Thursday, December 18, 2025
Thursday, December 18, 2025

ದಮನಿತರನ್ನ ಮುಖ್ಯವಾಹಿನಿಗೆ ತಂದವರು ಬಸವಣ್ಣ-ಬೋರಲಿಂಗಯ್ಯ

Date:

ಸಮಾಜದ ದಮನಿತ ಸಮುದಾಯಗಳನ್ನು ಒಗ್ಗೂಡಿಸಿ ಮುಖ್ಯವಾಹಿನಿಗೆ ತಂದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅವರುಗಳ ಅಗತ್ಯವನ್ನು ಮನಗಾಣಿಸುವ ಮೂಲಕ ಚಾರಿತ್ರಿಕ ಕ್ರಾಂತಿಕಾರಿ ಚಳುವಳಿಗೆ ಕಾರಣಕರ್ತರಾದ ಬಸವಣ್ಣ ನಿಜವಾದ ಅರ್ಥದಲ್ಲಿ ದಾರ್ಶನಿಕರಾಗಿದ್ದರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹಿ. ಚಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜ ಶಾಸ್ತ್ರ ವಿಭಾಗದ ಶ್ರೀ ಬಸವೇಶ್ವರ ಅಧ್ಯಯನ ಪೀಠದ ವತಿಯಿಂದ ಗುರುವಾರ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮ ಮತ್ತು ಬಸವ ತತ್ವ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಹನ್ನೆರಡನೆಯ ಶತಮಾನದಲ್ಲಿ ವಚನ ಕ್ರಾಂತಿಯ ಮೂಲಕ ಕಾಯಕ ಜೀವಿಗಳನ್ನು ಒಗ್ಗೂಡಿಸಿ ಅನುಭವ ಮಂಟಪವನ್ನು ಕಟ್ಟುವ ಮೂಲಕ ನಾಡಿನ ಚರಿತ್ರೆಗೆ ಹೊಸ ತಿರುವು ಕೊಟ್ಟರು. ದೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಒಕ್ಕಲಿಗ ಮುತ್ತಯ್ಯ, ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಹೀಗೆ ಅಲಕ್ಷಿತ ಸಮುದಾಯದ ಉಪಕಸುಬುಗಳನ್ನು ಮಾಡುವ ಕಾಯಕ ಜೀವಿಗಳಿಗೆ ಶಿವಶರಣರೆಂಬ ಘನತೆ ದಕ್ಕಿಸಿಕೊಟ್ಟ ಕ್ರಾಂತಿಕಾರಿ ನಾಯಕ ಬಸವಣ್ಣ ಎಂದರು.

ದೇವಭಾಷೆಯೆಂದು ಕರೆಯಿಸಿಕೊಳ್ಳುತ್ತಿದ್ದ ಸಂಸ್ಕೃತದಲ್ಲಿ ಸಾಹಿತ್ಯ ರಚನೆ ಮಾಡಿದರಷ್ಟೇ ಗೌರವ ದೊರಕುತ್ತಿದ್ದ ಕಾಲಘಟ್ಟದಲ್ಲಿ ಜಾನಪದ ಕಾವ್ಯಗುಣವನ್ನು ಅಳವಡಿಸಿಕೊಂಡ ಶ್ರೀಸಾಮಾನ್ಯನ ಸರಳಕನ್ನಡದಲ್ಲಿ ವಚನಗಳೆಂಬ ಹೊಸ ಪ್ರಕಾರವನ್ನು ಹುಟ್ಟುಹಾಕಿ ಶ್ರೇಷ್ಠ ಸಾಹಿತ್ಯ ರಚಿಸುವ ಮೂಲಕ ಕನ್ನಡ ಅಸ್ಮಿತೆಯನ್ನು ಶ್ರೀಮಂತಗೊಳಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲಬೇಕು ಎಂದು ಶ್ಲಾಘಿಸಿದರು.

ಶಿರಡಿ ಸಾಯಿಬಾಬಾ ಅವರಂತಹ ಸರಳವಾದ ಯತಿಗಳಿಗೆ ಚಿನ್ನದ ಅರಮನೆ ಕಟ್ಟುವ ಬೂಟಾಟಿಕೆಯ ಪ್ರಪಂಚವಿದು. ಕ್ರಾಂತಿಕಾರಿ ಯುಗಪುರುಷರನ್ನು ದೈವೀಕ ಸ್ವರೂಪಕ್ಕೆ ಏರಿಸಿ, ಆರಾಧನೆಗೆ ಸೀಮಿತಗೊಳಿಸಿ, ಗುಡಿಗುಂಡಾರಗಳಲ್ಲಿ ಬಂಧಿಸಿ, ಸಮಾಜವನ್ನು ಯಥಾಸ್ಥಿತಿಯಲ್ಲಿಡುವ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರಗಳ ನಡುವೆ ಬಸವ ತತ್ವ ಸರ್ವಕಾಲಕ್ಕೂ ಪ್ರಸ್ತುತ ಎಂದರು.

ನಂತರ ನಡೆದ ವಿಚಾರಗೋಷ್ಠಿಯಲ್ಲಿ ಡಾ. ಕುಮಾರ ಚಲ್ಯ, ಡಾ. ಗೋವಿಂದರಾಯ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯೆ ಡಾ. ಕಿರಣ್ ದೇಸಾಯಿ ಬಸವ ತತ್ವದ ವಿವಿಧ ಆಯಾಮಗಳ ಕುರಿತು ಮಾತನಾಡಿದರು. ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ವಿಭಾಗದ ಅಧ್ಯಕ್ಷ ಪ್ರೊ. ಎ. ರಾಮೇಗೌಡ, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಕೆ. ನವೀನ್ ಕುಮಾರ್, ಸಿಂಡಿಕೇಟ್ ಸದಸ್ಯ ರಮೇಶ್ ಬಾಬು, ಡಾ. ಗುರುಲಿಂಗಯ್ಯ, ಡಾ. ಅಂಜನಪ್ಪ, ಡಾ. ಹಸೀನಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...