Thursday, December 18, 2025
Thursday, December 18, 2025

ಬ್ಯಾಂಕ್ ಸಾಲದ ಬಡ್ಡಿ ದರದಲ್ಲಿ ಏರಿಕೆ

Date:

ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಳಿಕ ಬ್ಯಾಂಕ್​ ಸಾಲಗಾರರಿಗೆ ಬಡ್ಡಿ ಬರೆ ಎದುರಾಗಿದೆ. ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಪ್ರಮುಖ ಪಾಲಿಸಿ ದರ ಏರಿಕೆ ಘೋಷಿಸಿದೆ.

ಇದರಿಂದಾಗಿ ಎಲ್ಲ ರೀತಿಯ ಬ್ಯಾಂಕ್​ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದ್ದರೆ, ನಿಶ್ಚಿತ ಠೇವಣಿ ಇರಿಸುವವರಿಗೆ ಕೊಂಚ ಪ್ರಯೋಜನವಾಗಲಿದೆ ಎಂದು ತಿಳಿದುಬಂದಿದೆ.

ಆರ್​ಬಿಐ ಗವರ್ನರ್​ ಶಕ್ತಿಕಾಂತ ದಾಸ್​ ಅವರು ಸುದ್ದಿಗೋಷ್ಠಿ ನಡೆಸಿ ಈ ನಿರ್ಧಾರ ಪ್ರಕಟಿಸಿದರು. ಯೂಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿದ ಮೇಲೆ ಬದಲಾದ ಜಾಗತಿಕ ಸನ್ನಿವೇಶ ಅರ್ಥ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಪೂರೈಕೆ ಜಾಲದ ಮೇಲೆ ಅಡಚಣೆ ಉಂಟಾಗಿ ಹಣದುಬ್ಬರ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದರು.

ಬಡ್ಡಿ ದರ ಕೆಳಗಿನ ಹಂತದಿಂದ ಯೂರ್ಟನ್​ ತೆಗೆದುಕೊಂಡಾಗ ಸಾಮಾನ್ಯ ವಾಗಿ ಅಲ್ಪಾವಧಿ ಮತ್ತು ಮಧ್ಯಮಾವಧಿಯ ನಿಶ್ಚಿತ ಠೇವಣಿಗಳ ಬಡ್ಡಿದರ ಮೊದಲು ಏರಿಕೆಯಾಗುತ್ತದೆ. ದೀರ್ಘಾವಧಿ ನಿಶ್ಚಿತ ಠೇವಣಿ ಬಡ್ಡಿದರವು ಏರಿಕೆಯಾಗಲು ಸ್ವಲ್ಪ ಸಮಯ ಕಾಯಬೇಕಾಗಬಹುದು. ಹೀಗಾಗಿ ದೀರ್ಘಾವಧಿಯ ಠೇವಣಿಯಲ್ಲಿ ಹಣವನ್ನು ಕೂಡಿಡುವುದು ಸರಿಯಾದ ಕ್ರಮವಲ್ಲ. ಅದನ್ನು ನವೀಕರಿಸುವ ಸಮಯವಾಗಿದ್ದರೆ ಅಲ್ಪಾವಧಿಗೆ ಬದಲಾಯಿಸಲು ಇದು ಸರಿಯಾದ ಸಮಯ ಎನ್ನುತ್ತಾರೆ ಹೂಡಿಕೆ ಪರಿಣತರು.

ಆರ್​ಬಿಐ ರೆಪೋ ದರ, ಸಿಆರ್​ಆರ್​ ಏರಿಕೆ ಪ್ರಕಟಿಸಿದ ಬೆನ್ನಿಗೆ ಬಿಎಸ್​ಇ ಸೆನ್ಸೆಕ್ಸ್​ 1,306.96 ಅಂಶ (2.29%) ಕುಸಿದು 55,669.03 ಅಂಶದಲ್ಲಿ, ಎನ್​ಎಸ್​ಇ ನಿಫ್ಟಿ 50 ಸೂಚ್ಯಂಕ 391.50 ಅಂಶ (2.29%) ಕುಸಿದು 16,677.60 ಅಂಶದಲ್ಲಿ ದಿನದ ವಹಿವಾಟು ಮುಗಿಸಿವೆ.

ಆಟೋ, ಬ್ಯಾಂಕ್​, ಎ​ಎಂಸಿಜಿ, ಪವರ್​, ಮೆಟಲ್​, ರಿಯಾಲ್ಟಿ, ಹೆಲ್ತ್​ಕೇರ್​, ಕ್ಯಾಪಿಟಲ್​ ಗೂಡ್ಸ್​ ಸೂಚ್ಯಂಕಗಳು ಕೂಡ ಶೇ.1&3ರ ತನಕ ಕುಸಿತ ಕಂಡಿವೆ. ಬಿಎಸ್​ಇ ಲಿಸ್ಟೆಡ್​ ಕಂಪನಿಗಳ ಮಾರುಕಟ್ಟೆ ಬಂಡವಾಳ 6,27,359.72 ಕೋಟಿ ರೂ.ನಷ್ಟವಾಗಿದ್ದು 2,59,60,852.44 ಕೋಟಿ ರೂ.ಗೆ ತಲುಪಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...