗಿದ್ದರು ಮತ್ತು ಅವರ ಜೀವಿತಾವಧಿಯಲ್ಲಿ ಹಲವಾರು ಭಕ್ತಿ ಪ್ರಾರ್ಥನೆಗಳನ್ನು ರಚಿಸಿದರು. ಸೌಂದರ್ಯ ಲಹರಿ, ನಿರ್ವಾಣ ಶಾಲ್ಕಂ ಮತ್ತು ಶಿವಾನಂದ ಲಹರಿ ಅವರ ಗಮನಾರ್ಹ ಸಂಯೋಜನೆಗಳಾಗಿವೆ. ಅಷ್ಟೇ ಅಲ್ಲ, ಆದಿ ಶಂಕರರು ಉಪನಿಷತ್ತುಗಳ, ಭಗವದ್ಗೀತೆ ಮತ್ತು ಬ್ರಹ್ಮ ಸೂತ್ರಗಳ ಬಗ್ಗೆ ತಮ್ಮ ತಿಳುವಳಿಕೆಯನ್ನು ಬರೆದಿದ್ದಾರೆ. ದ್ವಾರಕಾ, ಕಾಶ್ಮೀರ, ಶೃಂಗೇರಿ ಮತ್ತು ಪುರಿಯಲ್ಲಿ ನೆಲೆಗೊಂಡಿರುವ ಪ್ರಮುಖ ಮಠಗಳನ್ನು ಭಾರತದಲ್ಲಿ ನಿರ್ಮಿಸಿದ ಕೀರ್ತಿ ಶ್ರೀ ಶಂಕರಾಚಾರ್ಯರಿಗೆ ಸಲ್ಲುತ್ತದೆ.
ಶಂಕರಾಚಾರ್ಯರನ್ನು ಶಿವನ ಅವತಾರವೆಂದು ಪರಿಗಣಿಸಲಾಗುತ್ತದೆ.

ನಾವೆಲ್ಲರೂ ಶ್ರೀ ಆದಿ ಶಂಕರಚಾರ್ಯರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸೋಣ..

ಹರ-ಲೀಲಾವತಾರಾಯ ಶಂಕರಾಯ ಪರೌಜಸೇ|
ಕೈವಲ್ಯ ಕಲನಾ ಕಲ್ಪತರವೇ ಗುರವೇ ನಮಃ||
ವಕ್ತಾರಮಾಸಾದ್ಯ ಯಮೇವ ನಿತ್ಯಾ ಸರಸ್ವತೀ ಸ್ವಾರ್ಥಸಮನ್ವಿತಾ ಸೀತ್||
ನಿರಸ್ತ ದುಸ್ತರ್ಕ ಕಳಂಕಪಂಕಂ ನಮಾಮಿ ತಂ ಶಂಕರಮರ್ಚಿತಾಂಘ್ರಿ||
ಶ್ರುತಿ-ಸ್ಮೃತಿ-ಪುರಾಣಾನಾಂ ಆಲಯಂ ಕರುಣಾಲಯಂ|
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ||

“ಶ್ರೀ ಶಂಕರಾಚಾರ್ಯ ವರ್ಯಂ”

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...